ಸುರಪುರ: ನಗರದ ಗೋಲ್ಡನ್ ಕೇವ್ ಬುದ್ಧವಿಹಾರದಲ್ಲಿ ಮೂಲನಿವಾಸಿ ಅಂಬೇಡ್ಕರ್ ಸೇನೆಯ ಪದಾಧಿಕಾರಿಗಳ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪುನಶ್ಚೇತನ ಸಭೆ ನಡೆಸಲಾಯಿತು.
ಸಬೆಯಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿರುವುದು ಮತ್ತು ಶೋಷಿತ ವರ್ಗದವರಿಗೆ ಸರಕಾರದಿಂದ ನೆಪಕ್ಕೆ ಮಾತ್ರ ಸರಕಾರಿ ಸೌಲಭ್ಯಗಳನ್ನು ನೀಡುತ್ತಿರುವುದು ಖಂಡನಿಯವಾದುದು, ವಿಶೇಷವಾಗಿ ಸುರಪುರ ಮತ್ತು ಹುಣಸಗಿ ತಾಲೂಕಿನಾದ್ಯಂತ ದಲಿತರ ಮಾರಣ ಹೋಮಗಳನ್ನು ನಡೆಯುತ್ತಿರುವದು ಮತ್ತು ಪೋಲಿಸ್ ಇಲಾಖೆ ಪ್ರಕರಣಗಳ ತನಿಖೆಯಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು.ಅಲ್ಲದೆ ಮುಂದಿನ ದಿನಗಳಲ್ಲಿ ಸಂಘಟನೆಯು ಜಿಲ್ಲೆಯಾದ್ಯಂತ ಹೋರಾಟಕ್ಕೆ ಅಣಿಯಾಗಲು ರಾಜ್ಯ ಮಟ್ಟದ ಸಬೆಯನ್ನು ಇಲ್ಲಿಯೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು. ರಾಜ್ಯ ಸಂಚಾಕರಾಗಿ ಧನರಾಜ ನಾಗವಂಶಿ ಬೆಂಗಳೂರು ಮತ್ತು ರಾಜ್ಯ ಸಂಘಟನಾ ಸಂಚಾಲಕರಾಗಿ ರಾಹುಲ್ ಹುಲಿಮನಿ, ಶರಣು ಹೊಸಮನಿ, ಕಲಬುರ್ಗಿ ವಿಭಾಗಿಯ ಸಂಚಾಲಕರಾಗಿ ಶರಣು ಬೂತಾಳಿ ಯಾದಗಿರಿ ಜಿಲ್ಲಾ ಸಂಚಾಕರಾಗಿ ಮೈಲಾರಿ ಹೊಸಮನಿ ಜಿಲ್ಲಾ ಸಂಘಟನಾ ಸಂಚಾಲಕರಾಗಿ ಹೈಯಾಳಪ್ಪ ದೆವಕರ್, ಹಣಮಂತ ಚಲವಾದಿ, ಯಮನಪ್ಪ ಚನ್ನುರು, ಬಾಬು ತಲಾರಿ,ಶಿವಣ್ಣ ಸಾಸಗೇರಿ ಮತ್ತು ಸುರಪೂರ ತಾಲೂಕ ಸಂಚಾಲಕರಾಗಿ ರಾಜು ಬಡಿಗೇರ್ ಶಹಾಪುರ ತಾಲೂಕ ಸಂಚಾಲಕರಾಗಿ ಶರಣಪ್ಪ ಅಣಭಿ ಯವರು ಪದಾಧಿಕಾರಿಗಳಾಗಿ ಸರ್ವಾನುಮತದಿಂದ ಆಯ್ಕೆಗೊಳಸಲಾಯಿತು.
ಸಭೆಯ ಆರಂಭದಲ್ಲಿ ಬುದ್ದವಂದನೆಯನ್ನು ಸಲ್ಲಿಸಿ ನಂತರ ಕೊನೆಯಲ್ಲಿ ಬಾಬಾಸಾಹೇಬ್ ಅಂಬೆಡ್ಕರ್ ರವರ ಪುತ್ತಳಿಗೆ ಮಾಲಾರ್ಪಣೆ ಮಾಡಿದನಂತರ ಸಭೆಯನ್ನು ಮುಗಿಸಲಾಯಿತು. ಸಭೆಯಲ್ಲಿ ಪದಾಧಿಕಾರಿಗಳಾದ ಮರೆಪ್ಪ ಸಲಾದಪೂರ,ವೆಂಕಟೇಶ ಬಡಿಗೇರ್,ಸತಿಶ ಯಡಿಯಾಪುರ, ಹನಮಂತ ರತ್ತಾಳ, ಮಾನಪ್ಪ ರತ್ತಾಳ,ಅಯ್ಯಪ್ಪ ಬೆವಿನಾಳ, ನಾಗರಾಜ ಬೆವಿನಾಳ, ಲತಿಫ್ ಯಾದಗಿರ,ಶರಣು ಹುಲಿಮನಿ,ಮಲ್ಲು ಅಮ್ಮಾಪುರ, ಮುತ್ತು ಅಮ್ಮಪುರ,ಯಲ್ಲಪ್ಪ ರತ್ತಾಳ ಸೇರಿದಂತೆ ಇನ್ನೂ ಅನೇಕ ಕಾರ್ಯಾಕರ್ತರು ಭಾಗವಹಿಸಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…