ಕಲಬುರಗಿ: ಕರ್ನಾಟಕ ರಕ್ಷಣಾ ವೇದಿಕೆ ಕಾನೂನು ಘಟಕ ಏರ್ಪಡಿಸಿದ್ದ ಕೊವಿಷಿಲ್ಡ್ ಲಸಿಕೆ ಅಭಿಯಾನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರ ಸಿಂಪಿ ಅವರು 2ನೇ ಡೋಸ್ ಲಸಿಕೆ ಪಡೆದು ಯುವಕರನ್ನುದ್ದೇಶಿಸಿ ಮಾತನಾಡಿದರು.
ಸಮಾಜದ ಸ್ವಾಸ್ಥ್ಯ ಬದುಕನ್ನು ಕೆಡೆಸುತ್ತಿರುವ ಈ ಕೊರೊನಾ ಮಹಾ ಮಾರಿಯನ್ನು ನಾವು ಇಂದಿನ ಆಧುನಿಕ ಯುಗದಲ್ಲಿ ಶಸಕ್ತ ಮನಸ್ಸಿನಿಂದ ಎದುರಿಸುವುದು ಕಷ್ಟವೇನಲ್ಲ ಎಂದು ಅವರು ನುಡಿದರು.
ಹಿಂದೆ ಪ್ಲೇಗ್ , ಪಿಡುಗು, ಸಿಡಬು,ಪೊಲಿಯೂ ಮಹಾ ಮಾರಿ ಹಾವಳಿಯಂತಹ ಮಹಾ ಮಾರಕ ರೋಗಗಳನ್ನು ಇಂದಿನಷ್ಟು ಅನುಕೂಲತೆ & ಸರಿಯಾದ ಮಾಹಿತಿ ಗಳಿಲ್ಲದಿದ್ದರೂ ಅಂದಿನ ಪರಿಸ್ಥಿತಿಗಳನ್ನು ನಮ್ಮ ಪೂರ್ವಜರು ಎದುರಿಸಿ ಬಂದ್ದಿದ್ದರಿಂದಲೆ ಇಂದು ನಾವುಗಳಿದ್ದೇವೆ. ಆದರೆ ಅಂದಿನ ಸಂಘಟನಾತ್ಮಕ ಕಳಕಳಿಯ ಕೊರತೆಯನ್ನು ಇಂದು ಕಾಣಿಸುತ್ತೀದೆ.
ಕೆಲವರ ಬೇಜವ್ದಾರಿ, ಸರಿಯಾದ ನಿಯಮ ಪಾಲನೆಗಳಿಲ್ಲದೆ. ಕೊರೊನಾ ಹೆಚ್ಚಾಗಲು ಕಾರಣವಾಗಿ ಅಂದೆಷ್ಟೋ ಬಡ ಕುಟುಂಬಗಳ ನೋವುಗಳಿಗೆ ಪರೊಕ್ಷವಾಗಿ ಹೊಣೆಗಾರರಾದಂತಾಗಿದೆ. ಇನ್ನಾದರು ಎಚ್ಚರವಹಿಸಿ ಪ್ರತಿಯೊಬ್ಬರು ಜಾತಿ,ಧರ್ಮಗಳೆನ್ನದೆ ಕಡ್ಡಾಯವಾಗಿ ಲಸಿಕೆ ಪಡೆದು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಕೊರೊನಾವನ್ನು ಹೊಸಕಿ ಹಾಕಲು ಸಾಧ್ಯವೆಂದರು
ಡಾ. ಸುಜಾತಾ ಕಮಲಾಪುರಕರ್, ವೈಶಾಲಿ ನಾಟೀಕಾರ, ಮಾಲಾ ಧಣ್ಣುರ, ಭುವನೇಶ್ವರಿ ಹಳ್ಳಿಖೇಡ, ಮಾಲಾ ಕಣ್ಣಿ, ಪ್ರಸಾದ್ ಜೋಷಿ,ಶಿವಾನಂದ ಮಠಪತಿ,ಶಿವಾನಿ ರಾವ್, ಇಂದ್ರಾರಡ್ಡಿ, ಮಲ್ಲಿಕಾರ್ಜುನ ಭಾಗೊಡಿ, ದೌಲತರಾಯ ಮಾ.ಪಾಟೀಲ, ಸಿದ್ರಾಮಯ್ಯ ಎಸ್ ಹಿರೇಮಠ, ಹಣಮಂತರಾಯ ಮಂಗಾಣೆ, ಬಸವರಾಜ ಮ್ಯಾಗೇರಿ, ಸುಜಾತಾ ಪುಜಾರಿ ಮತ್ತು ಸಿಂಪಿ ಕುಟುಂಬದ ಸದಸ್ಯರು ಲಸಿಕೆಗಳನ್ನು ಪಡೆದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…