ಬಿಸಿ ಬಿಸಿ ಸುದ್ದಿ

ಜಾನಪದವನ್ನು ಅರೆತು ಹೆಚ್ಚು ಒತ್ತು ಕೊಟ್ಟರೆ ಉಳಿಸಿ ಬೆಳೆಸಬಹುದು: ಎಂ.ಬಿ.ನಿಂಗಪ್ಪ

ಕಲಬುರಗಿ: ಜಾನಪದ ಅನ್ನೊದು ಪ್ರತಿಯೊಬ್ಬರಿಗೂ ಬೇಕಾಗಿರೊದೆ ಆದರೆ ಇಂದಿನ ದಿನಗಳಲ್ಲಿ ನಮ್ಮ ಯುವಕ ಯುವತಿಯರು ಮೊಬೈಲಿನಲ್ಲಿ ಮಾರುಹೊಗುತ್ತಿದ್ದಾರೆ. ಆದ ಕಾರಣ ಪ್ರತಿಯೊಬ್ಬರು ಜಾನಪದವನ್ನು ಅರೆತು ಹೆಚ್ಚು ಒತ್ತು ಕೊಟ್ಟರೆ ಜಾನಪದ ಉಳಿಸಿ ಬೆಳೆಸಬಹುದು ಎಂದು ಕಲಬುರಗಿ ಕನ್ನಡ ಜಾನಪದ ಪರಷತ್‌ನ ಜಿಲ್ಲಾಧ್ಯಕ್ಷ ಎಂ.ಬಿ. ನಿಂಗಪ್ಪ ಹೇಳಿದರು.

ನಗರದ ಕಲಾಮಂಡದಲ್ಲಿ ಸರಸ್ವತಿ ಸಾಂಸ್ಕೃತಿಕ ಕಲಾ ಟ್ರಸ್ಟ್ ರಿ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಾನಪದ ಸಂಗೀತೊತ್ಸವ ೨೦೨೧ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಜಾನಪದ ಕಲಾವಿದರಾದ ಸಿದ್ಧಾರ್ಥ ಚಿಮ್ಮಾ ಇದಲಾಯ ಅವರು ಮಾತನಾಡಿ ನಮ್ಮ ಭಾಗದಲ್ಲಿ ಅತಿ ಹೆಚ್ಚು ಹೆಚ್ಚು ಯುವ ಕಲಾವಿದರು ಇದ್ದಾರೆ ಆದರೆ ಅವರಿಗೆ ಸೂಕ್ತ ವೇದಿಕೆ ಸಿಗುತ್ತಿಲ್ಲಾ. ಇಂಥಹ ಸಂಸ್ಥೆ ಯವರು ನಮ್ಮ ಕಲಾವಿದರಿಗೆ ವೇದಿಕೆ ರೂಪಿಸಿದರೆ ಮಾತ್ರ ನಮ್ಮ ಕಲಾವಿದರು ರಾಜ್ಯ ಮಟ್ಟದಲ್ಲಿ ಮತ್ತು ರಾಷ್ಟೃಮಟ್ಟದಲ್ಲಿ ಅವರ ಪ್ರತಿಭೆ ತೊರಿಸಲು ಮಾತ್ರ ಸಾದ್ಯ ಎಂದು ಹೇಳಿದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಬಸವರಾಜ ಸಿ ತೋಟದ್ ಮಾತನಾಡುತ್ತಾ ಅವರು, ರಾಜ್ಯದ ಯುವಕ ಯುವತಿಯರಿಗಾಗಿಯೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯವರ ತಾಲುಕು, ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ರಾಷ್ಟ್ರದ ಯುವಜನೋತ್ಸವ ಕಾರ್ಯಕ್ರಮ ಹಮ್ಮಿಕೋಳ್ಳುತ್ತಾರೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಜಾನಪದ ಸಂಸ್ಕೃತಿ ಉಳಿಸಿ ಬೆಳಸಬಹುದು ಎಂದು ತುಂಬಾ ಹೆಮ್ಮೆಯಿಂದ ಹೇಳಿದರು.

ಈ ಕಾರ್ಯಕ್ರಮದಲ್ಲಿ ಎಚ್.ಎಸ್.ಬರಗಾಲಿ, ಹುಣಚಪ್ಪಾ ಪೂಜಾರಿ, ಚಂದ್ರಶೇಖರ ಹಾಗರಗುಂಡಗಿ, ಟ್ರಸ್ಟಿನ ಕಾಂiiದರ್ಶಿಯಾದ ಮಹೇಶ ದೇವಣಿ ಅಧ್ಯಕ್ಷತೆ ವಹಿಸಿದರು.

ಈ ಕಾರ್ಯಕ್ರಮದಲ್ಲಿ ಕಲಾವಿದರಾದ ಶ್ರೀಧರ ಹೊಸಮನಿ ಜಾನಪದ ಗಾಯನ, ಪರಶುರಾಮ ಜವಳ್ಕರ ಮೋಹರಂ ಪದ, ರಾಣಪ್ಪ ಎಸ್ ಕಾಂಬಳೆ ಹಂತಿ ಪದ, ಮಹಾಂತೆಶ ಕಾಂಬಳೆ ಗೀಗಿ ಪದ, ಮಾಳಿಂಗರಾಯ ಮತ್ತು ತಂಡ ಡೋಳ್ಳು ಕುಣಿತ, ಗಣಪತಿ ಕುಸನೂರ ಮತ್ತು ತಂಡ ಹಲಗೆ ವಾದನ, ಸುಸಲಾಬಾಯಿ ಮತ್ತು ತಂಡ ತತ್ವ ಪದ, ಇವೆಲ್ಲಾ ಕಾರ್ಯಕ್ರಮ ಜರುಗಿದವು, ಕಾರ್ಯಕ್ರಮದ ನಿರುಪಣೆ ವಿಶ್ವನಾಥ ತೊಟ್ನಳ್ಳಿ, ದತ್ತುಕುಮಾರ ವಂದಿಸಿದರು.

emedialine

Recent Posts

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಓದು ಕಾರ್ಯಕ್ರಮ

ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…

6 hours ago

ಶೋಷಿತ ಜನಜಾಗೃತಿ ವೇದಿಕೆ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ

ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…

6 hours ago

ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರು: ಡಾ. ಎಸ್.ಎಸ್. ಗುಬ್ಬಿ ಬೇಸರ

ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…

6 hours ago

ಹಣೆಯ ಮೇಲೆ ಹಚ್ಚಿದ ವಿಭೂತಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಅರ್ಪಿತಾ ಪಾಟೀಲ

ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…

6 hours ago

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…

6 hours ago

ಸಂವಿಧಾನವನ್ನು ರಕ್ಷಿಸಲು ಜವಾಬ್ದಾರಿ ಯುವಕರು ಮೇಲಿದೆ : ಹಿರಿಯ ವಕೀಲ ವೈಜನಾಥ ಎಸ್ ಝಳಕಿ

ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…

6 hours ago