ಬಿಸಿ ಬಿಸಿ ಸುದ್ದಿ

ಕಾರಣ’ವಿಲ್ಲದ ಕೃತಿಗಳೇ ಇಲ್ಲ : ಸಾಹಿತಿ ಶೇರಿ ಅಭಿಮತ

ಸೇಡಂ: ವಿನಾಕಾರಣ ಪುಸ್ತಕಗಳು ಪ್ರಕಟವಾಗಿರುವ ಉದಾಹರಣೆಗಳೇ ಇಲ್ಲ. ಕಾರಣ ಇದ್ದುಕೊಂಡೇ ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಅವೆಲ್ಲವೂ ಕಾರಣಯುಕ್ತವಾಗಿವೆ ಎಂದು ಹಿರಿಯ ಲೇಖಕ ಲಿಂಗಾರೆಡ್ಡಿ ಶೇರಿ ಅಭಿಪ್ರಾಯಪಟ್ಟರು.

ಪಟ್ಟಣದ ರಾಮಚಂದ್ರ ಬಡಾವಣೆಯ `ಅಮ್ಮ’ ಸಭಾಂಗಣದಲ್ಲಿ ಸಂಸ್ಕøತಿ ಪ್ರಕಾಶನ ಹಾಗೂ ರಾಷ್ಟ್ರಕೂಟ ಪುಸ್ತಕ ಮನೆ ಜಂಟಿಯಾಗಿ ಆಯೋಜಿಸಿದ್ದ ಪ್ರಭಾಕರ ಜೋಶಿ ಅವರ `ರಂಗಕಾರಣ’ ಮತ್ತು ಮಹಿಪಾಲರೆಡ್ಡಿ ಮುನ್ನೂರ್ ಅವರ `ಕೃತಿಕಾರಣ’ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ರಂಗಭೂಮಿ ನಂಟಿನ ಬರಹಗಳು ಮತ್ತು ಪುಸ್ತಕಗಳ ವಿಮರ್ಶೆಯ ನೆಲೆಯಲ್ಲಿ ಕಂಡುಕೊಂಡ ಲೇಖನಗಳ ಸಂಕಲನಗಳನ್ನು `ಕಾರಣ’ವಿಲ್ಲದೇ ಓದತೊಡಗಬೇಕಾಗಿದೆ. ರಾಜಧಾನಿ ಸುತ್ತಮುತ್ತಲಿರುವ ಲೇಖಕರು ಸೇಡಂ ಕಡೆಗೆ ನೋಡುವಂತಹ ವಾತಾವರಣ ಮೂಡಿಸುತ್ತಿರುವ ನೆಲದ ಬಳ್ಳಿಗಳೆರಡು ಆಕಾಶದೆತ್ತರಕ್ಕೆ ಹಬ್ಬುತ್ತಿರುವುದಕ್ಕೆ ಅಭಿಮಾನ ಉಂಟಾಗುತ್ತದೆ ಎಂದು ಹೇಳಿದರು.

ರಂಗಕಾರಣ ಕುರಿತು ಹಿರಿಯ ಲೇಖಕ ಡಾ.ಎಂ.ಜಿ.ದೇಶಪಾಂಡೆ ಮತ್ತು ಕೃತಿಕಾರಣ ಕುರಿತು ಹಿರಿಯ ಲೇಖಕಿ ಡಾ.ಚಂದ್ರಕಲಾ ಬಿದರಿ ಪರಿಚಯ ಮಾಡಿಕೊಟ್ಟರು.
ಮುಖ್ಯ ಅತಿಥಿಗಳಾಗಿದ್ದ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ ಮಾತನಾಡಿದರು. ಹಿರಿಯ ವಿದ್ವಾಂಸ ಡಾ.ವಾಸುದೇವ ಅಗ್ನಿಹೋತ್ರಿ ಅಧ್ಯಕ್ಷತೆ ವಹಿಸಿದ್ದರು.

ಲೇಖಕರಾದ ಪ್ರಭಾಕರ ಜೋಶಿ ಮತ್ತು ಮಹಿಪಾಲರೆಡ್ಡಿ ಮುನ್ನೂರ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಿದ್ದಪ್ರಸಾದರೆಡ್ಡಿ ನಿರೂಪಿಸಿದ ಕಾರ್ಯಕ್ರಮದಲ್ಲಿ ವಿಜಯಭಾಸ್ಕರರೆಡ್ಡಿ ಸ್ವಾಗತಿಸಿದರು. ಆದಿತ್ಯ ಜೋಶಿ ವಂದಿಸಿದರು. ಮಹೇಶ ಅಲ್ಲೂರು ಭಾವಗೀತೆ ಹಾಡಿದರು.
ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ವತಿಯಿಂದ ಇಬ್ಬರು ಲೇಖಕರನ್ನು ಸನ್ಮಾನಿಸಲಾಯಿತು.

ಮಸಾಪ ಅಧ್ಯಕ್ಷೆ ಆರತಿ ಕಡಗಂಚಿ, ರುಕ್ಮಿಣಿ ಕಾಳಗಿ, ಕವಿತಾ, ಶಿಲ್ಪಾ ಕೊಳ್ಳಿ, ನಾಟಕ ನಿರ್ದೇಶಕ ಅಶೋಕ ತೊಟ್ನಳ್ಳಿ, ಪ್ರೊ.ಬಿ.ಆರ್.ಅಣ್ಣಾಸಾಗರ, ಕವಿ ಸಂತೋಷ ತೊಟ್ನಳ್ಳಿ, ಕಾನೂನು ಮಹಾವಿದ್ಯಾಲಯ ಪ್ರಾಚಾರ್ಯ ಶರಣಗೌಡ ಪಾಟೀಲ, ಶ್ರೀಪಾದ ಜೋಶಿ, ಶಿವು ಅಪ್ಪಾಜಿ, ನೀಲಕಂಠ ಮುತ್ತಗಿ, ಶರಣಪ್ಪ ಎಳ್ಳಿ, ವಿಷ್ಣುವರ್ಧನರೆಡ್ಡಿ, ಶ್ರೀಧರ ಗಡಾಳೆ, ಬಸವರಾಜ ಬಾಳಿ, ರತ್ನಕಲಾ, ಸುರೇಖಾ, ಭಾಗ್ಯ, ಕಾರ್ತಿಕರೆಡ್ಡಿ, ಮಹಾದೇವರೆಡ್ಡಿ ಇತರರು ಇದ್ದರು.

emedialine

Recent Posts

ಯುಜಿಡಿ, ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಭೂಮಿಪೂಜೆ

ಕಲಬುರಗಿ : ದಕ್ಷಿಣ ಮತಕ್ಷೇತ್ರದ ಕೋಟನೂರ ಡಿ ಗ್ರಾಮದಲ್ಲಿ ಕೆಕೆಆರ್‍ಡಿಬಿ ಅನುದಾನದಲ್ಲಿ 115 ಲಕ್ಷ ರೂಪಾಯಿಗಳ ವೆಚ್ಚದ ಯುಜಿಡಿ ಹಾಗೂ…

7 hours ago

ಆರ್.ಎ.ಎಸ್ ಮೆಡಿಕಲ್ ಶಾಪ್ ಗಣ್ಯರಿಂದ ಉದ್ಘಾಟನೆ

ಕಲಬುರಗಿ: ನಗರದ ಅನ್ನಪೂರ್ಣ ಕ್ರಾಸ್'ನ ಪಂಡಿತ ರಂಗಮಂದಿರದ ಬಳಿ ನೂತನ ಆರ್ ಎ ಎಸ್ ಮೆಡಿಕಲ್ ಶಾಪ್ ಅನ್ನ ಅದ್ದೂರಿಯಾಗಿ…

7 hours ago

ಬಸವತತ್ವ ಹೇಳುವುದಕ್ಕಲ್ಲ.‌ ಬದುಕುವುದಕ್ಕೆ: ಡಾ. ಗಾಂಗಾಂಬಿಕೆ ಅಕ್ಕ

ಕಲಬುರಗಿ: ಬಸವತತ್ವ ಹೇಳುವುದಕ್ಕಲ್ಲ.‌ ಬದುಕುವುದಕ್ಕೆ ಎನ್ನುವಂತೆ ಲಿಂಗಾಯತ ಧರ್ಮೀಯರು ಇತ್ತೀಚಿಗೆ ಮದುವೆ,‌ ಮುಂಜಿವೆ ಹಾಗೂ ಇನ್ನಿತರ ಕೌಟುಂಬಿಕ ಕಾರ್ಯಕ್ರಮಗಳನ್ನು ಬಸವತತ್ವದ…

7 hours ago

ಚಿತ್ತಾಪುರ: ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ರಾಜ್ಯದ ಪುರಾತನ ದೇವಾಲಯ, ದಲಿತರ ಭೂಮಿ ಮತ್ತು ಹಿಂದೂ ರೈತರ ಜಮೀನು ಹಾಗೂ ಸ್ಮಶಾನ…

8 hours ago

ವಕ್ಫ ಹಠಾವೋ, ಕಿಸಾನ್ ಬಚಾವೋ ಕಲಬುರಗಿಯಲ್ಲಿ ಪ್ರತಿಭಟನೆ

ಕಲಬುರಗಿ : ವಕ್ಫ ಆಸ್ತಿ ಹೆಸರಿನಲ್ಲಿ ರೈತರ ಮೇಲೆ ದಬ್ಬಾಳಿಕೆ ನಡೆಸಿ ಈ ನೆಲದ ಮಣ್ಣಿನ‌‌ ಮಕ್ಕಳ ಭೂಮಿಯ ಹಕ್ಕು…

9 hours ago

ಮಾಧ್ಯಮ ಅಕಾಡೆಮಿಗೆ ತೆಲಂಗಾಣ ರಾಜ್ಯದ ಮಾಧ್ಯಮ ಆಕಾಡೆಮಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಭೇಟಿ

ಮಾಧ್ಯಮ ಅಕಾಡೆಮಿಗಳು ಪತ್ರಕರ್ತರ ವೃತ್ತಿಪರ ಅಭಿವೃದ್ಧಿಗೆ ಶ್ರಮಿಸಬೇಕು ': ಶ್ರೀನಿವಾಸ ರೆಡ್ಡಿ ಅಭಿಪ್ರಾಯ ಬೆಂಗಳೂರು: ಮಾಧ್ಯಮ ಅಕಾಡೆಮಿಗಳು ಕಾರ್ಯನಿರತ ಪತ್ರಕರ್ತರ…

9 hours ago