ಶಹಾಬಾದ:ಕೋವಿಡ್‌ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಲಬುರಗಿ ಗ್ರಾಮೀಣ ಮತಕ್ಷೇತ್ರದಲ್ಲಿ ಜನಸೇವೆಯ ಮೂಲಕ ಮನೆಮಾತಾಗಿರುವ ಕಾಂಗ್ರೆಸ್ ಮುಖಂಡ ರವಿ ಚವ್ಹಾಣ ಭವಿಷ್ಯದ ಉತ್ತಮ ನಾಯಕರಾಗಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್ ಹೇಳಿದರು. ಅವರು ನಗರದಲ್ಲಿ ಶಮ್ಸ್ ಸಭಾಂಗಣದಲ್ಲಿ ರವಿ ಚವ್ಹಾಣ ಅಭಿಮಾನಿ ಬಳಗದ ವತಿಯಿಂದ ಅವರ ೩೫ನೇ ಹುಟ್ಟು ಹಬ್ಬದಂದು ಪತ್ರಿಕಾ ವಿತರಕರಿಗೆ ಆಹಾರದ ಕಿಟ್‌ಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಾಕಡೌನ್ ಹೇರಲಾಗಿರುವ ಸಂದರ್ಭದಲ್ಲಿ ಸಂಕ?ದಲ್ಲಿ ಇರುವವರಿಗೆ ಬಹಳಷ್ಟು ಸಹಾಯ ಮಾಡಿದ್ದಾರೆ. ಮುಂದೆಯೂ ಈ ಕಾರ್ಯ ಮುಂದುವರಿಸಿದರೇ ಮುಂಬರುವ ದಿನಗಳಲ್ಲಿ ಜನರಿಂದಲೇ ಜನನಾಯಕರಾಗಿ ಹೊರಹೊಮ್ಮಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ರವಿ ಚವ್ಹಾಣ ಮಾತನಾಡಿ, ಕೋವಿಡ್ ಎರಡನೇ ಅಲೆಯಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಇಂಥ ಸಂದರ್ಭದಲ್ಲೂ ಪತ್ರಿಕೋದ್ಯಮ ಕ್ಷೇತ್ರ ಸಮಾಜ ಸೇವೆಯನ್ನು ಮುಂದುವರಿಸಿದೆ. ಪತ್ರಿಕೋದ್ಯಮ ಕ್ಷೇತ್ರಕ್ಕೆ ಬೆನ್ನೆಲುಬಾಗಿ ನಿಂತಿರುವ ಪತ್ರಿಕಾ ವಿತರಕರು ಅನೇಕ ಸವಾಲುಗಳನ್ನು ಎದುರಿಸಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಪತ್ರಿಕಾ ವಿತರಕರು ಪ್ರತಿದಿನವೂ ಹಲವಾರ ಜನರೊಂದಿಗೆ ನಿಕಟ ಸಂಪರ್ಕದಲ್ಲಿರುತ್ತಾರೆ. ಪ್ರತಿಯೊಬ್ಬರೂ ಪರಸ್ಪರ ಅಂತರ ಕಾಪಾಡಿಕೊಂಡು, ಕೋವಿಡ್ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಉಪಾಧ್ಯಕ್ಷ ವಿಜಯಕುಮಾರ ಮುಟ್ಟತ್ತಿ, ಶರಣಗೌಡ ಪಾಟೀಲ, ಮೃತ್ಯುಂಜಯ್ ಹಿರೇಮಠ, ಗಿರೀಶ ಕಂಬಾನೂರ,ಹಾಷಮ್‌ಖಾನ, ವಿಶ್ವರಾಧ್ಯ ಬೀರಾಳ,ಕಿಶನ್ ನಾಯಕ, ಕುಮಾರ ಚವ್ಹಾಣ, ಅನ್ವರ ಪಾಶಾ, ಸುಲೇಮಾನ ಕೋಲಾರಕರ್, ಪೀರಪಾಶಾ, ಕಿರಣ ಚವ್ಹಾಣ,ಬಾಬಾಖಾನ, ಮಹ್ಮದ್ ಜಾವೀದ್,ಮೇರಾಜ ಸಾಹೇಬ,ಮರಲಿಂಗ ಕಮರಡಗಿ,ಸಾಹೇಬಗೌಡ ಬೋಗುಂಡಿ, ಮಹ್ಮದ್ ಬಾಕ್ರೋದ್ದಿನ್, ತಿಪ್ಪಣ್ಣ ನಾಟೇಕಾರ, ನಾಗರಾಜ ಕರಣಿಕ್, ಸಾಬೇರಾಬೇಗಂ,ಡಾ.ಅಹ್ಮದ್ ಪಟೇಲ್,ನಿಂಗಣ್ಣ ಸಂಗಾವಿಕರ್,ಮುನ್ನಾ ಪಟೇಲ್,ಮಲ್ಲಿಕಾರ್ಜುನ ವಾಲಿ, ಮೆಹಬೂಬ, ಸಯ್ಯದ್ ಜಹೀರ್,ರಾಜೇಶ ಯನಗುಂಟಿಕರ್, ಅನ್ವರ ಚಪಾಟ್ಲೆ, ಮ.ರಫಿಕ್ ಕಾರೋಬಾರಿ,ಅವಿನಾಶ ಕಂಬಾನೂರ,ಮ. ಇಮ್ರಾನ್, ಶಂಕರ ಕೋಟನೂರ, ಭರತ್ ರಾಠೋಡ, ಅಜೀಮ್ ಸೇಠ ಇತರರು ಇದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…