ಅಪ್ಪ ನಿಮ್ಮ ಕಷ್ಟ ನಷ್ಟಗಳ ಬಗ್ಗೆನೂ ಅರಿವಿರಲಿಲ್ಲ ಹೇಗೆ ಕುಟುಂಬ ನಿರ್ವಹಣೆ ಮಾಡುವಿರಿ ಎಂದು ತಿಳಿದಿರಲಿಲ್ಲ ಆದ್ರೆ ಈ ಕರೋನ ಬಂದು ಲಾಕ್ ಡೌನ್ ಬಿದ್ದು ನೀವು ಏನು ನಿಮ್ಮ ಶ್ರಮ ಎಂತಹದು ಎಂದು ನಂಗೆ ತಿಳಿಯಿತು.
ಅಪ್ಪ ಈ ಲಾಕ್ ಡೌನ್ ಸಂದರ್ಭದಲ್ಲಿ ನಿಮ್ಮ ಜೊತೆ ಕಳೆದ ಒಂದೊಂದು ನೆನಪುಗಳು ಕೂಡ ನಂಗೆ ಪ್ರತಿಯೊಂದು ಸಂದರ್ಭದಲ್ಲಿ ಕಾಡತೋಡುಗುವಂತೆ ಮಾಡಿವೆ.ಜೀವನ ಎಂದರೇನು ಎಂಬುದನ್ನು ಕಲಿಸಿಕೊಟ್ಟ ನೀವು ಮುಂದೆ ಎಂತಹ ಸಂದಿಗ್ದ ಪರಿಸ್ಥಿತಿ ಬಂದರು ಕೂಡ ಹೇಗೆ ನಿಭಾಯಿಸಿಕೊಂಡು ಹೋಗಬೇಕು ಎಂದು ನಾನು ಈ ಲಾಕ್ ಡೌನ್ ಸಂದರ್ಭದಲ್ಲಿ ನಿಮ್ಮ ಜೊತೆಗೆ ಇದ್ದು ಕಲೆತಿರುವೆ ತಿಳಿದುಕೊಂಡಿರುವೆ ನನ್ನ ಅಪ್ಪ.
ಈ ಲಾಕ್ ಡೌನ್ ರಜೆ ದಿನಗಳಲ್ಲಿ ಅತ್ಯಂತ ಮುಖ್ಯವಾಗಿ ಕಂಡಿರುವುದು ಅದೇನೆಂದರೆ ನನ್ನ ತಂದೆಯಲ್ಲಿ ಅತೀಯಾದ ಸಿಟ್ಟು, ಅದಕ್ಕಿಂತ ಹೆಚ್ಚು ಗಂಭೀರತೆ, ಮೃದುತನ ಕೂಡ ಕಂಡಿರುವೇ. ತಂದೆಯ ಕೋಪ ವಿಪರೀತ ಆದ್ರೆ ಅಷ್ಟೇ ಮೃದುತನದ ಮನಸ್ಸು.
ಅಪ್ಪ ನಿಮ್ಮ ಕಷ್ಟ ನಷ್ಟಗಳ ಬಗ್ಗೆನೂ ಅರಿವಿರಲಿಲ್ಲ ಹೇಗೆ ಕುಟುಂಬ ನಿರ್ವಹಣೆ ಮಾಡುವಿರಿ ಎಂದು ತಿಳಿದಿರಲಿಲ್ಲ ಆದ್ರೆ ಈ ಕರೋನ ಬಂದು ಲಾಕ್ ಡೌನ್ ಬಿದ್ದು ನೀವು ಏನು ನಿಮ್ಮ ಶ್ರಮ ಎಂತಹದು ಎಂದು ನಂಗೆ ತಿಳಿಯಿತು.
ನನ್ನ ಅಪ್ಪ ಒಬ್ಬ ರೈತ ಅವರು ರೈತ ಎಂದು ಹೇಳಲು ನನಗೆ ತುಂಬಾ ಹೆಮ್ಮೆಯ ವಿಷಯ. ಒಬ್ಬ ರೈತರಾಗಿ ನಮನ್ನ ಇಷ್ಟು ಓದಿಸುವ ಮನಸ್ಸು ಹೊಂದಿರುವರು ಹೌದ ನಾನು ಇಷ್ಟು ಮುಂದುವರಿಯಲು ನನ್ನ ತಂದೆನೆ ನನಗೆ ಸ್ಫೂರ್ತಿ ಹಾಗೂ ಅವರೇ ನನ್ನ ಪ್ರಪಂಚ.
ಯಾವುದೇ ರೀತಿಯ ಒತ್ತಡ ಹೆರದೆ ನನ್ನ ಕನಸುಗಳಿಗೆ ಸದಾ ಕಣ್ಣ ಗಾವಲಾಗಿ ನಿಂತ ನನ್ನ ಬದುಕಿನ ಸ್ಫೂರ್ತಿ ನನ್ನ ಅಪ್ಪಾ.ಅಪ್ಪ ನೀವು ನಮಗಾಗಿ ಹರಿಸುವ ಒಂದೊಂದು ಬೆವರಿನ ಹನಿಯ ಋಣ ತೀರಿಸುವುದು ಹೇಗೆ ಎಂದು ತಿಳಿಯದು. ಆ ದೇವರು ನಮಗೆ ನೀಡಿರುವ ಅತ್ಯಮೂಲ್ಯವಾದ ಉಡುಗೊರ ನೀವು. ಆ ದೇವರಿಗೆ ತುಂಬು ಹೃದಯದ ಧನ್ಯವಾದ. ಏಕೆಂದರೆ ಇಂತಹ ಅಪ್ಪಾನನ್ನು ಪಡೆಯುವುದಕ್ಕೆ ನಾವು ಹೆಮ್ಮೆಪಡುವಂತಹ ಮಕ್ಕಳು ಎಂದು ನಿರ್ಭಯದಿಂದ ಭಾಷೆ ನೀಡುತ್ತೇನೆ.
ಯಾಕಂದ್ರೆ ಅವರು ಓದು ಬರಹ ಕಲಿತಿಲ್ಲ ಅಂದ್ರು ಕೂಡ ನನ್ನನ್ನು ಇಷ್ಟು ಓದಿಸುವ ಗುಣ ಹಾಗೂ ನನ್ನ ಅಪ್ಪ ನನ್ನನ್ನು ಒಬ್ಬ ಗಂಡು ಮಗುವಿನಂತೆ ಬೆಳಿಸಿದರು ನೀವೇ ಹೇಳಿ ಹಳ್ಳಿಯಲ್ಲಿ ಬೆಳೆದ ಒಂದು ಹೆಣ್ಣು ಮಗಳಿಗೆ ಇಷ್ಟೊಂದು ಸ್ವಾತಂತ್ರ ಸಿಗುತ್ತಾ ಅಂತ ಆದ್ರೆ ಆ ಅದೃಷ್ಟ ನನಗೆ ದೊರೆತಿದೆ ಅಂದ್ರೆ ನನ್ನ ಅಪ್ಪ ಎಲ್ಲರಂತೆ ಅಲ್ಲ ಅವರು ತುಂಬಾ ವಿಶೇಷವಾದ ಗುಣ ಹೊಂದಿದವರು.
ಅವರು ಎಷ್ಟೇ ಕಷ್ಟ ಇದ್ರೂ ಕೂಡ ನನ್ನ ಮಕ್ಕಳು ನಮ್ಮ ತರ ಬಿಸಿಲಿನಲ್ಲಿ ದುಡಿಯಬಾರದು ಹಾಗೂ ನಾಲ್ಕು ಜನರ ಮದ್ಯೆ ಇರಲಿ ದೊಡ್ಡ ವ್ಯಕ್ತಿಗಳಾಗಲಿ ಎಂಬ ಆಶೆ ಹೊಂದಿದ್ದ ನನ್ನ ತಂದೆ.
ಅಪ್ಪ ನಮ್ಮ ಪಾಲಿಗೆ ಮೊದಲು ನೀವೇ ದೇವರು ಅದರಲ್ಲೂ ನೀವು ಹೆತ್ತಿರುವ 4 ಮಕ್ಕಳಲ್ಲಿ ನನಗೆ ತುಂಬಾ ಪ್ರೀತಿ ತೋರಿಸುವರು ನನ್ನ ತಂದೆ ಹೌದು ನಮ್ಮ ಅಪ್ಪನ ಪ್ರೀತಿಯೇ ಅಂತಹದ್ದು. ಹಾಗಂತ ನನ್ನ ತಮ್ಮ ತಂಗಿಯರಿಗೂ ಕಾಳಜಿ ಇಂದ ಕಾಣುತ್ತಿರಲಿಲ್ಲ ಎಂದರ್ಥವಲ್ಲ, ಎಲ್ಲರಿಗೂ ಸರಿಸಾಮಾನದ ಪ್ರೀತಿಯನ್ನು ನೋಡುತ್ತಿದರು ಆದ್ರೆ ನನಗೆ ಸ್ವಲ್ಪ ಸ್ವಾತಂತ್ರ ಜಾಸ್ತಿ ನೀಡುತ್ತಿದ್ದರು.
ತಪ್ಪು ಮಾಡಿದರೆ ಗದುರಿಸಿ ತಿದ್ದಿ ತೀಡಿ ಬುದ್ದಿ ಹೇಳುವಿರಿ, ಶಿಕ್ಷೆ ನೀಡುವಿರಿ ಅದರ ಬಗ್ಗೆ ತಿಳಿಸಿ ಮನವರಿಕೆ ಮಾಡಿಕೊಡುವವರು ನಮ್ಮ ತಂದೆ. ಅಪ್ಪ ನೀವು ಎಷ್ಟೇ ನೋವಿದ್ದರೂ ಕೂಡ ಅದನೆಲ್ಲ ನಿಮ್ಮ ಮನಸ್ಸಿನಲ್ಲೇ ಇಟ್ಟುಕೊಂಡು ಅಮ್ಮ ಮತ್ತು ನಮ್ಮೆಲ್ಲರ ಜೊತೆಗೆ ನಗನಗುತ ಇರುವ ಸರಳ ಜೀವಿಯಾಗಿರುವ ನನ್ನ ತಂದೆ.ಎಷ್ಟೇ ಕಷ್ಟ ಬಂದರು ಕೂಡ ಎಲ್ಲವನ್ನು ಮೌನವಾಗಿಯೇ ನಮ್ಮೆಲ್ಲರ ಜವಾಬ್ದಾರಿಯನ್ನು ಹೊರುವಿರಿ.
ಮಳೆಬರಲಿ, ಚಳಿ ಇರಲಿ, ಗಾಳಿ ಇರಲಿ, ಬಿಸಿಲಿರಲಿ ಏನೇ ಇರಲಿ ಎಲ್ಲವನ್ನು ಸದಾ ನಗುನಗುತ ನಮಗಾಗಿ ಬೆವರು ಸುರಿಸಿದವರು ನೀವು. ಅಪ್ಪ ನೀವು ಕಷ್ಟದಲ್ಲಿ ಬೆಳೆದರೂ ಕೂಡ ರೈತರಾಗಿದ್ದರು ನಮ್ಮೆಲ್ಲರನ್ನು ನಿಮ್ಮ ಈ ಬಡತನದ ಪರಿಸ್ಥಿತಿಯಲ್ಲಿಯೇ ನನ್ನ ಮಕ್ಕಳು ನನ್ನಂತೆ ಬಿಸಿಲಿನಲ್ಲಿ ದುಡಿಯದೇ ನೆರಳಲ್ಲಿ ಒಂದು ಉನ್ನತವಾದ ಹುದ್ದೆಯಲ್ಲಿರಬೇಕು ಎಂದು ತಮ್ಮ ಕಷ್ಟ ಕಾರ್ಪಣ್ಯಗಳ ಮದ್ಯೆಯು ನಮ್ಮೆಲರನ್ನು ಓದಿಸುತಿರುವಿರಿ ನಿಮ್ಮ ಈ ಒಳ್ಳೆ ತನಕ್ಕೆ ನಾವೆಲ್ಲರೂ ಯಾವಾಗಲು ಚಿರಋಣಿ.
ಅದರಲ್ಲಿ ಮುಖ್ಯವಾಗಿ ನನ್ನನ್ನು ಒಬ್ಬ ಗಂಡು ಮಗುವಿನಂತೆ ಎಲ್ಲೆಂದರಲ್ಲಿ ಯಾವುದೇ ಸಂದರ್ಭದಲ್ಲಿ ನಾನು ನಿನ್ನ ಜೊತೆ ಇದ್ದೀನಿ ಎಂದು ವಿಶ್ವಾಸದಿಂದ ಹೇಳುತ್ತಾ ನನ್ನನ್ನು ಕಳುಸಿದ್ದೀರಿ ಹೌದು ನನ್ನ ತಂದೆಗೆ ನನ್ನ ಮೇಲೆ ಇದ್ದ ಅಪಾರ ನಂಬಿಕೆಯೇ ಇದಕ್ಕೆ ಮುಖ್ಯ ಕಾರಣ.
ಏನಂತ ಸಂದಿಗ್ದ ಪರಿಸ್ಥಿತಿ ಬಂದರು ಕೂಡ ಧೈರ್ಯ ಗೆಡದೆ ಇರು ಎಂದು ವಿಶ್ವಾಸ ದಿಂದ ಅನುಮತಿ ನೀಡುತ್ತಿರುವ ನೀವು, ಪ್ರತಿಯೊಬ್ಬ ತಂದೆಯರಿಗೆ ಒಂದು ಆಸೆ ಇರುತ್ತೆ ಅದೇನೆಂದರೆ ತಮ್ಮ ಮಕ್ಕಳು ತಾನು ಬಯಸಿದಂತೆ ಉತ್ತಮ ವ್ಯಕ್ತಿಗಳಾಗಿ ಬೆಳೆದರೆ ಆ ಸಾರ್ಥಕತೆ ಪ್ರತಿಯೊಬ್ಬ ತಂದೆಯ ಕಣ್ಣುಗಳಲ್ಲಿ ಕಾಣಬಹುದು ಎಂದು ಹೇಳಬಯಸುತ್ತೇನೆ
ನನ್ನ ತಂದೆಗೆ ಹೆಣ್ಣು ಮಕ್ಕಳೆಂದರೆ ಜೀವ, ಅಪ್ಪ ಎಂದರೆ ನಮಗೆ ಪ್ರಪಂಚ,ನಮ್ಮ ಪುಟ್ಟ ಪುಟ್ಟ ಆಶೆಗಳಿಗೋಸ್ಕರ ತನ್ನ ದೊಡ್ಡ ಕನಸುಗಳನ್ನು ದೂರವಿರಿಸಿ ನಮಗೇನು ಕಮ್ಮಿ ಇಲ್ಲದಂತೆ ಬೆಳೆಸಿ, ಕರುಳಿನ ಜೊತೆ ದೊಡ್ಡ ಸಂಬಂಧ ಬೆಸೆಯುವವರೇ ಈ ನನ್ನ ತಂದೆ.ಆದ್ರೆ ಹೆಣ್ಣು ಮಕ್ಕಳು ತಮ್ಮನ್ನು ಒಂದು ದಿನ ಬಿಟ್ಟು ಹೋಗುವ ಸಮಯ ಬಂದಾಗ ಅಪ್ಪದೇರು ತನ್ನೊಳಗೆ ಎಲ್ಲ ನೋವನ್ನು ನುಂಗಿ ನಗುವಿನಿಂದ ಕಳುಹಿಸುವವ ಮಹಾತ್ಮಾ ತಂದೆ.
ಒಟ್ಟಾರೆಯಾಗಿ ನಾನು ಈ ರಜೆ ದಿನಗಳಲ್ಲಿ ಕಲಿತ ಹೊಸ ಪಾಠ ಎಂದರೆ ಎಲ್ಲೇ ಹೋದರು ಹೇಗೆ ಇದ್ದರು ಯಾವ್ ಪರಿಸ್ಥಿತಿ ಬಂದರು ಧೈರ್ಯಗೆಡದೆ ಎಲ್ಲ ಸಂದರ್ಭಗಳು ಸರಳವಾಗಿ ಸ್ವೀಕರಿಸಿ ಅದನ್ನು ಅತ್ಯಂತ ಧೈರ್ಯಶಾಲಿಯಾಗಿ ನಿಭಾಯಿಸಿಕೊಂಡು ಹೋಗುದು ಹೇಗೆ ಎಂದು ಕಲಿಸಿಕೊಟ್ಟ ನನ್ನ ತಂದೆ.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…