ಕಲಬುರಗಿ: ಮಳೆಯಾದರೇನು – ಬಿಸಿಲಾದರೇನು ಸಹಾಯ ಮಾಡುವ ಇಚ್ಛಾಶಕ್ತಿ ಹೊಂದಿದವರಿಗೆ ಸೇವೆಯಲ್ಲಿಯೇ ತೃಪ್ತಿ ದೊರೆಯುವುದು. ನಮ್ಮ ಭಾಗದ ಸೇವೆಗೆ ಸದಾ ಸಿದ್ದರಾಗಿದ್ದಾನೆ ಎಂದು ಮಾಜಿ ಸಚಿವ ಹಾಲಿ ಶಾಸಕ ಪ್ರೀಯಾಂಕ್ ಖರ್ಗೆ ನುಡಿದರು.
ನಗರದ ಕಲಬುರ್ಗಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೊನಗುಂಟಾ ಅವರ ನೇತೃತ್ವದಲ್ಲಿ ಕೋವಿಡನಿಂದ ಬಳಲುತ್ತಿರುವ ಜಿಮ್ಸ್, ಬಸವೇಶ್ವರ ಹಾಗೂ ಇಎಸ್‌ಐ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಸಹಾಯಕರಿಗೆ ಮತ್ತು ಸಿಬ್ಬಂದಿಕರಿಗೆ ಲಾಕಡೌನ ಹಿನ್ನೆಲೆಯಲ್ಲಿ ದಿನನಿತ್ಯದ ೨೫ ದಿನದ ಈ ಊಟ ಹಾಗೂ ಮಿನರಲ್ ನೀರು ವಿತರಣಾ ಸೇವೆಗೆ ಚಾಲನೆ ನೀಡಿ ಮಾತನಾಡುತ್ತಾ ಅವರು, ಮಹಾ ಮಾರಿ ಕರೋನಾದ ೨ನೇ ಅಲೆಯಿಂದ ಲಾಕ್‌ಡೌನ್ ಆದಾಗಿನಿಂದಲೂ ಜನರು ಒಂದು ಹೊತ್ತಿನ ಊಟಕ್ಕೂ ಪರಿತಪಿಸುವಂತಾಗಿದೆ. ಇಂಹತ ಸಂದರ್ಭದಲ್ಲಿ ಊಟ ನೀರು ನೀಡುತ್ತಿರುವುದು ತುಂಬಾನೆ ಒಳ್ಳೆಯ ಕೆಲಸವಾಗಿದೆ. ಪ್ರತಿಯೊಬ್ಬರು ಬಡ ಕಾರ್ಮಿಕರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಬೇಕು ಎಂದು ಹೇಳಿದರು.
ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ಆಗಮಿಸಿದ್ದ ವೇಳೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರು ಜನರು ಕಾಯುತ್ತಿರುವುದನ್ನ ನೋಡಿ ಮಳೆಯಲ್ಲಿಯೇ ಮಳೆಯಲ್ಲೇ ನೆನೆದು ಊಟ, ನೀರು ಮತ್ತು ಬಾಳೆ ಹಣ್ಣು ವಿತರಿಸಲಾಯಿತು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೊನಗುಂಟಾ ಹೇಳಿದರು.
ಈ ಸಂದರ್ಭದಲ್ಲಿ ಪ್ರವೀಣ್ ಪಾಟೀಲ್ ಹರವಾ, ಕಿರಣ ದೇಶಮುಖ್, ಮಜರ ಆಲಂ ಖಾನ್, ಫಾರುಖ ಮನಿಯರ್, ರಾಜು ಕಪನೂರ್, ಸಂತೋ? ಬೆನ್ನೂರ್, ಈರಣ್ಣ ಝಳಕಿ, ಖೂಸರೋ ಜಾಗಿರ್ದಾರ್, ಪರಶುರಾಮ್ ನಾಟೇಕರ್, ಅಮರ್ ಶಿರವಾಳ ,ಅಶ್ವಿನ್ ಸಂಕ , ಸಚಿನ್ ಶಿರವಾಳ, ಸೈಯದ್ ರಕಿಬ್, ಅ?ದ್ ಖಾನ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಡಿಸಿಸಿ ನಾಯಕರು ಉಪಸ್ಥಿತರಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…