ಕಲಬುರಗಿ: ಭಾರತ ದೇಶ ಹಿಂದೆಂದೂ ಕಾಣದಂತಹ ಪ್ರಗತಿಗೆ ಪೂರಕವಾಗಿರುವ ಹಾಗೂ ಬಲಿಷ್ಠ ಭಾರತ ನಿರ್ಮಾಣ ಮಾಡುವ ಸಂಕಲ್ಪದ ಸಚಿವ ಸಂಪುಟ ಇಂದು ಹೊಂದಿದೆ ಎಂದು ಬಿಜೆಪಿ ಹಿರಿಯ ಮುಖಂಡರು, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ಆಗಿರುವ ಶ್ಯಾಮರಾವ ಪ್ಯಾಟಿ ಹೇಳಿದ್ದಾರೆ.
ನವ ಭಾರತ ಕಟ್ಟುವ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ತಂಡದಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಠ ಪಂಗಡ ಮತ್ತು ಬೌದ್ಧರಿಗೆ ಸೇರಿ 22 ಮಂತ್ರಿ ಸ್ಥಾನ ನೀಡುವ ಮೂಲಕ ದಮನಿತರಿಗೆ, ಶೋಷಿತರಿಗೆ ಆದ್ಯತೆ ನೀಡಿದ್ದಾರೆ. 11 ಮಹಿಳೆಯರನ್ನು ತಮ್ಮ ಮಂತ್ರಿ ಮಂಡಳದಲ್ಲಿ ಸೇರಿಸಿಕೊಂಡು ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದ್ದಾರೆ. ನಾಲ್ವರು ಡಾಕ್ಟರ್ ಪದವೀಧರರು, ನಾಲ್ವರು ಡಾಕ್ಟರೇಟ್ ಪದವೀಧರರನ್ನು ಸಂಪುಟ ಹೊಂದಿದ್ದು ಇದೊಂದು ಪ್ರಗತಿಗೆ ಪೂರಕವಾಗಿರುವಂತಹ ಸಂಪುಟವಾಗಿದೆ ಎಂದು ಪ್ಯಾಟಿ ಅಭಿಪ್ರಾಯಪಟ್ಟಿದ್ದಾರೆ.
ದೇಶದ ಸಾಂವಿಧಾನಿಕ ಹುದ್ದೆಗಳಾದ 8 ರಾಜ್ಯಗಳ ರಾಜ್ಯಪಾಲರ ನೇಮಕ ಮಾಡಿರುವ ಮೋದಿಯವರು 3 ಪರಿಶಿಷ್ಟ ಜಾತಿ, 1 ಪರಿಶಿಷ್ಠ ಪಂಗಡ, 2 ಹಿಂದುಳಿದ ವರ್ಗ, 2 ಸಾಮಾನ್ಯ ವರ್ಗದ ಗಣ್ಯರನ್ನು ಆ ಸ್ಥಾನಕ್ಕೆ ಗುರುತಿಸಿ ಗೌರವಿಸಿದ್ದನ್ನು ನೋಡಿದರೆ ಸಾಮಾಜಿಕ ನ್ಯಾಯಾದ, ಸರ್ವರಿಗೂ ಸಮಪಾಲು- ಸರ್ವರಿಗೂ ಸಮಬಾಳು ಎಂಬ ಸಂದೇಶ ಸಾರುತ್ತಿರುವ ಮೋದಿಯವರ ನಡೆ ದೇಶವನ್ನು ಬಲಿಷ್ಠಗೊಳಿಸುವುದೇ ಆಗಿದೆ.
ಕೇಂದ್ರದಲ್ಲಿರುವ ಮೋದಿ ಸಂಪುಟದಲ್ಲಿ ಎಸ್ಸಿ- ಎಸ್ಟಿ , ಬೌದ್ಧ ಸಮುದಾಯ, ಸಿಖ, ಮುಸ್ಲಿಂ, ತಲಾ ಒಬ್ಬರು ಮಂತ್ರಿಯಾಗಿದ್ದಾರೆ. ಕರ್ನಾಟಕದ ರಾಜ್ಯಪಾಲರಾಗಿ ಈಚೆಗಷ್ಟೇ ಅದಿಕಾರ ವಹಿಸಿರುವ ಥಾವರಚಂದ್ ಗೆಹ್ಲೋಟ್ ಪರಿಶಿಷ್ಠ ಜಾತಿಗೆ ಸೇರಿದವರಾಗಿದ್ದಾರೆ. ಖುದ್ದು ಪ್ರಧಾನಿ ಮದೋಯಿವರು ಬ್ರಾಹ್ಮಣೇತರರಾಗಿದ್ದಾರೆ. ಇವನ್ನೆಲ್ಲ ನೋಡಿದರೆ ಕೇಂದ್ರದಲ್ಲಿ ಹಿಂದೊಂದು ಇರದಂತಹ ಗಟ್ಟಿಮುಟ್ಟಾದ, ಸಾಮಾಜಿಕ ನ್ಯಾಯದ ಬುನಾದಿಯ ಮೇಲೆ ಕಟ್ಟಲ್ಪಟ್ಟಂತಹ ಸಂಪುಟ ಇಂದು ಅಲ್ಲಿ ಇದೆ ಎಂದು ಪ್ಯಾಟಿ ಮೋದಿಯವರ ಈ ಸಾಮರಸ್ಯದ ನಡೆಯನ್ನು ಕೊಂಡಾಡಿದ್ದಾರೆ.