ಬಿಸಿ ಬಿಸಿ ಸುದ್ದಿ

ಪ್ರಗತಿಗೆ ಪೂರಕ, ಅತ್ಯಂತ ಬಲಿಷ್ಠ ಮೋದಿ ಸಂಪುಟ: ಶ್ಯಾಮರಾವ ಪ್ಯಾಟಿ

ಕಲಬುರಗಿ: ಭಾರತ ದೇಶ ಹಿಂದೆಂದೂ ಕಾಣದಂತಹ ಪ್ರಗತಿಗೆ ಪೂರಕವಾಗಿರುವ ಹಾಗೂ ಬಲಿಷ್ಠ ಭಾರತ ನಿರ್ಮಾಣ ಮಾಡುವ ಸಂಕಲ್ಪದ ಸಚಿವ ಸಂಪುಟ ಇಂದು ಹೊಂದಿದೆ ಎಂದು ಬಿಜೆಪಿ ಹಿರಿಯ ಮುಖಂಡರು, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ಆಗಿರುವ ಶ್ಯಾಮರಾವ ಪ್ಯಾಟಿ ಹೇಳಿದ್ದಾರೆ.

ನವ ಭಾರತ ಕಟ್ಟುವ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ತಂಡದಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಠ ಪಂಗಡ ಮತ್ತು ಬೌದ್ಧರಿಗೆ ಸೇರಿ 22 ಮಂತ್ರಿ ಸ್ಥಾನ ನೀಡುವ ಮೂಲಕ ದಮನಿತರಿಗೆ, ಶೋಷಿತರಿಗೆ ಆದ್ಯತೆ ನೀಡಿದ್ದಾರೆ. 11 ಮಹಿಳೆಯರನ್ನು ತಮ್ಮ ಮಂತ್ರಿ ಮಂಡಳದಲ್ಲಿ ಸೇರಿಸಿಕೊಂಡು ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದ್ದಾರೆ. ನಾಲ್ವರು ಡಾಕ್ಟರ್ ಪದವೀಧರರು, ನಾಲ್ವರು ಡಾಕ್ಟರೇಟ್ ಪದವೀಧರರನ್ನು ಸಂಪುಟ ಹೊಂದಿದ್ದು ಇದೊಂದು ಪ್ರಗತಿಗೆ ಪೂರಕವಾಗಿರುವಂತಹ ಸಂಪುಟವಾಗಿದೆ ಎಂದು ಪ್ಯಾಟಿ ಅಭಿಪ್ರಾಯಪಟ್ಟಿದ್ದಾರೆ.

ದೇಶದ ಸಾಂವಿಧಾನಿಕ ಹುದ್ದೆಗಳಾದ 8 ರಾಜ್ಯಗಳ ರಾಜ್ಯಪಾಲರ ನೇಮಕ ಮಾಡಿರುವ ಮೋದಿಯವರು 3 ಪರಿಶಿಷ್ಟ ಜಾತಿ, 1 ಪರಿಶಿಷ್ಠ ಪಂಗಡ, 2 ಹಿಂದುಳಿದ ವರ್ಗ, 2 ಸಾಮಾನ್ಯ ವರ್ಗದ ಗಣ್ಯರನ್ನು ಆ ಸ್ಥಾನಕ್ಕೆ ಗುರುತಿಸಿ ಗೌರವಿಸಿದ್ದನ್ನು ನೋಡಿದರೆ ಸಾಮಾಜಿಕ ನ್ಯಾಯಾದ, ಸರ್ವರಿಗೂ ಸಮಪಾಲು- ಸರ್ವರಿಗೂ ಸಮಬಾಳು ಎಂಬ ಸಂದೇಶ ಸಾರುತ್ತಿರುವ ಮೋದಿಯವರ ನಡೆ ದೇಶವನ್ನು ಬಲಿಷ್ಠಗೊಳಿಸುವುದೇ ಆಗಿದೆ.

ಕೇಂದ್ರದಲ್ಲಿರುವ ಮೋದಿ ಸಂಪುಟದಲ್ಲಿ ಎಸ್ಸಿ- ಎಸ್ಟಿ , ಬೌದ್ಧ ಸಮುದಾಯ, ಸಿಖ, ಮುಸ್ಲಿಂ, ತಲಾ ಒಬ್ಬರು ಮಂತ್ರಿಯಾಗಿದ್ದಾರೆ. ಕರ್ನಾಟಕದ ರಾಜ್ಯಪಾಲರಾಗಿ ಈಚೆಗಷ್ಟೇ ಅದಿಕಾರ ವಹಿಸಿರುವ ಥಾವರಚಂದ್ ಗೆಹ್ಲೋಟ್ ಪರಿಶಿಷ್ಠ ಜಾತಿಗೆ ಸೇರಿದವರಾಗಿದ್ದಾರೆ. ಖುದ್ದು ಪ್ರಧಾನಿ ಮದೋಯಿವರು ಬ್ರಾಹ್ಮಣೇತರರಾಗಿದ್ದಾರೆ. ಇವನ್ನೆಲ್ಲ ನೋಡಿದರೆ ಕೇಂದ್ರದಲ್ಲಿ ಹಿಂದೊಂದು ಇರದಂತಹ ಗಟ್ಟಿಮುಟ್ಟಾದ, ಸಾಮಾಜಿಕ ನ್ಯಾಯದ ಬುನಾದಿಯ ಮೇಲೆ ಕಟ್ಟಲ್ಪಟ್ಟಂತಹ ಸಂಪುಟ ಇಂದು ಅಲ್ಲಿ ಇದೆ ಎಂದು ಪ್ಯಾಟಿ ಮೋದಿಯವರ ಈ ಸಾಮರಸ್ಯದ ನಡೆಯನ್ನು ಕೊಂಡಾಡಿದ್ದಾರೆ.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

10 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

10 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

12 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

12 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

13 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

13 hours ago