ಕಲಬುರಗಿ:ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಆಳಂದ ಶ್ರೀಮತಿ ಆಂಬವ್ವಾ ಕುಸಯ್ಯಾ ಗುತ್ತೇದಾರ ಕಾಲೇಜು ಆವರಣದಲ್ಲಿ “ಆಹಾರಧಾನ್ಯ ಕಿಟ್” ಹಾಗೂ “ಸುರಕ್ಷಾ ಹಾಗೂ ನೈರ್ಮಲ್ಯಿಕರಣ ಕಿಟ್” ಗಳನ್ನು ಆಳಂದ ಶಾಸಕರಾದ ಸುಭಾಷ ಆರ್. ಗುತ್ತೆದಾರ ಅವರು ಇತ್ತೀಚೆಗೆ ಸಾಂಕೇತಿವಾಗಿ ಸುಮಾರು 150 ಕಟ್ಟಡ ಕಾರ್ಮಿಕರಿಗೆ ವಿತರಿಸಿದರು.
ನಂತರ ಅವರು ಮಾತನಾಡಿ, ಕೊವೀಡ್-19 ಎರಡನೇ ಅಲೆ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ವಿತರಿಸಲಾಗಿದ್ದು, ಕಾರ್ಮಿಕರು ಸುರಕ್ಷತೆಯಿಂದ ಕಾರ್ಯನಿರ್ವಹಿಸಬೇಕು. ಕಟ್ಟಡ ಕಾರ್ಮಿಕರು ಕೆಲಸ ಸಾಮಾಜಿಕ ಅಂತರ ಕಾಯ್ದುಕೊಂಡು ಹಾಗೂ ಮಾಸ್ಕ್ ಧರಿಸಬೇಕೆಂದು ಸಲಹೆ ನೀಡಿದರು.
ಕಲಬುರಗಿ ಉಪವಿಭಾಗ ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಶ್ರೀಹರಿ ದೇಶಪಾಂಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಆಹಾರಧಾನ್ಯ ಕಿಟ್‍ನಲ್ಲಿ ತೋಗರಿ ಬೇಳೆ 1 ಕೆ.ಜಿ., ಅಡುಗೆ ಎಣ್ಣೆ 1 ಲೀಟರ್, ಗೋಧಿ ಹಿಟ್ಟು 2 ಕೆ.ಜಿ., ಅವಲಕ್ಕಿ 1 ಕೆ.ಜಿ., ಉಪ್ಪು 1 ಕೆ.ಜಿ., ಸಾಂಬರ ಪೌಡರ್ ಪಾಕೇಟು, ಖಾರದಪುಡಿ ಪಾಕೇಟು, ಸಕ್ಕರೆ 1 ಕೆ.ಜಿ., ರವಾ 1 ಕೆ.ಜಿ. ಮತ್ತು ಅಕ್ಕಿ 5 ಕೆ.ಜಿ. ಒಳಗೊಂಡಿರುತ್ತದೆ.
ಸುರಕ್ಷಾ ಹಾಗೂ ನೈರ್ಮಲ್ಯಿಕರಣ ಕಿಟ್‍ಗಳನ್ನು ಮಹಿಳಾ ಮತ್ತು ಪುರುಷ ಕಾರ್ಮಿಕರಿಗೆ ವಿತರಿಸಲಾಗಿದ್ದು, ಮಹಿಳೆಯರ ಕಿಟ್ ಗುಲಾಬಿ ಬಣ್ಣದಾಗಿದ್ದು, ಅದರಲ್ಲಿ ಸ್ಯಾನಿಟೈಸರ್, ಹ್ಯಾಂಡವಾಷ್, ಸೋಪ್, ಬಟ್ಟೆಸೋಪ್, 2 ತರಹದ ಮಾಸ್ಕ್‍ಗಳು ಮತ್ತು ಸ್ಯಾನಿಟರಿಪ್ಯಾಡ್ ಇದ್ದು, ಪುರುಷರ ಕಿಟ್ ಕಪ್ಪು ಬಣ್ಣದಾಗಿದ್ದು ಇದರಲ್ಲಿ ಸ್ಯಾನಿಟೈಸರ್, ಹ್ಯಾಂಡ್‍ವಾಶ್, ಸೋಪ್, ಬಟ್ಟೆಸೋಪ್ ಹಾಗೂ 2 ತರಹದ ಮಾಸ್ಕ್‍ಗಳು ಒಳಗೊಂಡಿರುತ್ತದೆ.
ಈ ಸಂದರ್ಭದಲ್ಲಿ ಹಿರಿಯ ಕಾರ್ಮಿಕ ನಿರೀಕ್ಷಕ ರವೀಂದ್ರಕುಮಾರ ಬಲ್ಲೂರ್, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ, ಏಕ್ಸಜಿಕ್ಯೂಟೀವ್ ಶ್ರೀಮಂಜುನಾಥ, ಕಾರ್ಮಿಕ ಬಂಧುಗಳಾದ ಸಂತೋಷ, ಲಕ್ಷೀಕಾಂತ, ರವಿ, ಜಗದೀಶ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…