ಬಿಸಿ ಬಿಸಿ ಸುದ್ದಿ

ತೆರಿಗೆ ವಸೂಲಾತಿ ಬಾಕಿಯಿದ್ದಲ್ಲಿ ಅಧಿಕಾರಿಗಳನ್ನೆ ಹೊಣೆಗಾರನ್ನಾಗಿ ಮಾಡಲಾಗುವುದು:ಸಚಿವ ಯು.ಟಿ.ಖಾದರ

ಕಲಬುರಗಿ: ರಾಜ್ಯಾದ್ಯಂತ ನಗರ-ಸ್ಥಳೀಯ ಸಂಸ್ಥೆಗಳಲ್ಲಿ ಶೇ.೧೫ ರಿಂದ ೨೦ರಷ್ಟು ತೆರಿಗೆ ಬಾಕಿ ಇದ್ದು, ನಿಗಧಿತ ಅವಧಿಯಲ್ಲಿ ತೆರಿಗೆ ವಸೂಲಾತಿಗೆ ಕ್ರಮ ವಹಿಸದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ನೇರವಾಗಿ ಹೊಣೆಗಾರನ್ನಾಗಿ ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ ತಿಳಿಸಿದರು.

ಮಂಗಳವಾರ ಸಚಿವರು ಕಲಬುರಗಿ ನಗರ ಪ್ರದಕ್ಷಿಣೆ ಮುನ್ನ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಈ ಸಂಬಂಧ ಕೆಳ ಹಂತದ ಸಿಬ್ಬಂದಿಗಳಿಗೆ ಹೆಚ್ಚಿನ ಕಾಳಜಿ ವಹಿಸಿ ತೆರಿಗೆ ವಸೂಲಾತಿಗೆ ಅಧಿಕಾರಿಗಳು ಸೂಕ್ತ ನಿರ್ದೇಶನ ನೀಡಬೇಕು ಎಂದರು.

ಇತ್ತೀಚೆಗೆ ವಾಡಿಕೆಯಂತೆ ಮಳೆಯಾಗದ ಕಾರಣ ನಗರ-ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ತೊಂದರೆ ಅನುಭವಿಸಲಾಗುತ್ತಿದೆ. ಇದನ್ನು ತಪ್ಪಿಸಲು ಪಟ್ಟಣ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಿಸಲು ಇಲಾಖೆಯಿಂದ ಯೋಜನೆ ಹಾಕಿಕೊಳ್ಳಲಾಗುವುದು. ಕುಡಿಯುವ ನೀರು ಪೂರೈಕೆ ಕುರಿತಂತೆ ಸ್ಥಳೀಯ ಸಂಸ್ಥೆಗಳ ಜೊತೆ ಜಲಮಂಡಳಿಯು ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಲಾಗುವುದು ಎಂದರು.

ಮೈತ್ರಿ ಸರ್ಕಾರ ಸುಭದ್ರ:- ಶಾಸಕರ ರಾಜಿನಾಮೆ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಯು.ಟಿ.ಖಾದರ ಅವರು ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಸುಭದ್ರವಾಗಿದ್ದು, ಐದು ವರ್ಷ ಆಡಳಿತ ನಡೆಸಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟನೆ ನೀಡಿದರು.

ಐ.ಎಂ.ಎ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ತನಿಖೆಗೆ ಎಸ್.ಐ.ಟಿ. ತಂಡ ರಚಿಸಿದ್ದು, ತನಿಖೆ ಪ್ರಗತಿಯಲ್ಲಿದೆ. ರಾಜ್ಯದ ಪೊಲೀಸ್ ಅಧಿಕಾರಿಗಳ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ಪಾರದರ್ಶಕವಾಗಿ ತನಿಖೆ ಕೈಗೊಂಡು ಸತ್ಯಾಸತ್ಯತೆ ಬಯಲಿಗೆ ಬರಲಿದೆ. ಹೀಗಾಗಿ ಪ್ರಕರಣ ಸಿ.ಬಿ.ಐ.ಗೆ ವಹಿಸಬೇಕೆಂಬ ವಿರೋಧ ಪಕ್ಷದವರ ಬೇಡಿಕೆ ಅಪ್ರಸ್ತುತ ಎಂದರು.

೧೦.೫೦ ಕೋಟಿ ರೂ. ತೆರಿಗೆ ಸಂಗ್ರಹ:- ಸಮಾಜ ಕಲ್ಯಾಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ೬ ತಿಂಗಳಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ ಪರಿಣಾಮ ೧೦.೫೦ ಕೋಟಿ ರೂ. ತೆರಿಗೆಯನ್ನು ಸಂಗ್ರಹಿಸಲಾಗಿದೆ. ಇದು ಪಾಲಿಕೆ ಇತಿಹಾಸದಲ್ಲಿಯೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಕರ ವಸೂಲಾತಿ ಇದಾಗಿದೆ ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿ ಕರ ವಸೂಲಾತಿ ಸಂಗ್ರಹಣಕ್ಕೆ ಇಡಿಸಿ ಸ್ವೈಪ್ ಮಶೀನ್ ಸಾಫ್ಟವೇರ್ ಅಭಿವೃದ್ಧಿಪಡಿಸಲಾಗಿದ್ದು. ಕೆಲವು ವಾರ್ಡುಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿದೆ. ಮುಂದಿನ ೨ ವಾರಗಳಲ್ಲಿ ಎಲ್ಲಾ ವಾರ್ಡುಗಳಲ್ಲಿ ಪಾಲಿಕೆಯ ಸಿಬ್ಬಂದಿಗಳು ಇಡಿಸಿ ಮಶೀನ್ ಮೂಲಕ ಮನೆ-ಮನೆಗೆ ತೆರಳಿ ಸ್ಥಳದಲ್ಲಿಯೆ ಕರ ವಸೂಲಾತಿ ಮಾಡಲಿದ್ದಾರೆ ಎಂದರು.

ಕಲಬುರಗಿ ನಗರದಲಿ ಹಿಂದೆಲ್ಲ ಮಳೆ ಬಂದರೆ ಸಂಚಾರ ಅಸ್ಥವ್ಯಸ್ಥವಾಗುವುದ್ದನ್ನು ಕಂಡಿದ್ದೇವೆ. ಇನ್ನು ಮುಂದೆ ಹೀಗಾಗದಂತೆ ಪಾಲಿಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿಲಾಗಿದೆ. ಪರಿಣಾಮ ಇತ್ತೀಚೆಗೆ ಮಳೆ ಬಿದ್ದ ತಕ್ಷಣ ಪಾಲಿಕೆಯ ಸ್ವಚ್ಛತಾ ತಂಡ ಕೂಡಲೆ ಒಳಚರಂಡಿ ಸ್ವಚ್ಛತೆಗೆ ಅಣಿಯಾಗಿತ್ತು. ಇದರಿಂದ ಚರಂಡಿಯಲ್ಲಿ ನೀರು ಸರಾಗವಾಗಿ ಸಾಗಿ ಸಾರ್ವಜನಿಕರ ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕಲಬುರಗಿ ನಗರದಲ್ಲಿನ ಕುಡಿಯುವ ನೀರಿಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ೩೦ ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.

ಈ ಸಂದರ್ಭದಲ್ಲಿ ಕಲಬುರಗಿ ದಕ್ಷಿಣ ಶಾಸಕಿ ಖನೀಜ್ ಫಾತಿಮಾ, ವಿಧಾನ ಪರಿಷತ್ತಿನ ಶಾಸಕ ತಿಪ್ಪಣಪ್ಪ ಕಮಕನೂರ, ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಜಗದೇವ ಗುತ್ತೇದಾರ ಇದ್ದರು.

emedialine

Recent Posts

ಡಾ. ಫ.ಗು. ಹಳಕಟ್ಟಿ ಯವರ ಜಯಂತಿ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ

ಕಲಬುರಗಿ: ವಚನ ಪಿತಾಮಹ ಎಂದು ಕರೆಸಿಕೊಳ್ಳುವ ಡಾ. ಫ.ಗು. ಹಳಕಟ್ಟಿ ಯವರು ಬಸವಾದಿ ಶರಣರ ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡುವ…

1 hour ago

ಮೊಬೈಲ್ ರೀಚಾರ್ಜ್‍ಗಳ ಬೆಲೆ ಹೆಚ್ಚಳ ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಪ್ರತಿಭಟನೆ

ಶಹಾಬಾದ: ಖಾಸಗಿ ಟೆಲಿಕಾಂ ಕಂಪನಿಗಳು ಮೊಬೈಲ್ ರೀಚಾರ್ಜ್‍ಗಳ ಬೆಲೆಗಳನ್ನು ಅನಿಯಂತ್ರಿತವಾಗಿ ಹೆಚ್ಚಳ ಮಾಡಿರುವುದನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಎಐಡಿವಾಯ್‍ಓ ವತಿಯಿಂದ…

1 hour ago

ಸಾರ್ವಜನಿಕರು ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಿ

ಶಹಾಬಾದ :ಎಲ್ಲರಿಗೂ ಸರಕಾರಿ ನೌಕರಿ ಬೇಕು.ಆದರೆ ಸರಕಾರಿ ಶಾಲೆಯಲ್ಲಿ ನಿಮ್ಮ ಮಕ್ಕಳು ಓದುವುದು ಬೇಡ ಎಂದರೆ ಹೇಗೆ ? ಮೊದಲು…

2 hours ago

ಪಠ್ಯಕ್ರಮ ರಚನೆ ಗುಣಾತ್ಮಕ ಅಂಶಗಳಿಂದ ಕೂಡಿರಲಿ

ವಿಜಯಪುರ: ಇಂದಿನ ಪ್ರಸ್ತುತ ಶಿಕ್ಷಣ ಪದ್ದತಿ ಕೌಶಲ್ಯಾಧಾರಿತ ಹಾಗೂ ಔದ್ಯೋಗಿಕ ಮತ್ತು ಉದ್ಯೋಗ ಪೂರಕನಂತೆ ಇರಬೇಕು ಎಂದು ಕರ್ನಾಟಕ ರಾಜ್ಯ…

3 hours ago

ಪತ್ರಕರ್ತ ಸಿದ್ರಾಮ್ ನಾಡಗೇರಿ ಪುತ್ರಿ ಸ್ಪಂದನಾ ಎಸ್. ನಡಗೇರಿಗೆ ಪತ್ರಕರ್ತರ ಸಂಘದಿಂದ ಸನ್ಮಾನ

ಹಾವೇರಿ: SSLC,PUC ಯಲ್ಲಿ 90% ಕಿಂತ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು,…

3 hours ago

ಸೇವಾ ಮನೋಭಾವದ ಮನಸ್ಸು ಹೆಚ್ಚಾಗಲಿ: ಜ್ಯೋತಿ ಪಾಟೀಲ್

ಕಲಬುರಗಿ: ನೌಕರಿ ಕಾಯಕವಾದರೆ ತೃಪ್ತಿ ಜೀವನ, ವೃತ್ತಿಯಲ್ಲಿ ಸೇವಾ ಮನೋಭಾವ ಹೊಂದಿದರೆ ಆತ್ಮಶುದ್ಧಿಯಾಗಿ ಸಂತೃಪ್ತ ಜೀವನ ನಮ್ಮದಾಗುತ್ತದೆ ಎಂದು ಉಪಳಾಂವ…

3 hours ago