ಬಿಸಿ ಬಿಸಿ ಸುದ್ದಿ

ಶಹಾಬಾದ ತಾಲೂಕಿನಲ್ಲಿ ಡೆಂಗ್ಯೂ ಬೀತಿ: ಆತಂಕದಲ್ಲಿ ಜನತೆ

ಶಹಾಬಾದ: ನಗರದಲ್ಲಿ ಕಳೆದ ವಾರದಿಂದ ಡೆಂಘೀ ಪ್ರಕರಣ ಉಲ್ಬಣಿಸಿದ್ದು, ಸುಮಾರು 11 ಕ್ಕೂ ಹೆಚ್ಚು ಪ್ರಕರಣದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿವೆ. ನಗರದ ವಿವಿಧ ಪ್ರದೇಶದ ಬಡಾವಣೆಗಳಲ್ಲಿ ಮಕ್ಕಳಲ್ಲಿ ಡೆಂಘೀ ಕಾಣಿಸಿಕೊಂಡಿದ್ದು , ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ.

ಈಗಾಗಲೇ ನಗರದಲ್ಲಿ ಸುಮಾರು 11 ಜನರಿಗೆ ಡೆಂಗ್ಯೂ ಇರುವ ಬಗ್ಗೆ ಖಾಸಗಿ ಲ್ಯಾಬ್‍ನಿಂದ ತಿಳಿದು ಬಂದಿದೆ.ಅಲ್ಲದೇ ಹೊನಗುಂಟಾ ಗ್ರಾಮದಲ್ಲೂ ಇಬ್ಬರು ಬಾಲಕರಿಗೂ ಡೆಂಗ್ಯೂ ತಗುಲಿರುವ ಬಗ್ಗೆ ಸ್ವತಃ ಪಾಲಕರು ತಿಳಿಸಿದ್ದಾರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ.ಅದರಲ್ಲೂ ಚಿಕ್ಕ ಮಕ್ಕಳಿಗೆ ಈ ಮಹಾಮಾರಿ ರೋಗ ಬಂದಿದ್ದು, ಪಾಲಕರಲ್ಲಿ ಭಯದ ವಾತಾವರಣ ಮೂಡಿದೆ. ಇದರಿಂದ ತಾಲೂಕಿನ ಜನತೆಯಲ್ಲಿ ಆತಂಕ ಮನೆಮಾಡಿದೆ. ಕಲಬುರಗಿಯ ಸಂಗಮೇಶ್ವರ ಆಸ್ಪತ್ರೆ, ಯಶೋಧರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ.

ಮಳೆಗಾಲ ಆರಂಭವಾಗಿದ್ದು ಮುಂಜಾಗೃತ ಕ್ರಮವಾಗಿ ನಗರಸಭೆ ಅಧಿಕಾರಿಗಳು ಸ್ವಚ್ಛತೆ ಕಡೆ ಗಮನಹರಿಸಬೇಕಾಗಿತ್ತು.ಆದರೆ ಅಧಿಕಾರಿಗಳು ಮಾತ್ರ ಕಸ ವಿಲೇವಾರಿಯನ್ನು ಬಿಟ್ಟರೇ ಚರಂಡಿ ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನ ನೀಡುತ್ತಿಲ್ಲ.ಇದರಿಂದ ಚರಂಡಿಗಳಲ್ಲಿ ಕಸ ತುಂಬಿಕೊಂಡು ನೀರು ಸರಾಗವಾಗಿ ಹರಿಯದೇ ಎಲ್ಲೆಂದರಲ್ಲಿ ನೀರು ತುಂಬಿಕೊಂಡು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ.ನಗರಸಭೆಯ ಅಧಿಕಾರಿಗಳು ಕೂಡಲೇ ಚರಂಡಿಯಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈಗಾಗಲೇ ಡೆಂಘೀ ಪೀಡಿತರು ಸರಕಾರಿ ಆಸ್ಪತ್ರೆಯತ್ತ ಮುಖ ಮಾಡದೆ ಖಾಸಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೂಡಲೇ ನಗರಸಭೆ, ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ನಗರದ ವಿವಿಧ ಬಡಾವಣೆಯಲ್ಲಿ ತೀವ್ರ ಗತಿಯಲ್ಲಿ ಹರಡುತ್ತಿರುವ ಡೆಂಘೀ ಕುರಿತು ಜನರಿಗೆ ತಿಳುವಳಿಕೆ, ಮುಂಜಾಗ್ರತಾ ಕ್ರಮ ಸೂಕ್ತ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕಾಗಿದೆ.ಅಲ್ಲದೇ ಡೆಂಗ್ಯೂ ಹರಡದಂತೆ ಸಮರೋಪಾದಿಯಲ್ಲಿಕ್ರಮ ಕೈಗೊಳ್ಳುವದು ಅವಶ್ಯಕವಾಗಿದೆ. ಅಲ್ಲದೇ ಹೊನಗುಂಟಾ ಗ್ರಾಮದಲ್ಲೂ ಎಲ್ಲೆಂದರಲ್ಲಿ ಕೊಳಚೆ ನೀರು ನಿಲ್ಲುತ್ತಿದೆ. ಅದರಿಂದ ಸೊಳ್ಳೆಗಳು ಹೆಚ್ಚಾಗಿ ರೋಗಕ್ಕೆ ಕಾರಣವಾಗಿದೆ.ಆದ್ದರಿಂದ ಗ್ರಾಪಂ ಪಿಡಿಓ ಅವರು ನೀರು ನಿಲ್ಲದಂತೆ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈಗಾಗಲೇ ಸಮುದಾಯ ಆರೋಗ್ಯಕ್ಕೆ ಕೇಂದ್ರದಲ್ಲಿ ಸುಮಾರು ನಾಲ್ಕು ಬಾಲಕರಿಗೆ ಡೆಂಗ್ಯೂ ತಗುಲಿರುವ ಬಾಲಕರು ಚಿಕಿತ್ಸೆಗಾಗಿ ಬಂದಿದ್ದರು.ನಂತರ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಪಾಲಕರು ಕರೆದುಕೊಂಡು ಹೋಗಿದ್ದಾರೆ.ಡೆಂಗ್ಯೂ ಪ್ರಕರಣಗಳು ಕಂಡು ಬರುತ್ತಿದ್ದು, ನಗರಸಭೆಯ ಪೌರಾಯುಕ್ತರಿಗೆ ನಗರದ ಬಡಾವಣೆಗಳಲ್ಲಿ ಫಾಗಿಂಗ್ ಮಾಡುವುದು ಹಾಗೂ ನೀರು ನಿಲ್ಲದಂತೆ ಕ್ರಮಕೈಗೊಳ್ಳಲು ತಿಳಿಸಲಾಗುತ್ತದೆ.- ಡಾ.ಅಬ್ದುಲ್ ರಹೀಮ್ ವೈದ್ಯಾಧಿಕಾರಿ ಸಮುದಾಯ ಆರೋಗ್ಯ ಕೇಂದ್ರ ಶಹಾಬಾದ

ಶಹಾಬಾದ ನಗರಸಭೆ ಹಾಗೂ ಹೊನಗುಂಟಾ ಗ್ರಾಮದ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳು ಕಂಡು ಬಂದಿವೆÉ.ಅದು ಮಕ್ಕಳಲ್ಲೇ ಹೆಚ್ಚು ಕಂಡು ಬಂದಿದ್ದರಿಂದ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನ ನೀಡಬೇಕು.ಅಲ್ಲದೇ ಸೊಳ್ಳೆ ನಾಶ ಮಾಡಲು ಕ್ರಮಕೈಗೊಂಡು ಡೆಂಗ್ಯೂ ರೋಗದಿಂದ ಮುಕ್ತಿ ನೀಡಬೇಕು. – ಪೀರಪಾಶಾ ಜಿಲ್ಲಾ ಕಾಂಗ್ರೆಸ್ ವಕ್ತಾರ.

emedialine

Recent Posts

ಡಾ.ಶರಣಬಸಪ್ಪ ಕ್ಯಾತನಾಳಗೆ ಮುಖ್ಯಮಂತ್ರಿಗಳಿಂದ ಶ್ರೇಷ್ಠ ವೈದ್ಯ ಶ್ರೀ ಪ್ರಶಸ್ತಿ ಪ್ರದಾನ

ಕಲಬುರಗಿ: ಕರ್ನಾಟಕ ಸರ್ಕಾರವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಪ್ರತಿ ವರ್ಷ ಜುಲೈ…

4 hours ago

ಮುಸ್ಲಿಮರಿಗೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸ್ಥಾನ ನೀಡಿ: ಅಬ್ದುಲ್ ರಹೀಮಾನ್ ಪಟೇಲ್

ಕಲಬುರಗಿ: ‘ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸ್ಥಾನವನ್ನು ಮುಸ್ಲಿಂ ಸಮುದಾಯಕ್ಕೆ ನೀಡಬೇಕು. ಮುಂಬರುವ ದಿನಗಳಲ್ಲಿ ಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ…

5 hours ago

ಡಾ. ಫ.ಗು. ಹಳಕಟ್ಟಿ ಯವರ ಜಯಂತಿ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ

ಕಲಬುರಗಿ: ವಚನ ಪಿತಾಮಹ ಎಂದು ಕರೆಸಿಕೊಳ್ಳುವ ಡಾ. ಫ.ಗು. ಹಳಕಟ್ಟಿ ಯವರು ಬಸವಾದಿ ಶರಣರ ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡುವ…

6 hours ago

ಮೊಬೈಲ್ ರೀಚಾರ್ಜ್‍ಗಳ ಬೆಲೆ ಹೆಚ್ಚಳ ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಪ್ರತಿಭಟನೆ

ಶಹಾಬಾದ: ಖಾಸಗಿ ಟೆಲಿಕಾಂ ಕಂಪನಿಗಳು ಮೊಬೈಲ್ ರೀಚಾರ್ಜ್‍ಗಳ ಬೆಲೆಗಳನ್ನು ಅನಿಯಂತ್ರಿತವಾಗಿ ಹೆಚ್ಚಳ ಮಾಡಿರುವುದನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಎಐಡಿವಾಯ್‍ಓ ವತಿಯಿಂದ…

6 hours ago

ಸಾರ್ವಜನಿಕರು ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಿ

ಶಹಾಬಾದ :ಎಲ್ಲರಿಗೂ ಸರಕಾರಿ ನೌಕರಿ ಬೇಕು.ಆದರೆ ಸರಕಾರಿ ಶಾಲೆಯಲ್ಲಿ ನಿಮ್ಮ ಮಕ್ಕಳು ಓದುವುದು ಬೇಡ ಎಂದರೆ ಹೇಗೆ ? ಮೊದಲು…

6 hours ago

ಪಠ್ಯಕ್ರಮ ರಚನೆ ಗುಣಾತ್ಮಕ ಅಂಶಗಳಿಂದ ಕೂಡಿರಲಿ

ವಿಜಯಪುರ: ಇಂದಿನ ಪ್ರಸ್ತುತ ಶಿಕ್ಷಣ ಪದ್ದತಿ ಕೌಶಲ್ಯಾಧಾರಿತ ಹಾಗೂ ಔದ್ಯೋಗಿಕ ಮತ್ತು ಉದ್ಯೋಗ ಪೂರಕನಂತೆ ಇರಬೇಕು ಎಂದು ಕರ್ನಾಟಕ ರಾಜ್ಯ…

7 hours ago