ಸುರಪುರ: ತಾಲೂಕು ಚುಟುಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷರು ಹಾಗು ಚುಟುಕು ಸಾಹಿತಿ ನಿವೃತ್ತ ಶಿಕ್ಷಕ ಬೀರಣ್ಣ ಬಿ.ಕೆ.ಆಲ್ದಾಳ ನಿಧನರಾಗಿದ್ದಾರೆ.ಅವರಿಗೆ ೬೮ ವರ್ಷ ವಯಸ್ಸಾಗಿತ್ತು.ಕಳೆದ ಮೂರು ದಶಕಗಳ ಕಾಲದಿಂದ ಸಾಹಿತ್ಯ ವಲಯದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದ ಸಾಹಿತಿ ಬೀರಣ್ಣ ಆಲ್ದಾಳವರು ಪ್ರತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತತ್‌ಕ್ಷಣದಲ್ಲಿಯೇ ಚುಟುಕುಗಳನ್ನು ರಚಿಸಿ ವಾಚಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.ಅನೇಕ ಜನರು ಬೀರಣ್ಣ ಅವರನ್ನು ಸುರಪುರದ ಡುಂಢಿ ಎಂದೆ ಕರೆಯುತ್ತಿದ್ದುದುಂಟು.
ಅಂತಹ ಬೀರಣ್ಣ ಆಲ್ದಾಳರು ಕಳೆದ ಮೂರು ನಾಲ್ಕು ದಿನಗಳಿಂದ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾದ ಮದ್ಹ್ಯಾನ ನಿಧನರಾಗಿದ್ದಾರೆ.ಅವರಿಗೆ ಇಬ್ಬರು ಗಂಡು ಮತ್ತು ಒಬ್ಬಳು ಹೆಣ್ಣು ಮಗಳಿದ್ದು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.ಮೃತರ ಅಂತ್ಯಕ್ರೀಯೆ ಗುರುವಾರ ಮದ್ಹ್ಯಾನ ೩ ಗಂಟೆಗೆ ಅವರ ಸ್ವಗ್ರಾಮ ಆಲ್ದಾಳ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳಿಂದ ತಿಳಿಸಿದ್ದಾರೆ.
ಹಲವರ ಸಂತಾಪ : ಚುಟುಕು ಸಾಹಿತಿ ಹಾಗು ಚುಟುಕು ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಬೀರಣ್ಣ ಬಿ.ಕೆ ಅವರ ನಿಧನಕ್ಕೆ ತಾಲೂಕಿನ ಅನೇಕ ಹಿರಿಯರು ಹಾಗು ಸಾಹಿತಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ಧಾರೆ.ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಬಸವರಾಜ ಜಮದ್ರಖಾನಿ,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಹಾಗು ಸಾಹಿತಿಗಳಾದ ಡಿ.ಎನ್.ಅಕ್ಕಿ,ಹನುಮಾಕ್ಷಿ ಗೋಗಿ,ಜಯಲಲಿತಾ ಪಾಟೀಲ್, ನಬಿಲಾಲ ಮಕಾನದಾರ,ಶರಣಬಸವ ಯಾಳವಾರ,ಹೆಚ್.ರಾಠೋಡ,ಕುತುಬುದ್ಧೀನ್ ಅಮ್ಮಾಪುರ,ವೆಂಕಟೇಶಗೌಡ,ನಿಂಗನಗೌಡ ದೇಸಾಯಿ,ಜೆ.ಅಗಸ್ಟಿನ್,ಅನ್ವರ ಜಮಾದಾರ,ಕನಕಪ್ಪ ವಾಗಣಗೇರಾ,ಕಮಲಾಕರ್ ಅರಳಿಗಿಡ,ಮಹಾಂತೇಶ ಗೋನಾಲ,ರಾಘವೇಂದ್ರ ಭಕ್ರಿ,ಗೋಪಣ್ಣ ಯಾದವ್,ರೈತ ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟೆ, ಪತ್ರಕರ್ತರಾದ ಮಲ್ಲು ಗುಳಗಿ, ಧೀರೇಂದ್ರ ಕುಲಕರ್ಣಿ,ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜು ಕುಂಬಾರ,ನಿವೃತ್ತ ಎಸ್ಪಿ ಸಿ.ಎನ್.ಭಂಡಾರೆ,ಕೇದಾರನಾಥ ಶಾಸ್ತ್ರಿ,ಸುನಂದಾ ಸಾಲವಾಡಗಿ,ಜ್ಯೋತಿ ದೇವಣಗಾಂವ್,ಪಾರ್ವತಿ ದೇಸಾಯಿ,ವೀರಣ್ಣ ಕಲಕೇರಿ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…