ಸುರಪುರ: ತಾಲೂಕಿನಲ್ಲಿ ಕಳೆದ ಕೆಲ ದಿನಗಳ ಹಿಂದೆ ಉಂಟಾದ ಕೃಷ್ಣಾ ನದಿ ಪ್ರವಾಹ ಸ್ಥಳಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಬುಧವಾರ ಭೇಟಿ ನೀಡಿ ವೀಕ್ಷಿಸಿದರು.ತಾಲೂಕಿನ ನೀಲಕಂಠರಾಯನಗಡ್ಡಿಗೆ ಭೇಟಿ ನೀಡಿದ ಅವರು ಪ್ರವಾಹ ದಿಂದ ಉಂಟಾದ ಹಾನಿಯ ಕುರಿತು ವೀಕ್ಷಣೆ ನಡೆಸಿದರಲ್ಲದೆ,ನೀಲಕಂಠರಾಯನಗಡ್ಡಿ ವಾಸಿಗಳಿಗಳಿಂದ ವಿವರಣೆಯನ್ನು ಪಡೆದುಕೊಂಡರು.
ನಂತರ ಮಾತನಾಡಿದ ಈಶ್ವರ ಖಂಡ್ರೆ,ಸರಕಾರ ಕೂಡಲೇ ನೆರೆ ಸಂತ್ರಸ್ತರ ನೆರವಿಗೆ ಬರಬೇಕಿದೆ, ಪ್ರತಿ ವರ್ಷವು ಕೂಡ ಈ ರೀತಿಯಾಗಿ ಪ್ರವಾಹ ಉಂಟಾಗಿ ಜನರು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ.ಆದರೆ ಇಂತಹ ಪರಸ್ಥಿತಿಯನ್ನು ಕಂಡು ಸರಕಾರ ನಿರ್ಲಕ್ಷ್ಯ ತೋರುತ್ತಿದೆ.ತುಟಿಗೆ ತುಪ್ಪ ಒರೆಸುವ ಕೆಲಸವನ್ನು ಸರಕಾರ ಬಿಟ್ಟು ಇಲ್ಲಿಯ ಜನರಿಗೆ ಶಾಸ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿಯಾಗಿದೆ ಎಂದರು.
ಅಲ್ಲದೆ ಕಳೆದ ವರ್ಷವೂ ಇದೇ ರೀತಿ ಪ್ರವಾಹ ಬಂದು ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಿದೆ,ಆದರೆ ಸರಕಾರ ಸಂತ್ರಸ್ತರಿಗೆ ಸರಿಯಾದ ಪರಿಹಾರವನ್ನು ನೀಡಿಲ್ಲ ಎಂದು ಜನರು ಹೇಳುತ್ತಿರುವುದು ಸರಕಾರದ ನಿರ್ಲಕ್ಷ್ಯತೆಯನ್ನು ತೋರಿಸುತ್ತಿದೆ.ಇದರ ಕುರಿತು ಸದನದಲ್ಲಿ ಪ್ರಶ್ನಿಸುವುದಾಗಿ ತಿಳಿಸಿದರು.ಅಲ್ಲದೆ ಈಬಾರಿ ಕಳೆದ ವರ್ಷದಂತೆ ಆಗಲು ಬಿಡುವುದಿಲ್ಲ ಎಲ್ಲರಿಗೂ ಪರಿಹಾರವನ್ನು ಕೊಡಿಸುವುದಾಗಿ ಭರವಸೆ ನೀಡಿದರು.
ನಂತರ ನೀಲಕಂಠರಾಯನಗಡ್ಡಿಯಿಂದ ಬಂಡೊಳ್ಳಿಗೆ ತೆರಳಿ ವೀಕ್ಷಣೆ ನಡೆಸಿದರು,ಅಲ್ಲಿಂದ ದೇವಾಪುರಕ್ಕೆ ಆಗಮಿಸಿ ದೇವಾಪುರದಲ್ಲಿ ಜಮೀನುಗಳ ಮುಳುಗಡೆ ಹಾಗು ಬೆಳೆ ಹಾನಿಯ ಕುರಿತು ಮಾಹಿತಿ ಪಡೆದುಕೊಂಡರು.ನಂತರ ಯಾದಗಿರಿಗೆ ತೆರಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್,ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಗೂಳಿ,ಮುಖಂಡರಾದ ವಿಠ್ಠಲ್ ಯಾದವ್,ರಾಜಾ ವೇಣುಗೋಪಾಲ ನಾಯಕ,ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರನಾಯಕ,ಮಲ್ಲಣ್ಣ ಸಾಹು ಮುಧೋಳ, ರಾಜಾ ಶುಭಾಶ್ಚಂದ್ರ ನಾಯಕ, ನಿಂಗರಾಜ ಬಾಚಿಮಟ್ಟಿ, ರಾಜಾ ವಿಜಯಕುಮಾರ ನಾಯಕ, ಗುಂಡಪ್ಪ ಸೋಲಾಪುರ, ಅಬ್ದುಲ್ ಅಲೀಂ ಗೋಗಿ, ಅಬ್ದುಲ್ ಗಫೂರ ನಗನೂರಿ, ಶೇಖ್ ಮಹಿಬೂಬ ಒಂಟಿ,ದಾವೂದ್ ಇಬ್ರಾಹಿಂ ಪಠಾಣ್, ಅಬೀದ್ ಹುಸೇನ್ ಪಗಡಿ, ಸಿದ್ರಾಮ ಎಲಿಗಾg, ಕಮರುದ್ದೀನ್, ಮಹ್ಮದ ಶರೀಫ್, ಲಕ್ಷ್ಮಣ ನಿಂಗಾಪುರ,ಹಣಮಂತ್ರಾಯ ಮಕಾಶಿ, ಶಿವರಾಜ ಬೊಮ್ಮನಹಳ್ಳಿ,ವೆಂಕಟೇಶ ದಳವಾಯಿ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…