ಕಲಬುರಗಿ: ದೈಹಿಕ ಮಾನಸಿಕ ಮತ್ತು ಅಧ್ಯಾತ್ಮಿಕ ಅಭ್ಯಾಸಗಳು ಅಥವಾ ಶಿಸ್ತುಗಳ ಗುಂಪಿಗೆ ಯೋಗ ಎಂದು ಕರೆಯುತ್ತಾರೆ ಎಂದು ಹಿರಿಯ ಪತ್ರಕರ್ತರಾದ ವಿಜಯವಾಣಿ ಕನ್ನಡ ದಿನಪತ್ರಿಕೆ ಯ ಸ್ಥಾನಿಕ ಸಂಪಾದಕರಾದ ವಾದಿರಾಜ ವ್ಯಾಸಮುದ್ರ ಹೇಳಿದರು.
ನಗರದ ಸಂತೋಷ ಕಾಲನಿಯ ಗ್ರೀನ ಪಾರ್ಕ್ ಬಡಾವಣೆಯಲ್ಲಿ ಇಂದು ವಿಶ್ವ ಯೋಗ ದಿನಾಚರಣೆ ಕೆಎಚ್ ಬಿ ಕ್ಷೇಮಾಭಿವೃದ್ಧಿ ಸಂಘ ಹಾಗೂ ಪತಂಜಲಿ ಯೋಗ ಶಿಬಿರ ವತಿಯಿಂದ ಇಂದು ವಿಶ್ವ ಯೋಗ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಆರೋಗ್ಯವಂತ ಸಮಾಜ ನಿರ್ಮಿಸಲು ಪ್ರತಿಯೊಬ್ಬರು ತನ್ನ ದೈನಂದಿನ ದಿನಚರಿ ನಡೆಸಿಕೊಂಡು ಆರೋಗ್ಯವಂತರಾಗಿರಬೇಕು. ಯೊಗ ಪ್ರಪಂಚಕ್ಕೆ ಭಾರತೀಯರು ನೀಡಿದ ಅತ್ಯುತ್ತಮ ಕೊಡುಗೆಯಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ವೈದ್ಯರಾದ ಡಾ.ಮಲ್ಲಾರಾವ ಮಲ್ಯ ಮಾತನಾಡುತ್ತಾ ಮನುಷ್ಯನು ತಮ್ಮ ಸ್ಥೂಲ ಮತ್ತು ಸೂಕ್ಷ್ಮ ಕರ್ಮೇಂದ್ರಿಯಗಳಾದ ಮನಸ್ಸು, ಬುದ್ಧಿ ಮತ್ತು ಸಂಸ್ಕಾರಗಳನ್ನು ನಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಯೋಗದಿಂದ ಮಾತ್ರ ಸಾಧ್ಯ.ಉತ್ತಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೊಳಿಸುತ್ತದೆ. ವರ್ತಮಾನ ಸಮಯದ ದೈನಂದಿನ ಜೀವನದಲ್ಲಿ ಬಹಳ ಒತ್ತಡವಿದೆ, ಇದು ನಮ್ಮ ಮಾನಸಿಕ ಶಕ್ತಿ ಎಲ್ಲಿಯವರೆಗೆ ನಮ್ಮ ಮನಸ್ಸನ್ನು ಹತೋಟಿಯಲ್ಲಿ ಇರುವುದಿಲ್ಲವೊ, ಅಲ್ಲಿಯವರೆಗೆ ನಾವು ಉತ್ತಮ ಆರೋಗ್ಯದಿಂದ ಇರುವುದು ಸವಾಲಿನ ಕಾರ್ಯವಾಗಿದೆ. ನಾವೆಲ್ಲರೂ ಯೋಗ ಮಾಡುವುದರಿಂದ ನಮ್ಮ ಜೀವನ ಶೈಲಿಯ ಬದಲಾವಣೆಯಾಗಿ ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು ಎಂದು ಹೇಳಿದರು. ವೇದಿಕೆಯ ಮೇಲೆ ಯೋಗ ಗುರುಗಳಾದ ಹನುಮಾನ ಸಿಂಗ ಠಾಕುರ, ಮಾಧ್ಯಮ ವರದಿಗಾರರಾದ ರಾಘವೇಂದ್ರ ಭೊಗಲೆ, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸಂಜಿವಕುಮಾರ ಶೆಟ್ಟಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರತಿದಿನ ಬಡಾವಣೆಯಲ್ಲಿ ಉಚಿತವಾಗಿ ಯೋಗ ಶಿಬಿರ ನಡೆಸುತ್ತಿರುವ ಯೋಗ ಗುರುಗಳಾದ ಪಾಂಡುರಂಗ ಕಟಕೆ ಯವರ ದಂಪತಿಗಳಿಗೆ ವಿಶೇಷವಾಗಿ ಗೌರವಿಸಲಾಯಿತು. ಪ್ರೀತಿ ಕುಲಕರ್ಣಿ ಪ್ರಾರ್ಥಿಸಿದರು. ಸಂಗಮೇಶ ಸರಡಗಿ ಸ್ವಾಗತಿಸಿದರು.
ಶಿವಕಾಂತ ಚಿಮ್ಮಾ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಕಲ್ಯಾಣರಾವ ಮಡಿವಾಳ,ರವೀಂದ್ರ ಕಟ್ಟಿಮನಿ, ಡಿ.ವಿ. ಕುಲಕರ್ಣಿ,ಕೆ.ಬಿ.ಕುಲಕರ್ಣಿ, ಮಲ್ಲಣಾ ಮಲ್ಲೆದ,ಶರಣಬಸಪ್ಪ ದೇಶಟಿ, ಪ್ರಕಾಶ ಕುಲಕರ್ಣಿ, ರಾಜೇಶ ನಾಗಭುಜಂಗೆ, ಬಾಲಕೃಷ್ಣ ಕುಲಕರ್ಣಿ,ಶ್ರೀನಿವಾಸ ಬುಜ್ಜಿ, ನ್ಯಾಯವಾದಿ ಹಣಮಂತರಾಯ ಅಟ್ಟೂರ, ಸೂರ್ಯಕಾಂತ ಸಾವಳಗಿ, ಪ್ರದೀಪ ಕುಂಬಾರ, ಪುಂಡಲಿಕ ಪೊಲೀಸ, ಶಿವಪ್ಪ ಕಟ್ಟಿಮನಿ ಸುಲ್ತಾನಪುರ,ವಿನೊದಕುಮಾರ ಪಡನೂರ, ಶಿವಾನಂದ ರೆಡ್ಡಿ, ರಮೇಶ ಕಟಕೆ, ಮಲ್ಲಿಕಾರ್ಜುನ ನಾಡಗೆರಿ,ರಾಹುಲ ಶ್ರೀಶೈಲ ಬಿರಾದಾರ, ಶಿವಶರಣಪ್ಪ ಅರಕೇರಿ, ಬಾಲಾಜಿ, ದಿಲೀಪ ಕುಮಾರ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.