ಸೇಡಂ: ಬೇರೊಬ್ಬರ ಮುಲಾಜಿನಲ್ಲಿದ್ದು ಹೊರಬರುವ ಸುದ್ದಿಗಳು ದೇಶಕ್ಕೆ ಮಾರಕ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮನು ಬಳಿಗಾರ ಹೇಳಿದರು.
ಬೆಂಗಳೂರಿನ ನಯನ ಸಭಾಂಗಣದಲ್ಲಿ ಪತ್ರಕರ್ತರ ವೇದಿಕೆ, ಕರ್ನಾಟಕ ಮೀಡಿಯಾ ಮತ್ತು ನ್ಯೂಸ್ ಸೆಂಟರ್ ಸಹಯೋಗದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ರಾಜ್ಯ ಮಟ್ಟದ ಹೂಗಾರ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಯಾರ ಮುಲಾಜಿಗೂ ಒಳಗಾಗದೇ ನೇರ, ದಿಟ್ಟ ವರದಿಗಾರಿಕೆ ಮಾಡಬೇಕು. ಉತ್ತಮ ನಡವಳಿಕೆ ರೂಢಿಸಿಕೊಂಡಾಗ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ಜರ್ನಲಿಸ್ಟ್ ಯುನಿಯನ್ ರಾಜ್ಯಾಧ್ಯಕ್ಷ ಟಿ. ನಾರಾಯಾಣ ಮಾತನಾಡಿ ಪತ್ರಕರ್ತರನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನ್ನಲಾಗಿದೆ. ಆದರೆ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಕ್ಕೆ ಇರುವ ರಕ್ಷಣೆ ಪತ್ರಿಕಾ ರಂಗಕ್ಕೆ ಇಲ್ಲ. ಪತ್ರಕರ್ತರಿಗೆ ರಕ್ಷಣೆಯ ಅವಶ್ಯಕತೆ ಇದೆ. ತಮ್ಮ ಸರ್ವಸ್ವವನ್ನೂ ಬದಿಗೊತ್ತಿ ಸಮಾಜಕ್ಕಾಗಿ ಹೋರಾಡಿದ ಅನೇಕ ಪತ್ರಕರ್ತರು ಅನಾರೊಗ್ಯಕ್ಕೆ ಈಡಾಗಿ ಆಸ್ಪತ್ರೆ ಪಾಲಾದಾಗ, ಆಸ್ಪತ್ರೆಯ ಬಿಲ್ ಸಹ ಕಟ್ಟಲಾಗದೆ ಪರಿತಪಿಸಿದ್ದಾರೆ. ಅಂತವರ ಪೈಕಿ ಕೆಲವರು ಸಾವನ್ನಪ್ಪಿದಾಗ ಅವರ ಶವ ಆಸ್ಪತ್ರೆಯಿಂದ ಹೊರತರಲು ಹಣ ಇಲ್ಲದೆ ಕುಟುಂಬಸ್ಥರು ಒದ್ದಾಡಿದ ಅನೇಕ ಉದಾಹರಣೆಗಳಿವೆ ಎಂದು ಮಾರ್ಮಿಕವಾಗಿ ನುಡಿದ ಅವರು, ಪತ್ರಕರ್ತರ ಜೀವನಕ್ಕೆ ಆರ್ಥಿಕ ಸೌಕರ್ಯ ಮತ್ತು ಸುರಕ್ಷತೆ ದೊರೆಯಬೇಕು ಎಂದರು.
ಸಿದ್ಧಾಶ್ರಮದ ಮಾದುಲಿಂಗ ಮಹಾರಾಜರು, ಚಲನಚಿತ್ರನಟಿ ರೂಪಿಕಾ, ಮಹಿಪಾಲರೆಡ್ಡಿ ಮುನ್ನೂರ, ನಾಗಯ್ಯಸ್ವಾಮಿ ಬೊಮ್ನಳ್ಳಿ ಇನ್ನಿತರರು ಉಪಸ್ಥಿತರಿದ್ದರು.
ಇದೇ ವೇಳೆ ಎಂ.ಎಸ್.ಮಣಿ ಬೆಂಗಳುರು, ಭವಾನಿ ಮಂಜಣ್ಣ ಚಿತ್ರದುರ್ಗ, ನಾಗಶೆಟ್ಟಿ ಧರ್ಮಾಪೂರ ಬೀದರ, ಸಿದ್ದಣ್ಣಗೌಡ ಪಾಟೀಲ ಕೊಪ್ಪಳ, ಪೂರ್ಣಿಮಾ ಬೆಂಗಳೂರು, ಲಾಂಚನ ಬೆಂಗಳೂರು, ಡಾ. ದಿನೇಶ ಶೆಟ್ಟಿ ಮುಂಬೈ, ಮಾನಸ ಬೆಂಗಳೂರು, ನಿಖಿತಾ ಬೆಂಗಳೂರು, ಅರ್.ಟಿ. ಜಗದೀಶ ಉಡಪಿ, ಮಹೇಶ ಅಂಗಡಿ ಬಾಗಲಕೋಟ, ಶಿವು ನಿಡಗುಂದಾ ಸೇಡಂ, ಲಕ್ಷ್ಮೀಕಾಂತ ಕುಲಕರ್ಣಿ ಯಾದಗಿರಿ, ದುರ್ಗಪ್ಪ ನಾಯಕ ಧಾರವಾಡ, ಮಹ್ಮದ ಖಾಜಾ ಹುಸೇನ ರಾಯಚೂರು, ಪ್ರಕಾಶ ಅಲಬಾಳ ಜೇವರ್ಗಿ, ಕಲ್ಲಪ್ಪ ಚೌಕಾಶಿ ಬೆಳಗಾಂ, ಮಹಾದೇವ ಬಿರಾದಾರ ಅಥಣಿ, ವಾಗೀಶ ಬಳ್ಳಾರಿ, ಎನ್. ವೇಣುಗೋಪಾಲ ರಾಮನಗರ, ಮಿಂಚು ಶ್ರೀನಿವಾಸ ಬೆಂಗಳೂರು ಅವರಿಗೆ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಹೂಗಾರ ಸ್ಮಾರಕ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…