ಬಿಸಿ ಬಿಸಿ ಸುದ್ದಿ

ಮನ್ ಕಿ ಬಾತ್ ದೇಶದಲ್ಲೇ ಮೊದಲ ಪ್ರಯತ್ನ ಮಾಡಿದ್ದು ಮೋದಿಯವರು: ಶಾಸಕ ಮತ್ತಿಮಡು

ಶಹಾಬಾದ: ಮನ್ ಕಿ ಬಾತ್ ಮೂಲಕ ಜನಸಾಮಾನ್ಯರೊಂದಿಗೆ ಪ್ರಧಾನಿಯೊಬ್ಬರು ತಿಂಗಳಿಗೊಮ್ಮೆ ಮಾತಾಡುವುದು ದೇಶದ ಇತಿಹಾಸದಲ್ಲೆ ಮೊದಲ ಪ್ರಯತ್ನ. ಸಾಮಾನ್ಯ ಜನರಿಗೆ ತಿಳಿಯುವಂತೆ ಪ್ರೇರಣಾದಾಯಿ ಮಾತುಗಳನ್ನು ಮೋದಿ ಅವರು ಆಡಿದ್ದಾರೆ ಎಂದು ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಅವರು ರವಿವಾರ ನಗರದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಂದಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಭಾ?ಣವನ್ನು ಆಲಿಸಿ ಮಾತನಾಡಿದರು.

ಮನ್ ಕಿ ಬಾತ್ ನಲ್ಲಿ ದೇಶದ ಮೂಲೆ ಮೂಲೆಯ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಮೋದಿ ಅವರು ಪ್ರೇರಣೆ ನೀಡುತ್ತಾರೆ. ಇದರಿಂದ ಸರ್ಕಾರ ಜನರೊಂದಿಗೆ ಉತ್ತಮ ಸಂಪರ್ಕ ಏರ್ಪಟ್ಟು ಜನರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಎಲ್ಲರೂ ಕೊರೋನಾ ತಡೆಗೆ ಕೈಜೋಡಿಸಬೇಕು. ಕೇಂದ್ರ, ರಾಜ್ಯ ಸರ್ಕಾರಗಳು ಅತ್ಯುತ್ತಮವಾಗಿ ಕೊರೋನಾ ನಿರ್ವಹಣೆ ಮಾಡಿವೆ. ಅದಕ್ಕೆ ಜನರ ಸಹಕಾರವೂ ಮುಖ್ಯ. ಪ್ರತಿಯೊಬ್ಬರೂ ಕೊರೋನಾ ನಿಯಮ ಪಾಲಿಸುವುದರೊಂದಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕೊರೋನಾ ಸಂಕ?ದ ಮಧ್ಯೆ ಒಲಿಂಪಿಕ್ ಕ್ರೀಡಾಕೂಟಕ್ಕೆ ನರೇಂದ್ರ ಮೋದಿ ಅವರ ಸರ್ಕಾರ ವಿಶೇ? ಆದ್ಯತೆ ನೀಡಿ, ಕ್ರೀಡಾಪಟುಗಳನ್ನು ಸಜ್ಜುಗೊಳಿಸಿದೆ. ಭಾರತದ ಕ್ರೀಡಾಪಟುಗಳು ವಿಶ್ವಮಟ್ಟದಲ್ಲಿ ಮಿಂಚುವಂತೆ ಎಲ್ಲ ರೀತಿಯ ಪ್ರೋತ್ಸಾಹ ನೀಡಿದೆ. ತಳಮಟ್ಟದ, ಹಳ್ಳಿ ಹಳ್ಳಿಯ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಮೋದಿ ಅವರು ಪ್ರೋತ್ಸಾಹ ನೀಡಿದ್ದಾರೆ. ಒಲಿಂಪಿಕ್ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು ಗ್ರಾಮೀಣ ಭಾಗದವರು. ಅದೇ ರೀತಿ ನಮ್ಮ ಭಾಗದವರೂ ಸಾಧನೆ ಮಾಡಬೇಕು. ಅದಕ್ಕೆ ಬೇಕಾದ ಎಲ್ಲ ಸಹಾಯ, ಸಹಕಾರ ಕೊಡಲು ನಾನು ಸಿದ್ದ ಎಂದು ಭರವಸೆ ನೀಡಿದರು.

ಕಲಬುರ್ಗಿ ಗ್ರಾಮಾಂತರ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗೀರಥಿ ಗುನ್ನಾಪುರ, ಕಾಡಾ ಅಧ್ಯಕ್ಷ ಹ?ವರ್ಧನ ಗುಗಳೆ,ಶಹಬಾದ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸಿದ್ರಾಮ ಕುಸಾಳೆ , ಸದಾನಂದ ಕುಂಬಾರ, ಕಲಬುರ್ಗಿ ಗ್ರಾಮೀಣ ಪ್ರಧಾನ ಕಾರ್ಯದರ್ಶಿಗಳಾದ ಜಗನ್ನಾಥ ಮಾಲಿಪಾಟೀಲ, ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಶರ್ಮಾ, ಶಹಬಾದ ಮಹಿಳಾ ಮೋರ್ಚ ಅಧ್ಯಕ್ಷೆ ಜಯಶ್ರೀ ಸೂಡಿ, ಪ್ರಧಾನ ಕಾರ್ಯದರ್ಶಿ ಆರತಿ ಕೂಡಿ, ಕಲಬುರಗಿ ಜಿಲ್ಲಾ ಮನ್ ಕಿ ಬಾತ ಸಂಚಾಲಕ ಕನಕಪ್ಪ ದಂಡಗೂಲಕರ, ಶಹಬಾದ ಮನ್ ಕಿ ಬಾತ್ ಸಂಚಾಲಕ ಬಸವರಾಜ ಬಿರಾದಾರ ,ಚಂದ್ರಕಾಂತ ಸುಬೇದಾರ,ಶಶಿಕಲಾ ಸಜ್ಜನ, ನಾಗರಾಜ ಮೇಲಗಿರಿ,ದುರ್ಗಪ್ಪ ಪವಾರ, ಮಹಾದೇವ ಗೊಬ್ಬುರಕರ, ಬಸವರಾಜ ತರನಳ್ಳಿ, ಶ್ರೀಧರ ಜೋಶಿ, ಅರುಣ ಪಟ್ಟಣಕರ, ಅಣ್ಣಪ್ಪ ದಸ್ತಾಪುರ , ನಿಂಗಣ್ಣ ಹುಳಗೋಳಕರ, ಚಂದ್ರಕಾಂತ ಗೊಬ್ಬುರಕರ, ಸುಭಾ? ಜಾಪೂರ, ಪರಶುರಾಮ ದಂಡಗೂಲಕರ, ತಿಮ್ಮಣ್ಣ ಕುರ್ಡೇಕರ,ಯಲ್ಲಪ್ಪ ದಂಡಗೂಲಕರ,ದೇವದಾಸ ಜಾಧವ, ನಗರಸಭೆಯ ಸದಸ್ಯರಾದ ರವಿ ರಾಠೋಡ, ತಿಮ್ಮಾಬಾಯಿ ಕುಸಾಳೆ, ಜಗದೇವ ಸುಬೇದಾರ, ದತ್ತಾಫಂಡ,ಮಂಜುನಾಥ, ಶಿವಾಜಿರೆಡ್ಡಿ , ಭೀಮಯ್ಯ ಗುತ್ತೇದಾರ, ಮಲ್ಲಿಕಾರ್ಜುನ ಯರಪಲ, ಸೂರ್ಯಕಾಂತ ವಾರದ,ವೀರೇಶ ಬಂದಳ್ಳಿ , ಶ್ರೀನಿವಾಸ ದೇವಕರ, ಬಸವರಾಜ ಮದ್ರಕಿ, ಆ S ಹೊಸಮನಿ, ರಾಮು ಕುಸಾಳೆ , ಅನೀಲ ನಿಕ್ಕಮ, ಮೋಹನ ಗಂಟ್ಲಿ ಮತ್ತು ಶಹಬಾದ್ ಮಂಡಲದ ಪ್ರಮುಖರು ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಅಥ್ಲಿಟ್ ಗಳಿಗೆ ಪ್ರೋತ್ಸಾಹ: ಕಲಬುರಗಿ ಗ್ರಾಮೀಣ ಕ್ಷೇತ್ರದ ಶಹಾಬಾದ್ ನಲ್ಲಿ ಚೀಯರ್ ಫಾರ್ ಇಂಡಿಯಾ ಫೋಟೋ ಬೂತ್ ನ್ನು ಶಾಸಕ ಬಸವರಾಜ ಮತ್ತಿಮೂಡ ಉದ್ಘಾಟಿಸಿದರು.ಸ್ಥಳೀಯ ಕ್ರೀಡಾಪಟುಗಳ ತಂಡಕ್ಕೆ ವಾಲಿಬಾಲ್ ಸೇರಿ ಇತರ ಕ್ರೀಡಾ ಪರಿಕರ ವಿತರಿಸಿ, ಕ್ರೀಡಾಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದರು.

emedialine

Recent Posts

ಡೊನೇಷನ್ ಹಾವಳಿಗೆ ಕಡಿವಾಣಕ್ಕೆ ಎಸ್ಎಫ್ಐಯಿಂದ ಶಾಲಾ ಶಿಕ್ಷಣ ಪ್ರಧಾನ ಕಾರ್ಯದರ್ಶಿ, ಆಯುಕ್ತರಿಗೆ ಮನವಿ

ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…

3 hours ago

ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಸಂಸ್ಕಾರ ಶಿಬಿರದ ಸಮರೂಪ 21ಕ್ಕೆ

ಕಲಬುರಗಿ : ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಪರ್ಯಂತರ ಜರುಗಿಬಂದ 17ನೇ ವರ್ಷದ…

5 hours ago

ತುರ್ತಾಗಿ ಬರ ಪರಿಹಾರ ಒದಗಿಸಲು ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ ಒತ್ತಾಯ

ಕಲಬುರಗಿ: ರಾಜ್ಯ ರೈತ ಸಮುದಾಯ ಮತ್ತು ಕೃಷಿ ಕಾರ್ಮಿಕರು ತೀವ್ರ ಬರದಲ್ಲಿ ನರಳುತ್ತಿದ್ದಾರೆ. ಆದ್ದರಿಂದ ಸರ್ಕಾರ ಯುದ್ಧೋಪಾದಿಯಲ್ಲಿ ಬರ ಪರಿಹಾರ…

5 hours ago

ಜಂಗಮಶೆಟ್ಟಿ ರಾಜ್ಯ ಮಟ್ಟದ ರಂಗಪ್ರಶಸ್ತಿಗೆ ಆಹ್ವಾನ

ಕಲಬುರಗಿ : ಇಲ್ಲಿನ ರಂಗಸಂಗಮ ಕಲಾವೇದಿಕೆಯು ಕೊಡಮಾಡುವ ಎಸ್.ಬಿ.ಜಂಗಮಶೆಟ್ಟಿ ಮತ್ತು ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ರಂಗ ಸಾಧಕರಿಂದ ಅರ್ಜಿ…

5 hours ago

ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿ ಅನುಮಾನಸ್ಪದ ಸಾವು

ಕಲಬುರಗಿ: ಇಲ್ಲಿನ ಕಡಗಂಚಿ ಕೇಂದ್ರಿಯ ವಿಶ್ವ ವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಅನುಮಾನಸ್ಪದ ಮೃತಪಟ್ಟಿರುವ ಘಟನೆ ಬೆಳಕ್ಕಿಗೆ ಬಂದಿದಿದ್ದು, ಘಟನಾ ಸ್ಥಳಕ್ಕೆ…

6 hours ago

ಹುಬ್ಬಳ್ಳಿಯ ಅಂಜಲಿ ಕೊಲೆ ಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹ

ಚಿತ್ತಾಪುರ: ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ರಾಮಲಿಂಗ ಬಾನಾರ್…

6 hours ago