ಕೋವಿಡ್‌ನಿಂದ ಸ್ಥಗಿತಗೊಂಡಿದ್ದ ಕಾರ್ಯಚಟುವಟಿಕೆಗಳು ಪುನರಾರಂಭ

ಕಲಬುರ್ಗಿ: ಕೋವಿಡ್ ಮೊದಲನೇ ಅಲೆ ಹಾಗೂ ಎರಡನೇ ಅಲೆಯ ಭೀತಿಯಿಂದಾಗಿ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಗುಲಬರ್ಗಾ ಸ್ಮಾರ್ಟ್ ಸಿಟಿ ಕ್ಲಬ್ ಕಾರ್ಯ ಚಟುವಟಿಕೆಗಳನ್ನು ಪುನರಾರಂಭಿಸಲು ಭಾನುವಾರ ಸಂಜೆ ನಗರದ ಶಕ್ತಿ ನಗರದಲ್ಲಿನ ಕ್ಲಬ್ ಕಚೇರಿಯಲ್ಲಿ ಕ್ಲಬ್ ಅಧ್ಯಕ್ಷ ಪ್ರಭುಲಿಂಗ್ ಎಸ್. ಮಹಾಗಾಂವಕರ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸರ್ವ ಸದಸ್ಯರ ಮಹಾಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.

ಕ್ಲಬ್ ಆಡಳಿತ ಮಂಡಳಿಯ ಸದಸ್ಯೆ ನಳಿನಿ ಪಿ. ಮಹಾಗಾಂವಕರ್ ಅವರು ಕ್ಲಬ್ ಕಾರ್ಯಚಟುವಟಿಕೆಗಳನ್ನು ವಿವರಿಸಿ, ಕೋವಿಡ್ ಭೀತಿಯಿಂದಾಗಿ ಕಳೆದ ಒಂದು ವರ್ಷ ಆರು ತಿಂಗಳವರೆಗೆ ಕ್ಲಬ್ ಕಾರ್ಯವನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ನಿರೀಕ್ಷಿತ ಕಾರ್ಯಗಳು ಕ್ಲಬ್‌ನಿಂದ ಆಗಿಲ್ಲ ಎಂದರು.

ಆದಾಗ್ಯೂ, ಕ್ಲಬ್ ಮಾತ್ರ ಒಂದೆರೆಡು ತಿಂಗಳು ಕಾರ್ಯನಿರ್ವಹಿಸಿ, ನಗರದ ಅನೇಕ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ದಿಸೆಯಲ್ಲಿ ಹಾಗೂ ನಗರದ ಶುಚಿತ್ವ ಹಾಗೂ ಸೌಂದರ‍್ಯೀಕರಣಕ್ಕಾಗಿ ಹಲವಾರು ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ ಎಂದು ಅವರು ಹೇಳಿದರು.

ನಗರದಲ್ಲಿನ ಸುಗಮ ಸಂಚಾರ ಸುವ್ಯವಸ್ಥೆಗಾಗಿ ನಗರ ಪೋಲಿಸ್ ಉಪ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಪಾದಾಚಾರಿ ರಸ್ತೆಗಳನ್ನು ಬೀದಿ ಬದಿ ವ್ಯಾಪಾರಿಗಳು ಅತಿಕ್ರಮಣ ಮಾಡುವುದು, ಆಟೋಗಳು ಎಲ್ಲೆಂದರಲ್ಲಿ ನಿಲುಗಡೆ ಆಗುವುದು. ರಸ್ತೆಗಳ ಮೇಲಿನ ಅಪಘಾತಗಳನ್ನು ತಡೆಯಲು ರಸ್ತೆ ಮೇಲೆ ಬಿಳಿ ಪಟ್ಟಿಯ ಸಂಕೇತವನ್ನು ಅಳವಡಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಗಿದ್ದು, ಇಲ್ಲಿಯವರೆಗೂ ಆ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಹೀಗಾಗಿ ಆ ಬೇಡಿಕೆಗಳ ಇಡೇರಿಕೆಗೆ ಕ್ಲಬ್ ತನ್ನ ಪ್ರಯತ್ನ ಮುಂದುವರೆಸಲಿದೆ ಎಂದು ಅವರು ತಿಳಿಸಿದರು.

ನಗರದಲ್ಲಿನ ಒಳಚರಂಡಿ, ಹದಗೆಟ್ಟ ರಸ್ತೆ, ಉದ್ಯಾನವನಗಳ ಅಭಿವೃದ್ಧಿ, ಸಮರ್ಪಕ ಕುಡಿಯುವ ನೀರು, ಒತ್ತುವರಿ ತೆರವು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮಹಾನಗರ ಪಾಲಿಕೆಯ ಆಯುಕ್ತರಿಗೆ ಸಲ್ಲಿಸಲಾಗಿದೆ. ಕೆಲ ಬೇಡಿಕೆಗಳು ಇಡೇರಿವೆ. ಅಲ್ಲದೇ ಜನರು ದೂರು ಸಲ್ಲಿಸುವ ಪಾಲಿಕೆಯ ವೆಬ್‌ಸೈಟ್ ಸ್ಥಗಿತಗೊಂಡಿತ್ತು. ಅದನ್ನು ಪುನರಾರಂಭಿಸುವಲ್ಲಿ ಕ್ಲಬ್ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.
ಇನ್ನು ಕ್ಲಬ್ ಅರಣ್ಯ ಇಲಾಖೆಯಿಂದ ಈಗಾಗಲೇ ೫೦೦ ಸಸಿಗಳನ್ನು ನೆಟ್ಟಿದೆ. ಅಲ್ಲದೇ ಬೇಸಿಗೆ ಸಂದರ್ಭದಲ್ಲಿ ಗಿಡಗಳಿಗೆ ನೀರು ಪೂರೈಸುವ ಕುರಿತು ಮಾಡಿಕೊಂಡ ಮನವಿಗೆ ಸ್ಪಂದಿಸಲಾಗಿದೆ ಎಂದು ಅವರು ತಿಳಿಸಿದರು.

ಸಭೆಯ ಪ್ರಾರಂಭದಲ್ಲಿ ಕ್ಲಬ್ ಅಧ್ಯಕ್ಷ ಪ್ರಭುಲಿಂಗ್ ಮಹಾಗಾಂವಕರ್ ಅವರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಗಳೂ ಆದ ನ್ಯಾಯವಾದಿ ಶ್ರೀಮತಿ ಅನಿತಾ ಎಂ. ರೆಡ್ಡಿ ಅವರು ಕ್ಲಬ್‌ನ ಸ್ಥಾಪನೆ ಹಾಗೂ ಬೆಳವಣಿಗೆ ಕುರಿತು ಮಾತನಾಡಿದರು. ಕೆ.ಬಿ. ಭಂಕೂರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಶರಣ್ ಚಿಗೋಣಿ ಅವರು ಕ್ಲಬ್ ಉದ್ದೇಶಗಳನ್ನು ವಿವರಿಸಿದರು. ಖಜಾಂಚಿ ಎಂ.ಎಂ.ಎಲ್. ಅಲಂಕಾರ್ ಅವರು ಲೆಕ್ಕಪತ್ರ ಒಪ್ಪಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ವಿಜ್ಙಾನ ಕೇಂದ್ರದ ಅಧಿಕಾರಿ ಸಿ.ಎನ್. ಲಕ್ಷ್ಮೀನಾರಾಯಣ್ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷ ಸುಭಾಷಚಂದ್ರ ಕೋಣಿನ್ ಅವರು ಕ್ಲಬ್‌ನ ಸದಸ್ಯತ್ವ ಪಡೆದುಕೊಂಡರು.

ಸಭೆಯಲ್ಲಿ ರಾಜು ಗಲಗಲಿ, ಬಿ.ಎಸ್. ಕಟ್ಟಿಮನಿ, ಬೆಳಗಾವಿಗೆ ವರ್ಗವಾದ ಉಪ ನೊಂದಣಿ ಅಧಿಕಾರಿ ಶಿವಕುಮಾರ್ ಎಲ್. ಅಪರಂಜಿ ಹಾಗೂ ಅವರ ಪತ್ನಿ ಕಲಾವತಿ ಅಪರಂಜಿ, ಮೀನಾಕ್ಷಿ ಬಿ. ಆವಂಟಿ, ಯಶವಂತ್ ಸಿಂಧೆ, ಬಿ.ಎಸ್. ಗಲಗಲಿ, ಎಂ.ಎಸ್. ಪಾಟೀಲ್, ಪೂಜ್ಯ ದೊಡ್ಡಪ್ಪ ಅಪ್ಪಾ ತಾಂತ್ರಿಕ ಕಾಲೇಜಿನ ಪ್ರೊ. ಶರಣ್ ಪಡಶೆಟ್ಟಿ, ಬಸವರಾಜ್ ಅ. ಚಿನಿವಾರ್ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅನುರಾಧಾ ಗೋಪಾಲ್ ಆರ್. ಪಾಲಾದಿ ಅವರ ಪುತ್ರ ವಿನಿತ್ ಹಾಗೂ ಸೊಸೆ ಮಿಥಾಲಿ ಅವರ ಮದುವೆಯ ನಿಮಿತ್ಯ ಸಿಹಿ ವಿತರಿಸಿದರು.

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

3 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

3 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

3 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

4 hours ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

4 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420