ಕಲಬುರಗಿ: ಜಿಲ್ಲೆಯ ಪದವಿ, ಸ್ನಾತಕೋತ್ತರ, ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳ ಫಲಕ ಹಿಡಿದು ಗುಲ್ಬರ್ಗಾ ವಿಶ್ವವಿದ್ಯಾಲಯ ಮುಖ್ಯದ್ವಾರದಿಂದ ಕಾರ್ಯಸೌಧದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಒಂದು ತಿಂಗಳಲ್ಲಿ ಎರಡು ಸೆಮಿಸ್ಟರ್‌ಗಳ ಪರೀಕ್ಷೆ ನಡೆಸಬಾರದು ಹಾಗೂ ಎರಡು ಡೋಸ್ ಉಚಿತ ಲಸಿಕೆ ನಂತರವೆ ಆಫ್ ಲೈನ್ ತರಗತಿಗಳು/ ಪರೀಕ್ಷೆ ನಡೆಸಬೇಕಾಗಿ ಮಾನ್ಯ ಗು ವಿ ವಿ ಕುಲಪತಿಗಳಿಗೆ ಮನವಿ ಪತ್ರ್ರ ಸಲ್ಲಿಸುವುದರ ಮುಖಾಂತರ ವಿದ್ಯಾರ್ಥಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಒಂದು ಹೋರಾಟವನ್ನು ಉದ್ದೇಶಿಸಿ ಎಐಡಿಎಸ್‌ಓ ಜಿಲ್ಲಾಧ್ಯಕ್ಷರಾದ ಹಣಮಂತ ಎಸ್ ಹೆಚ್ ರವರು ಮಾತನಾಡುತ್ತ ಕಳೆದ ತಿಂಗಳಿಂದ ರಾಜ್ಯಾದಾದಂತ್ಯ ಸಾವಿರಾರು ವಿದ್ಯಾರ್ಥಿಗಳು ಹಲವಾರು ಹಂತದ ಹೋರಾಟಗಳು ನಡೆಸುತ್ತಿದ್ದು ಉನ್ನತ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣ ರವರಿಗೆ, ರಾಜ್ಯದ ಹಲವಾರು ಸಚಿವರಿಗೆ ಹಾಗೂ ಎಮ್ ಎಲ್ ಎ ಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ, ರಾಜ್ಯಾದ್ಯಾಂತ ನಡೆದ ಗೂಗಲ್ ಫಾರ್ಮ್ ಸಮೀಕ್ಷೆಯಲ್ಲಿ ಸುಮಾರು ೫೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು, ಕಳೆದ ಸೆಮಿಸ್ಟರ್ ಪರೀಕ್ಷೆಯನ್ನು ಪ್ರಚಲಿತ ಸೆಮಿಸ್ಟರ್ ನಡುವೆ ನಡೆಸುವುದು ಬೇಡ ಎಂಬ ಅಭಿಪ್ರಾಯ ಮಂಡಿಸಿದರು. ಈ ಒಂದು ಹೋರಾಟಕ್ಕೆ ರಾಜ್ಯದ ಹಲವಾರು ಪೋಷಕರು,ಶಿಕ್ಷಕರು, ವೈದ್ಯರು, ಶಿಕ್ಷಣ ಪ್ರೇಮಿಗಳು ೧ಲಕ್ಷ ಕ್ಕೂ ಹೆಚ್ಚು ಸಹಿ ಮಾಡಿ ಬೆಂಬಲ ಸೂಚಿಸಿದ್ದಾರೆ. ಹಾಗೂ ವಿಶ್ವವಿದ್ಯಾಲಯಗಳ ಮಾಜಿ ಕುಲಪತಿಗಳು ಸಹ ಬೆಂಬಲಿಸಿದ್ದಾರೆ.
ಈ ಎಲ್ಲಾ ಹಂತದ ಹೋರಾಟ ನಡೆಸಿದಾಗಿಯೂ ವಿದ್ಯಾರ್ಥಿಗಳ ಆತಂಕವನ್ನು ಅರಿಯದ ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳೂ ಇಲ್ಲಿವರೆಗೂ ವಿದ್ಯಾರ್ಥಿಗಳ ಬೇಡಿಕೆಗಳ ಪರವಾಗಿ ಯಾವುದೇ ನೀರ್ಧಾರವನ್ನು ಕೈಗೊಳ್ಳದೆ ಜಾಣ ಮೌನ ವಹಿಸಿದ್ದಾರೆ ಹಾಗೂ ಎಲ್ಲಾ ರೀತಿಯಾ ಪರೀಕ್ಷೆ ತಯಾರಿಯಲ್ಲಿ ವಿಶ್ವವಿದ್ಯಾಲಯಗಳು ಮುಳುಗಿವೆ. ವಿದ್ಯಾರ್ಥಿಗಳ ಜೀವಗಳನ್ನು ಲೆಕ್ಕಿಸದೇ ಪರೀಕ್ಷೆಗಳನ್ನು ನಡೆಸುವುದೇ ಇವರ ಪ್ರಮುಖ ಗುರಿಯಾಗಿದೆ. ಇದೆಲ್ಲವನ್ನು ಗಮನಿಸಿದರೆ ವಿದ್ಯಾರ್ಥಿಗಳ ಬಗ್ಗೆ ಇವರಿಗಿರುವ ಕಾಳಜಿ ಸ್ಪಷ್ಟವಾಗುತ್ತದೆ.
ಈ ಕೂಡಲೇ ಹಿಂದಿನ ೧,೩,ಮತ್ತು೫ನೇ ಸೆಮಿಸ್ಟರನ್ನು ರದ್ದುಗೊಳಿಸಿ. ಮುಂದಿನ ೨,೪,ಮತ್ತು೬ನೇ ಸೆಮಿಸ್ಟರನ್ನು ಎರಡು ಡೋಸ್ ಉಚಿತ ಲಸಿಕೆಗಳನ್ನು ನೀಡಿದ ನಂತರವೆ ಆಫ್ ಲೈನ್ ತರಗತಿಗಳು/ ಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿದರು.
ಈ ಹೋರಾಟದಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ಈರಣ್ಣ ಇಸಬಾ, ಜಿಲ್ಲಾ ಉಪಾಧ್ಯಕ್ಷರಾದ ಸ್ನೇಹಾ ಕಟ್ಟಿಮನಿ, ಜಿಲ್ಲಾ ಸಮಿತಿ ಸದಸ್ಯರಾದ ತುಳಜರಾಮ ಎನ್ ಕೆ, ಗೌತಮ್, ಅರುಣ್, ರಮೇಶ, ಪ್ರೀತಿ, ಗೋಧಾವರಿ, ಶಿಲ್ಪಾ, ವೆಂಕಟೇಶ ದೇವದುರ್ಗಾ, ಭೀಮು ಆಂದೊಲ, ನಾಗರಾಜ ರಾವೂರ, ವಿದ್ಯಾರ್ಥೀಗಳಾದ ಸುನಿಲ ಪೂಜಾರಿ, ಖಲೀಲ್, ಅಕಾಶ, ಹರ್ಷ, ದೇವರಜ್, ಸಾಧನಾ, ಭಾಗ್ಯಶ್ರೀ, ಪವನ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…