ಬಿಸಿ ಬಿಸಿ ಸುದ್ದಿ

ದೈಹಿಕ ಮಾನಸಿಕ ಅಧ್ಯಾತ್ಮಿಕ ಅಭ್ಯಾಸಗಳು ಯೋಗ: ಹಿರಿಯ ಪತ್ರಕರ್ತ ವಾದಿರಾಜ ವ್ಯಾಸಮುದ್ರ

ಕಲಬುರಗಿ: ದೈಹಿಕ ಮಾನಸಿಕ ಮತ್ತು ಅಧ್ಯಾತ್ಮಿಕ ಅಭ್ಯಾಸಗಳು ಅಥವಾ ಶಿಸ್ತುಗಳ ಗುಂಪಿಗೆ ಯೋಗ ಎಂದು ಕರೆಯುತ್ತಾರೆ ಎಂದು ಹಿರಿಯ ಪತ್ರಕರ್ತರಾದ ವಿಜಯವಾಣಿ ಕನ್ನಡ ದಿನಪತ್ರಿಕೆ ಯ ಸ್ಥಾನಿಕ ಸಂಪಾದಕರಾದ ವಾದಿರಾಜ ವ್ಯಾಸಮುದ್ರ ಹೇಳಿದರು.

ನಗರದ ಸಂತೋಷ ಕಾಲನಿಯ ಗ್ರೀನ ಪಾರ್ಕ್ ಬಡಾವಣೆಯಲ್ಲಿ ಇಂದು ವಿಶ್ವ ಯೋಗ ದಿನಾಚರಣೆ ಕೆಎಚ್ ಬಿ ಕ್ಷೇಮಾಭಿವೃದ್ಧಿ ಸಂಘ ಹಾಗೂ ಪತಂಜಲಿ ಯೋಗ ಶಿಬಿರ ವತಿಯಿಂದ ಇಂದು ವಿಶ್ವ ಯೋಗ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಆರೋಗ್ಯವಂತ ಸಮಾಜ ನಿರ್ಮಿಸಲು ಪ್ರತಿಯೊಬ್ಬರು ತನ್ನ ದೈನಂದಿನ ದಿನಚರಿ ನಡೆಸಿಕೊಂಡು ಆರೋಗ್ಯವಂತರಾಗಿರಬೇಕು. ಯೊಗ ಪ್ರಪಂಚಕ್ಕೆ ಭಾರತೀಯರು ನೀಡಿದ ಅತ್ಯುತ್ತಮ ಕೊಡುಗೆಯಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ವೈದ್ಯರಾದ ಡಾ.ಮಲ್ಲಾರಾವ ಮಲ್ಯ ಮಾತನಾಡುತ್ತಾ ಮನುಷ್ಯನು ತಮ್ಮ ಸ್ಥೂಲ ಮತ್ತು ಸೂಕ್ಷ್ಮ ಕರ್ಮೇಂದ್ರಿಯಗಳಾದ ಮನಸ್ಸು, ಬುದ್ಧಿ ಮತ್ತು ಸಂಸ್ಕಾರಗಳನ್ನು ನಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಯೋಗದಿಂದ ಮಾತ್ರ ಸಾಧ್ಯ.ಉತ್ತಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೊಳಿಸುತ್ತದೆ. ವರ್ತಮಾನ ಸಮಯದ ದೈನಂದಿನ ಜೀವನದಲ್ಲಿ ಬಹಳ ಒತ್ತಡವಿದೆ, ಇದು ನಮ್ಮ ಮಾನಸಿಕ ಶಕ್ತಿ ಎಲ್ಲಿಯವರೆಗೆ ನಮ್ಮ ಮನಸ್ಸನ್ನು ಹತೋಟಿಯಲ್ಲಿ ಇರುವುದಿಲ್ಲವೊ,  ಅಲ್ಲಿಯವರೆಗೆ ನಾವು ಉತ್ತಮ ಆರೋಗ್ಯದಿಂದ ಇರುವುದು ಸವಾಲಿನ ಕಾರ್ಯವಾಗಿದೆ. ನಾವೆಲ್ಲರೂ ಯೋಗ ಮಾಡುವುದರಿಂದ ನಮ್ಮ ಜೀವನ ಶೈಲಿಯ ಬದಲಾವಣೆಯಾಗಿ ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು ಎಂದು ಹೇಳಿದರು. ವೇದಿಕೆಯ ಮೇಲೆ ಯೋಗ ಗುರುಗಳಾದ ಹನುಮಾನ ಸಿಂಗ ಠಾಕುರ,  ಮಾಧ್ಯಮ ವರದಿಗಾರರಾದ ರಾಘವೇಂದ್ರ ಭೊಗಲೆ, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸಂಜಿವಕುಮಾರ ಶೆಟ್ಟಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರತಿದಿನ ಬಡಾವಣೆಯಲ್ಲಿ ಉಚಿತವಾಗಿ ಯೋಗ ಶಿಬಿರ ನಡೆಸುತ್ತಿರುವ ಯೋಗ ಗುರುಗಳಾದ ಪಾಂಡುರಂಗ ಕಟಕೆ ಯವರ  ದಂಪತಿಗಳಿಗೆ ವಿಶೇಷವಾಗಿ ಗೌರವಿಸಲಾಯಿತು. ಪ್ರೀತಿ ಕುಲಕರ್ಣಿ ಪ್ರಾರ್ಥಿಸಿದರು. ಸಂಗಮೇಶ ಸರಡಗಿ ಸ್ವಾಗತಿಸಿದರು.

ಶಿವಕಾಂತ ಚಿಮ್ಮಾ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ  ಕಲ್ಯಾಣರಾವ ಮಡಿವಾಳ,ರವೀಂದ್ರ ಕಟ್ಟಿಮನಿ, ಡಿ.ವಿ. ಕುಲಕರ್ಣಿ,ಕೆ.ಬಿ.ಕುಲಕರ್ಣಿ,  ಮಲ್ಲಣಾ ಮಲ್ಲೆದ,ಶರಣಬಸಪ್ಪ ದೇಶಟಿ, ಪ್ರಕಾಶ ಕುಲಕರ್ಣಿ, ರಾಜೇಶ ನಾಗಭುಜಂಗೆ, ಬಾಲಕೃಷ್ಣ ಕುಲಕರ್ಣಿ,ಶ್ರೀನಿವಾಸ ಬುಜ್ಜಿ, ನ್ಯಾಯವಾದಿ ಹಣಮಂತರಾಯ ಅಟ್ಟೂರ,   ಸೂರ್ಯಕಾಂತ ಸಾವಳಗಿ, ಪ್ರದೀಪ ಕುಂಬಾರ,  ಪುಂಡಲಿಕ ಪೊಲೀಸ, ಶಿವಪ್ಪ ಕಟ್ಟಿಮನಿ ಸುಲ್ತಾನಪುರ,ವಿನೊದಕುಮಾರ ಪಡನೂರ, ಶಿವಾನಂದ ರೆಡ್ಡಿ, ರಮೇಶ ಕಟಕೆ, ಮಲ್ಲಿಕಾರ್ಜುನ ನಾಡಗೆರಿ,ರಾಹುಲ ಶ್ರೀಶೈಲ ಬಿರಾದಾರ,  ಶಿವಶರಣಪ್ಪ ಅರಕೇರಿ, ಬಾಲಾಜಿ, ದಿಲೀಪ ಕುಮಾರ  ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

9 mins ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago