ಸಹಾಯ ಮಾಡುವ ಇಚ್ಛಾಶಕ್ತಿ ಹೊಂದಿದವರಿಗೆ ಸೇವೆಯಲ್ಲಿಯೇ ತೃಪ್ತಿ: ಶಾಸಕ ಪ್ರೀಯಾಂಕ್ ಖರ್ಗೆ

0
28

ಕಲಬುರಗಿ: ಮಳೆಯಾದರೇನು – ಬಿಸಿಲಾದರೇನು ಸಹಾಯ ಮಾಡುವ ಇಚ್ಛಾಶಕ್ತಿ ಹೊಂದಿದವರಿಗೆ ಸೇವೆಯಲ್ಲಿಯೇ ತೃಪ್ತಿ ದೊರೆಯುವುದು. ನಮ್ಮ ಭಾಗದ ಸೇವೆಗೆ ಸದಾ ಸಿದ್ದರಾಗಿದ್ದಾನೆ ಎಂದು ಮಾಜಿ ಸಚಿವ ಹಾಲಿ ಶಾಸಕ ಪ್ರೀಯಾಂಕ್ ಖರ್ಗೆ ನುಡಿದರು.

ನಗರದ ಕಲಬುರ್ಗಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೊನಗುಂಟಾ ಅವರ ನೇತೃತ್ವದಲ್ಲಿ ಕೋವಿಡನಿಂದ ಬಳಲುತ್ತಿರುವ ಜಿಮ್ಸ್, ಬಸವೇಶ್ವರ ಹಾಗೂ ಇಎಸ್‌ಐ  ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಸಹಾಯಕರಿಗೆ ಮತ್ತು ಸಿಬ್ಬಂದಿಕರಿಗೆ ಲಾಕಡೌನ ಹಿನ್ನೆಲೆಯಲ್ಲಿ ದಿನನಿತ್ಯದ ೨೫ ದಿನದ ಈ ಊಟ ಹಾಗೂ ಮಿನರಲ್ ನೀರು ವಿತರಣಾ ಸೇವೆಗೆ ಚಾಲನೆ ನೀಡಿ ಮಾತನಾಡುತ್ತಾ ಅವರು, ಮಹಾ ಮಾರಿ ಕರೋನಾದ ೨ನೇ ಅಲೆಯಿಂದ ಲಾಕ್‌ಡೌನ್ ಆದಾಗಿನಿಂದಲೂ ಜನರು ಒಂದು ಹೊತ್ತಿನ ಊಟಕ್ಕೂ ಪರಿತಪಿಸುವಂತಾಗಿದೆ. ಇಂಹತ ಸಂದರ್ಭದಲ್ಲಿ ಊಟ ನೀರು ನೀಡುತ್ತಿರುವುದು ತುಂಬಾನೆ ಒಳ್ಳೆಯ ಕೆಲಸವಾಗಿದೆ. ಪ್ರತಿಯೊಬ್ಬರು ಬಡ ಕಾರ್ಮಿಕರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಬೇಕು ಎಂದು ಹೇಳಿದರು.

Contact Your\'s Advertisement; 9902492681

ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ಆಗಮಿಸಿದ್ದ ವೇಳೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರು ಜನರು ಕಾಯುತ್ತಿರುವುದನ್ನ ನೋಡಿ ಮಳೆಯಲ್ಲಿಯೇ ಮಳೆಯಲ್ಲೇ ನೆನೆದು ಊಟ, ನೀರು ಮತ್ತು ಬಾಳೆ ಹಣ್ಣು ವಿತರಿಸಲಾಯಿತು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೊನಗುಂಟಾ ಹೇಳಿದರು.

ಈ ಸಂದರ್ಭದಲ್ಲಿ ಪ್ರವೀಣ್ ಪಾಟೀಲ್ ಹರವಾ, ಕಿರಣ ದೇಶಮುಖ್, ಮಜರ ಆಲಂ ಖಾನ್, ಫಾರುಖ ಮನಿಯರ್, ರಾಜು ಕಪನೂರ್, ಸಂತೋ? ಬೆನ್ನೂರ್, ಈರಣ್ಣ ಝಳಕಿ, ಖೂಸರೋ ಜಾಗಿರ್ದಾರ್, ಪರಶುರಾಮ್ ನಾಟೇಕರ್, ಅಮರ್ ಶಿರವಾಳ ,ಅಶ್ವಿನ್ ಸಂಕ , ಸಚಿನ್ ಶಿರವಾಳ, ಸೈಯದ್ ರಕಿಬ್, ಅ?ದ್ ಖಾನ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಡಿಸಿಸಿ ನಾಯಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here