ಬ್ರಹ್ಮಪದವಿಯನೊಲ್ಲೆ, ವಿಷ್ಣುಪದವಿಯನೊಲ್ಲೆ
ರುದ್ರಪದವಿಯನೊಲ್ಲೆ
ನಾನು ಮತ್ತಾವ ಪದವಿಯನೊಲ್ಲೆನಯ್ಯಾ
ಕೂಡಲಸಂಗಮದೇವಾ, ನಿಮ್ಮ ಸದ್ಭಕ್ತರ
ಪಾದವನರಿದಿಪ್ಪ ಮಹಾಪದವಿಯ ಕರುಣಿಸಯ್ಯಾ
ಬಸವಣ್ಣನವರ ಈ ವಚನ ಪದ್ಮಶ್ರೀ ಒಲ್ಲೆ ಎಂದ ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯಶ್ರೀ ಸಿದ್ಧೇಶ್ವರ ಶ್ರೀಗಳಿಗೆ ಅನ್ವಯಿಸಬಹುದು. ಅದು ಜನವರಿ 25ರ ರಾತ್ರಿ. 2018ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪಡೆದವರ ಪಟ್ಟಿ ಟಿವಿ ಪರದೆ ಮೇಲೆ ಬರುತ್ತಲಿತ್ತು. ಅದರಲ್ಲಿ ವಿಜಯಪುರ ಜ್ಞಾನ ಯೋಗಾಶ್ರಮದ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಯವರ ಹೆಸರೂ ಕೂಡ ಕಾಣಿಸಿತು. ಅವರ ಪ್ರವಚನದ ಸಾರ ಸಂಗ್ರಹಿಸಿ ಒಂದು ಮುಂಜಾವು, ಅರಿವಿನ ಹಣತೆ ಎಂಬ ಎರಡು ಕೃತಿಗಳನ್ನು ಹೊರ ತಂದಿರುವ ನನಗೆ ಸಹಜವಾಗಿಯೇ ಖುಷಿಯಾಯಿತು.
ಹೇಗೂ ಕಲಬುರಗಿಯಲ್ಲೇ ಅವರ ಪ್ರವಚನ ನಡೆದಿದೆ. ಪ್ರಶಸ್ತಿ ಪಡೆದ ಸಂತಸದ ಬಗ್ಗೆ ಅವರನ್ನೇ ಕೇಳಿದರಾಯ್ತು ಎಂದು ಅವರು ಉಳಿದುಕೊಂಡಿದ್ದ ಪರಿಸರದತ್ತ ಬೆಳ್ಳಂಬೆಳಿಗ್ಗೆ ಹೆಜ್ಜೆ ಹಾಕಿದೆ. ನಾನು ಮೊದಲೇ ಊಹಿಸಿದಂತೆ ಅಲ್ಲಿ ಯಾವುದೇ ಗೌಜು, ಗದ್ದಲ ಕಾಣಲಿಲ್ಲ. ಹಾರ-ತುರಾಯಿಗಳ ಆರ್ಭಟ ಇರಲಿಲ್ಲ. ಪ್ರಶಾಂತ, ಪ್ರಸನ್ನ, ಅದೇ ನೀರವ ಮೌನವಿತ್ತು. ಪೂಜ್ಯರು ಹೊರ ಬಂದುದೇ ತಡ. ಅವರ ಬೆನ್ನು ಹತ್ತಿ ಮಾತಾಡಿಸಿದೆ.
ಪ್ರಶ್ನೆ: ನಿಮಗೆ ಈ ಸಾಲಿನ ಪದ್ಮಶ್ರೀ ಪ್ರಶಸ್ತಿ ಬಂದಿದೆ. ಈ ಬಗ್ಗೆ ನಿಮಗೆ ಏನನ್ನಿಸುತ್ತದೆ?
ಉತ್ತರ: ಹೌದಂತೆ! (ಹಿಂದೊಮ್ಮೆ ಹೊರಳಿ ನೋಡಿ) ನಮಗೂ ಈಗ ಗೊತ್ತಾಗಿದೆ. ಅದೆಲ್ಲ ನಮಗ್ಯಾಕೆ.
ಪ್ರಶ್ನೆ: ಹಾಗಾದರೆ ಪ್ರಶಸ್ತಿ ಸ್ವೀಕರಿಸುತ್ತಿರೋ ಇಲ್ಲವೋ?
ಉತ್ತರ: ನಮಗ್ಯಾಕ್ರೀ ಈ ಪ್ರಶಸ್ತಿ? ಪ್ರಶಸ್ತಿ ಘೋಷಣೆ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು. ಆದರೆ ಇದನ್ನು ತಗೊಂಡು ನಾವೇನು ಮಾಡದೈತಿ. ಈ ಪ್ರಶಸ್ತಿಯನ್ನು ಗೌರವದೊಂದಿಗೆ ಹಿಂತಿರುಗಿಸುತ್ತೇನೆ.
ಪ್ರಶ್ನೆ: ಪ್ರಶಸ್ತಿ ಒಲ್ಲೆ ಎಂದರೆ ಸರ್ಕಾರಕ್ಕೆ ಅಗೌರವ ತೋರಿದ ಹಾಗೆ ಹಾಗುವುದಿಲ್ಲವೇ?
ಉತ್ತರ: ಅವರ ಅಭಿಮಾನ ದೊಡ್ಡದು. ನನಗೆ ಇದರ ಅವಶ್ಯಕತೆ ಇಲ್ಲ. ಆದರೆ ಘೋಷಣೆ ಮಾಡುವ ಮುನ್ನ ಒಂದ್ ಮಾತ್ ಕೇಳಬೇಕಿತ್ತು.
ಪ್ರಶ್ನೆ: ನಿಮ್ಮಂಥವರೇ ಪ್ರಶಸ್ತಿ ಒಲ್ಲೆ ಎಂದರೆ ಎಂಥವರಿಗೆ ಪ್ರಶಸ್ತಿ ಕೊಡಬೇಕು?
ಉತ್ತರ: ನನಗ ತಿಳಿದಿದ್ದನ್ನ ಜನರಿಗೆ ಹೇಳಿ ಅವರಿಂದಲೂ ಒಂದಿಷ್ಟು ತಿಳಕೊಂಡು ಸುಮ್ಮನೆ ಬದುಕು ನಡೆಸೋ ಮನುಷ್ಯ ನಾನು. ನನಗಿಂತ ಸಾಧನೆ ಮಾಡಿದವರು ಬಾಳ ಜನ ಅದಾರ. ನಾನೊಬ್ಬ ಸಾಮಾನ್ಯ ಅಧ್ಯಾತ್ಮಜೀವಿ. ನನಗೇಕೆ ಈ ಪ್ರಶಸ್ತಿ?
ಪ್ರಶ್ನೆ: ಹಾಗಿದ್ದರೆ ಈ ಪ್ರಶಸ್ತಿ ವಾಪಸ್ ಮಾಡ್ತೀರಾ?
ಉತ್ತರ: ಇವೆಲ್ಲ ನಮಗ ಯಾಕ್ರೀ? ವಾಪಸ್ ಮಾಡಬೇಕಾದರೆ ಯಾರಿಗೆ ಪತ್ರ ಬರಿಬೇಕು ಎಂಬುದೇ ನಮಗೆ ಗೊತ್ತಿಲ್ಲ. ಯಾರ ಕಡ್ಯಾರೆ ಬರ‍್ದು ಕಳಿಸು ಅಂತ ಹೇಳಿನ್ರೀ… ಎಂದು ಪ್ರವಚನ ಹೇಳಲು ಹೊರಟೇ ಬಿಟ್ರು…
ಛೋಟಾ, ಮೋಟಾ ಪ್ರಶಸ್ತಿಗಾಗಿಯೇ ಅವರಿವರ ಕೈ-ಕಾಲು ಹಿಡಿಯುವುದು, ಇಲ್ಲವೇ ಪ್ರಭಾವಿ ವ್ಯಕ್ತಿಗಳಿಂದ ವಶೀಲಿಬಾಜಿ ಮಾಡಿಸುವುದು, ಜೊತೆಗೆ ನೋಟಿನ ರುಚಿ ತೋರಿಸುವ ಮೂಲಕ ಶತಾಯ ಗತಾಯ ಆ ಪ್ರಶಸ್ತಿಯನ್ನು ಪಡೆಯಲು ದುಂಬಾಲು ಬೀಳುವ ಇಂದಿನ ದಿನಮಾನಗಳಲ್ಲಿ ಪ್ರಶಸ್ತಿಯೇ ಇವರನ್ನು ಹುಡುಕಿಕೊಂಡು ಬಂದಿದ್ದರೆ ಪ್ರಶಸ್ತಿ ನಾ ಒಲ್ಲೆ ಎನ್ನುವ ಮೂಲಕ ತಮ್ಮ ದೊಡ್ಡತನವನ್ನು ಮೆರೆದಿದ್ದಾರೆ.
ಸರ್ಕಾರ ಇಲ್ಲವೇ ಸಂಸ್ಥೆಯವರು ಕೊಡ ಮಾಡುವ ಪ್ರಶಸ್ತಿಗಳು ದೊಡ್ಡವೇನು ಅಲ್ಲ. ಆದರೆ ಇಂದಿನ ಬಹುತೇಕ ಜನ ಪ್ರಶಸ್ತಿ-ಪುರಸ್ಕಾರದ ಹಪಾಹಪಿ ಬೆಳೆಸಿಕೊಂಡಿರುವುದಂತೂ ನಿಜ! ಕೆಲವರು ಈ ಪ್ರಶಸ್ತಿ, ಗಿಶಸ್ತಿ ಹೊಡಕೊಂಡೇ ದೊಡ್ಡವರಾಗಿರುವುದನ್ನು ನಾವು ಕಾಣುತ್ತೇವೆ. ಅಂಥವರಲ್ಲಿ ಸಿದ್ಧೇಶ್ವರ ಸ್ವಾಮೀಜಿ ನಿರ್ದಾರ ಮಾತ್ರ ತೀರಾ ಭಿನ್ನ, ಅತ್ಯಂತ ವಿಭಿನ್ನ ಎಂದು ಹೇಳಬಹುದು.
ತಮ್ಮ ಅಂಗಿಗೆ ಜೇಬುಗನ್ನೇ ಇಟ್ಟುಕೊಳ್ಳದೆ ಅತ್ಯಂತ ಸಾದಾ, ಸೀದಾ ಜೀವನ ನಡೆಸುತ್ತಿರುವ ಇವರು ಬಸವಾದಿ ಶರಣರ ವಿಚಾರಧಾರೆಗಳನ್ನು ತಮ್ಮ ಪ್ರವಚನದಲ್ಲಿ ಇನ್ನಷ್ಟು ಹೇರಳವಾಗಿ ಬಳಸಿದರೆ ಆ ಮಾತೆ ಬೇರೆಯೇ ಇರುತ್ತಿತ್ತು ಹೌದಲ್ಲವೇ?
(ಕೃಪೆ: ಶರಣ ಮಾರ್ಗ)
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…