ಕಲಬುರಗಿ: ಬಿಜೆಪಿ ಸರಕಾರದ ಮಂತ್ರಿ ಮಂಡಲದಲ್ಲಿ ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ ಜಿಲ್ಲೆಗಳು ವಂಚಿತವಾಗಿರುವದನ್ನು ತೀವ್ರವಾಗಿ ಟೀಕಿಸಿರುವ ಜೇವರ್ಗಿ ಶಾಸಕರು ಹಾಗೂ ರಾಜ್ಯ ವಿಧಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕರೂ ಆಗಿರುವ ಡಾ. ಅಜಯ್ ಸಿಂಗ್ ಡಬ್ಬಲ್ ಇಂಜಿನ್ ಸರ್ಕಾರ ಎಂದು ಹೇಳಿಕೊಂಡು ಹರಟವರೆಲ್ಲರೂ ಕೂಡಿಕೊಂಡು ಹಿಂದುಳಿದ ನೆಲಕ್ಕೆ ಮಾಡಿರುವ ಮಹಾ ಮೋಸವಿದು ಎಂದು ಮಾತಿನಲ್ಲೇ ತಿವಿದಿದ್ದಾರೆ.
ಕಲ್ಯಾಣ ಕರ್ನಾಟಕವೆಂದು ಹೆಸರು ಬದಲಿಸಿz್ದÉೀ ಬಂತು, ಅದಕ್ಕೆ ತಕ್ಕಂತೆ ಯಾವುದೇ ವಿಚಾರದಲ್ಲೂ ಈ ಭಾಗದ ಜಿಲ್ಲೆಗಳ ಆದ್ಯತೆ ಬಿಜೆಪಿ ಸರಕಾರ ನೀಡುತ್ತಿಲ್ಲ. ಕಲಂ 371 (ಜೆ) ಅನು,್ಠನಕ್ಕೆ ಪ್ರತ್ಯೇಕ ಸಮೀತಿ ರಚಿಸುವ ಗೋಜಿಗೂ ಹೋಗಿಲ್ಲ, ಪ್ರತೇಕ ಸಚಿವಾಲಯ ಮಾಡುವ ಘೋಷಣೆ ಮಾಡಿದ್ದ ಯಡಿಯೂರಪ್ಪ ಮೌನವಾದರು. ಇದೀಗ ಮಂತ್ರಿಗಿರಿ ಸಹ ನೀಡದೆ ಬಿಜೆಪಿ ಹಿಂದುಳಿದ ಜನರಿಗೆ ಅಗೌರವ ತೋರಿದೆ, ಮೋಸ ಮಾಡಿದೆ. ಇವರಿಗೆ ಮತ ಹಾಕಿದವರೆಲ್ಲರ ಆಶೆಯ ಮೇಲೆ ತಣ್ಣೀರು ಎರಚಿದೆ ಎಂದು ಬಿಜೆಪಿಯ ವಿರುದ್ಧ ಡಾ. ಅಜಯ್ ಸಿಂಗ್ ಹರಿ ಹಾಯ್ದಿದ್ದಾರೆ.
ಕೊಪ್ಪಳದ ಯಲಬುರ್ಗಾದಿಂದ ಹಾಲಪ್ಪ ಆಚಾರ್, ಬೀದರ್‍ನ ಪ್ರಭು ಚವ್ಹಾಣ್ ಹೊರತು ಪಡಿಸಿದರೆ ಕೊಪ್ಪಳ, ಬಳ್ಳಾರಿ, ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್, ಯಾದಗಿರಿ ಜಿಲ್ಲೆಗಳಿಂದ ಇತರರನ್ನು ಯಾರನ್ನೂ ಮಂತ್ರಿ ಸ್ಥಾನಕ್ಕಾಗಿ ಪರಿಗಣಸಿದೆ ಇರುವುದು ನೋಡಿದರೆ ಬಿಜೆಪಿಗೆ ಹಿಂದುಳಿದ ನೆಲದ ಪ್ರಗತಿ ಮಾಡುವ ಆಸಕ್ತಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಾಗೆಲ್ಲಾ ಕಲಬುರಗಿಗೆ ಮಂತ್ರಿಸ್ಥಾನ ವಂಚಿತವಾಗಿ ಮಾಡಲಾಗಿದೆ. ಕಾಂಗ್ರೆಸ್ ಸೇರಿದಂತೆ ಹಿಂದೆ ರಾಜ್ಯವಾಳಿರುವ ಎಲ್ಲಾ ಪಕ್ಷಗಳವರು ಕಲಬುರಗಿ ಜನನಾಯಕರಿಗೆ ಪ್ರಮುಖ ಇಲಾಖೆಗಳ ಜವಾಬ್ದಾರಿಯ ಮಂತ್ರಿಸ್ಥಾನ ನೀಡಿ ಈ ಜಿಲ್ಲೆಗೆ ಮಹತ್ವ ನೀಡಿದ್ದಾರೆ. ಆದರೆ ಬಿಜೆಪಿಗೆ ಮಾತ್ರ ಇಲ್ಲಿನವರ ಮತಗಳು ಬೇಕೇ ಹೊರತು ಇಲ್ಲಿನವರಿಗೆ ಸ್ಥಾನಮಾನ ಕೊಡುವುದು ಬೇಕಿಲ್ಲ ಎಂದು ಬಿಜೆಪಿಯ ಈ ಧೋರಣೆ ವಿರುದ್ಧ ಡಾ. ಅಜಯ್ ಸಿಂಗ್ ಹರಿ ಹಾಯ್ದಿದ್ದಾರೆ.
ಕಾಂಗ್ರೆಸ್ ಸರಕಾರದಲ್ಲಿ ಪ್ರತಿ ಅವಧಿಗೂ ಪ್ರಮುಖ ಹಾಗೂ ಪ್ರಗತಿ ಪರ ಖಾತೆಗಳನ್ನೇ ಹೊಂದುವ ಮೂಲಕ ದಿ. ಧರಂಸಿಂಗ್, ಹಿರಿಯರಾದ ಡಾ. ಖರ್ಗೆ ಸೇರಿದಂತೆ ಅನೇಕ ನಾಯಕರು ಮಂತ್ರಿಗಳಾಗಿ ಈ ಭಾಗದ ಪ್ರಗತಿಗೆ ಬಲ ನೀಡುತ್ತಿದ್ದರು. ಆದರೀಗ ಯಡಿಯೂರಪ್ಪ ಸರಕಾರದ ಮೋಸ- ವಂಚನೆಯ ಪರಂಪರೆ ಬೊಮ್ಮಾಯಿ ಸರಕಾರದ ಕಾಲದಲ್ಲೂ ಮುಂವರಿದಂತಾಗಿದೆ. ಆಳುವ ಪಕ್ಷದ ಇಂತಹ ಮಲತಾಯಿ ಧೋರಣೆಯಿಂದ ಹಿಂದುಳಿದ ನೆಲದ ಪ್ರಗತಿ ಆಗೋದಿಲ್ಲ, ಅಲ್ಲಿನ ಜನರಿಗೂ ಒಳ್ಳೆಯದಾಗೋದಿಲ್ಲ. ಬಿಜೆಪಿ ಸರಕಾರ ಬಂದಾಗೆಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೂ ಅನ್ಯ ಜಿಲ್ಲೆಗಳÀತ್ತ ನೋಡುವ – ಪರದಾಡುವ ಸಂದರ್ಭ ಕಲಬುರಗಿ ಮತದಾರರನ್ನು ಕಾಡುತ್ತಿರೋದು ಬಹುದೊಡ್ಡ ದುರಂತವೆಂದು ಡಾ. ಅಜಯ್ ಸಿಂಗ್ ಖಾರವಾಗಿ ಹೇಳಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…