ಕಲಬುರಗಿ: ಜೆಒಸಿಯಿಂದ ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ಸಿಬ್ಬಂದಿಗಳ ಸೇವಾ ಭದ್ರತೆ ಪಿಂಚಣಿ ಹಾಗೂ ಕೆಲವು ಇಲಾಖೆಗಳ ತೊಂದರೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ವೃತ್ತಿ (ಜೆಓಸಿ) ಇಲಾಖೆಯಿಂದ ವಿವಿಧ ಇಲಾಖೆಗಳಲ್ಲಿ ವಿಲೀನಗೊಮಡ ನೌಕರರ ಸಂಘದ ಅಧ್ಯಕ್ಷ ಮಲ್ಲಿನಾಥ ಪಿ. ಕಳಸ್ಕರ್ ಅವರ ನೇತೃತ್ವದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸರಕಾರದ ಅವಧಿಯಲ್ಲಿ ೨೦-೩೦ ವರ್ಷಗಳಿಂದ ಅಲ್ಪ ಸಂಭಾವನೆ ಪಡೆದು ನಿರಂತರ ಸೇವೆ ಸಲ್ಲಿಸಿದ ೩೩೦೦ ಸಿಬ್ಬಂದಿಯವರನ್ನು ಖಾಯಂಗೊಳಿಸಲಾಗಿದ್ದು, ಐದು ವರ್ಷ ಸೇವೆ ಪುರೈಸಿದ ೫೦೦ ಸಿಬ್ಬಂದಿಯನ್ನು ಖಾಯಂ ಮಾಡಲಾಗುತ್ತಿದ್ದು, ಮತ್ತು ಎಲ್ಲಾ ಸಿಬ್ಬಂದಿ ವರ್ಗದವರಿಗೆ ಸೇವಾ ಭದ್ರತೆ ಪಿಂಚಣೆ ಸಲುವಾಗಿ ತುರ್ತಾಗಿ ಸಭೆ ಕರೆದು ಮಾಹಿತಿ ಸಹ ತರಿಸಿಕೊಂಡು ಎಲ್ಲಾ ಸಿಬ್ಬಂದಿಗಳ ಬದುಕಿಗೆ ಬೆಳಕು ನೀಡಿದಕ್ಕಾಗಿ ವಿವಿಧ ಇಲಾಖೆಯ ವಿಲಿನಗೊಂಡ ಸಿಬ್ಬಂದಿಯವರು ಸರಕಾರಕ್ಕೆ ಚಿರ ಋಣಿಯಾಗಿರುತ್ತಾರೆ ಎಂದು ಹೇಳಿದರು.
ಆದರೆ ಅನೇಕ ಸಿಬ್ಬಂದಿಯವರು ನಿವೃತ್ತಿ ಹೊಂದಿದ್ದಾರೆ ನಿವೃತ್ತಿ ಅಂಚಿನಲ್ಲಿದ್ದಾರೆ ಕೆಲವು ಸಿಬ್ಬಂದಿ ಕರೋನಾದಿಂದಾಗಿ ಅನಾರೋಗ್ಯದಿಂದ ಬಳಲುತ್ತಿದ್ದು ಮರಣ ಹೊಂದಿದವರು ಇದ್ದಾರೆ ನಮ್ಮೆಲ್ಲರ ಸಿಬ್ಬಂದಿಗಳ ಸ್ಥಿತಿ ಚಿಂತಾಚನಕ ಪರಿಸ್ಥಿತಿಯನ್ನು ಸರಿಯಾಗಿ ಗಮನಿಸಿ ಸೇವಾ ಭದ್ರತೆ ಮತ್ತು ಪಿಂಚಣೆ ಮಾಡುವ ಕಾರ್ಯ ಮಾಡುತ್ತಿದ್ದಿರಿ ಇಷ್ಟೇಲ್ಲ ಕಾರ್ಯ ನಿರ್ವಹಿಸುತ್ತಿರುವ ಸರಕಾರ ಎಲ್ಲ ಸಚಿವರುಗಳು ಎಲ್ಲಾ ವಿಧಾನ ಪರಿಷತ್ ಸದಸ್ಯರು ಎಲ್ಲಾ ಶಾಸಕರು ಹಾಗೂ ಸಂಬಂಧಪಟ್ಟ ಮೇಲಾಧಿಕಾರಿಗಳು ನಮ್ಮ ಬೇಡಿಕೆಯನ್ನು ಆದಷ್ಟು ಬೇಗನೆ ಪೂರೈಸಬೇಕೆಂದು ಮನವಿ ಮಾಡಲಾಯಿತು ಎಂದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಗಂಗಾಧರ ಜಾಲಾದಿ, ಬಸವರಾಜ ಹಿರೇಮಠ, ಜಗನಾಥ ಮೋದಿ, ಶರಣಬಸಪ್ಪ ಪಾಟೀಲ್, ಕಾಶಿನಾಥ ಪಂಚಾಳ, ಪದ್ಮಾಬಾಯಿ.ಜಿ. ಶರಣಬಸಪ್ಪ ಸೇರಿದಂತೆ ಇನ್ನಿತರರು ಇದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…