ಇನ್ನೇನಿಲ್ಲ… ಭೀಮಾತೀರದ ಹಂತಕರೆಂಬ ” ಪದ ” ಮತ್ತೆ ಮತ್ತೆ ನನ್ನ ಚಿತ್ತಭಿತ್ತಿಯ ಮೇಲೆ ಘೋರ ದಾಳಿ ಮಾಡಿದಂತೆ ನೆನಪಿನ ” ಕ್ರೂರಪದ “ವಾಗಿ ನನ್ನೆದೆಯಲ್ಲಿ ಸಾವಿರ ಡೊಳ್ಳು ಬಡಿದಂತಾಗುತ್ತದೆ. ಅದ್ಯಾವುದೋ ತರಕಲಾಂಡಿ ಖೂನಿಕೋರರಿಂದಾಗಿ ಇಡೀ ಭೀಮೆಯ ಸೀಮೆಯನ್ನು ಹೀಗೆ ಗುರುತಿಸುವುದೇ…!? ಎಂಬ ಸಹಜ ಸಿಟ್ಟು, ಸಂಕಟ, ಬೇಸರ ನನಗಿದೆ.
ನೆನಪಿರಲಿ… ಭೀಮೆಯೆಂಬುದು ಅನುಭಾವ ಲೋಕದ ಆಡುಂಬೊಲ. ಜಾನಪದರ ಕಣಜ ಭೂಮಿ. ಸಾಹಿತಿ – ಸಂಶೋಧಕರ ಮಹಾಮನೆ. ರಂಗ ಸಂಸ್ಕೃತಿಯ ನೆಲೆವೀಡು. ತತ್ವ ಜ್ಞಾನ ಪದಗಳ ಹರಿಕಾರ ಕಡಕೋಳ ಮಡಿವಾಳಪ್ಪ, ವಚನಕಾರರ ಮೊದಲ ಸಾಲಿನ ಮೊದಲಿಗರಲ್ಲಿನ ಷಣ್ಮುಖ ಶಿವಯೋಗಿ, ದಾಸೋಹ ಯೋಗಿ ಮತ್ತು ಕೃಷಿ ಕಾಯಕಜೀವಿ ಅಳಗುಂಡಗಿ ಶರಣಬಸಪ್ಪ ಈ ನೆಲದ ಮಹಾ ಮಹಿಮರು. ಹಾಗೆಯೇ ಪಿ. ಧೂಲಾಸಾಹೇಬರೆಂಬ ಜಿಜ್ಞಾಸು, ಅನುಭಾವಿ ಮಧುರ ಚೆನ್ನರು, ಮತ್ತವರ ಸ್ನೇಹಶೀಲ ತಿತೀಕ್ಷೆಯ ಹಲಸಂಗಿ ಗೆಳೆಯರ ಬಳಗ ಓಡಾಡಿದ ಪ್ರಾತಃಸ್ಮರಣೀಯ ಪುಣ್ಯಭೂಮಿ ಈ ನೆಲ. ವರನಟ ಡಾ. ರಾಜಕುಮಾರರಷ್ಟು ಪ್ರತಿಭಾಶಾಲಿ – ಅಭಿನಯ ಚತುರ ಕಲಾವಿದ ಹಂದಿಗನೂರ ಸಿದ್ರಾಮಪ್ಪ ಇದೇ ಪರಿಸರದವರು.
ಮರೆಯುವ ಮೊದಲು…ಖ್ಯಾತ ಸಂಶೋಧಕ, ಸಾಹಿತಿ ಡಾ. ಎಂ.ಎಂ.ಕಲಬುರ್ಗಿ, ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ (ಕೊಪ್ಪಳ ) ರಾಗಿದ್ದ ಜವಾರಿ ಸಾಹಿತಿ ಸಿಂಪಿ ಲಿಂಗಣ್ಣ ಅವರು ಇದೇ ನೆಲದವರು. ನಮ್ಮ ಕಾಲದ ಸಂಸ್ಕೃತಿ ಚಿಂತಕಿ, ನಮ್ಮ ನಡುವಿನ ಬಾಳಿ ಮೀನಾಕ್ಷಿ , ನಾಟಕಕಾರರಾದ ಎಲ್.ಬಿ.ಕೆ. ಆಲ್ದಾಳ ಮತ್ತು ಜೇವರಗಿ ರಾಜಣ್ಣನವರೆಗೂ ಪಟ್ಟಿ ಮಾಡುತ್ತಾ ನಡೆದರೆ… ನಮಗೆ ಪವಾಡ ಸದೃಶ ದೊಡ್ಡ ಪಟ್ಟಿಯೇ ದೊರಕುತ್ತದೆ. ಜೀವಧರ್ಮ ಬಾಳಿ, ಬದುಕಿದ ನಿತ್ಯ ಜೀವನದ ಲೆಕ್ಕವಿಡದ (ಆದರೆ ಲೆಕ್ಕಕ್ಕೆ ಬಾರದವರೆಂದು ಭಾವಿಸಬಾರದು) ಅಸಂಖ್ಯಾತರು ಇವತ್ತಿಗೂ ನೆಲಧರ್ಮ ಸಂಸ್ಕೃತಿ ಬದುಕುತ್ತಿರುವುದನ್ನು ನೆನಪಿಡಬೇಕಿದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…