ಬಿಸಿ ಬಿಸಿ ಸುದ್ದಿ

ಸಮಾಜದಲ್ಲಿದ್ದ ಅಂಧಕಾರ ಹೊಡೆದೊಡಿಸಿದವರು ಈಶ್ವರ ಚಂದ್ರ ವಿದ್ಯಾಸಾಗರ

ಶಹಾಬಾದ: ಮಹಿಳೆಯರನ್ನು ಶಿಕ್ಷಣದಿಂದ ವಂಚಿಸಿದರೆ ಅಂತಹ ಸಮಾಜ ಮುಂದುವರಿಯಲು ಸಾಧ್ಯವಿಲ್ಲ ಎಂದು ಅರಿತು ಕೇವಲ ಮೂರು ಹೆಣ್ಣುಮಕ್ಕಳಿಗೆ ಶಾಲೆಯನ್ನು ತೆರೆದು ಸಮಾಜದಲ್ಲಿದ್ದ ಅಂಧಕಾರವನ್ನು ಹೊಡೆದೋಡಿಸಲು ಮುಂದಾದವರು ಈಶ್ವರ ಚಂದ್ರ ವಿದ್ಯಾಸಾಗರ ಎಂದು ಎಐಡಿವಾಯ್‌ಓ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ.ಎಸ್.ಹೆಚ್ ಹೇಳಿದರು.

ಅವರು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಮ್‌ಎಸ್‌ಎಸ್) ವತಿಯಿಂದ ಸಂಘಟನೆಯ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಈಶ್ವರ್‌ಚಂದ್ರ ವಿದ್ಯಾಸಾಗರ ರವರ ೧೩೦ನೇ ಸ್ಮರಣೆ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶತಮಾನಗಳಿಂದ ಧರ್ಮದ ಹೆಸರಿನಲ್ಲಿ ಪೋಷಿಸಿಕೊಂಡು ಬಂದಿದ್ದ ಕಂದಾಚಾರಗಳು ಹಾಗೂ ಗೊಡ್ದು ಸಂಪ್ರದಾಯಗಳಿಗೆ ಬಲಿಯಾಗಿ ಬಾಲ್ಯವಿವಾಹ, ಬಹುಪತ್ನಿತ್ವ ಪದ್ಧತಿಯಿಂದ ಬಾಲ ವಿಧವೆಯರ ಸಂಖ್ಯೆ ಹೆಚ್ಚಾಯಿತು. ವಿಧವಾ ಪುನರ್ ವಿವಾಹವನ್ನು ಸಮಾಜ ಅಂಗೀಕರಿಸುವ ಹಾಗೂ ಬೆಂಬಲಿಸುವ ಶಾಸ್ತ್ರದ ಮೊರೆ ಹೋಗಿ ಶಾಸನವನ್ನು ರೂಪಿಸಲು ಕಾರಣಕರ್ತರಾದರು. ತನ್ನ ಮಗನಿಗೆ ವಿಧವೆಯ ಜೊತೆ ಮದುವೆ ಮಾಡಿಸುವ ಮೂಲಕ ವಿಧವಾ ವಿವಾಹವನ್ನು ಪ್ರೇರೇಪಿಸಿದರು. ಜಾತಿಯತೆ, ಮಹಿಳೆಯರ ದಮನ, ಕೋಮುವಾದ ಉಳಿಗಮಾನ್ಯ ಪದ್ಧತಿಯ ಪಳೆಯುಳಿಕೆಗಳು ವಿದ್ಯಾಸಾಗರರ ಆಶೋತ್ತರಗಳಿಗೆ ವಿರುದ್ಧವಾಗಿ ಸಮಾಜದಲ್ಲಿ ಬೇರುಬಿಟ್ಟಿವೆ.

ಜನಮಾನಸದಿಂದ ಇವರ ಹೆಸರನ್ನು ಅಳಿಸಿ ಹಾಕುವ ಸರ್ವ ಪ್ರಯತ್ನವನ್ನು ಆಳುವ ವರ್ಗ ತನ್ನ ಗುರಿಯಾಗಿಸಿಕೊಂಡಿದೆ.ಈ ಹಿನ್ನೆಲೆಯಲ್ಲಿ ವಿದ್ಯಾಸಾಗರರು ಕೈಗೆತ್ತಿಕೊಂಡ ಕಾರ್ಯಗಳನ್ನು ಪೂರ್ಣಗೊಳಿಸಲು ಪಣತೊಡಬೇಕು. ಈ ಉದಾತ್ತ ಕಾರ್ಯದಲ್ಲಿ ಎಲ್ಲಾ ಪ್ರಜ್ಞಾವಂತ ವಿದ್ಯಾರ್ಥಿ, ಯುವಜನ ಮಹಿಳೆಯರು ಕೈಜೋಡಿಸಿ ನವ ಸಮಾಜವನ್ನು ಸೃಷ್ಠಿಸಲು ಅವರ ಸ್ಮರಣೆ ನಮಗೆ ಚಿರಂತನ ಸ್ಫೂರ್ತಿಯಾಗಬೇಕು ಎಂದು ಹೇಳಿದರು.

ಎಐಎಮ್‌ಎಸ್‌ಎಸ್ ಜಿಲ್ಲಾ ಅಧ್ಯಕ್ಷೆ ಗುಂಡಮ್ಮ ಮಡಿವಾಳ ಮಾತನಾಡಿ,ಈ ಯುಗದ ಯಾವುದೇ ಅಕ್ಷರಸ್ಥ ಸ್ತ್ರೀ ಅತ್ಯಂತ ಕೃತಜ್ಞತೆಯಿಂದ ಸ್ಮರಿಸಿಕೊಳ್ಳಲೆ ಬೇಕಾದ ಧೀಮಂತ ವ್ಯಕ್ತಿ ವಿದ್ಯಾಸಾಗರ್. ಈ ಮೇರು ವ್ಯಕ್ತಿತ್ವ ನಮ್ಮ ದೇಶದ ನೆಲದಲ್ಲಿ ಜನಿಸಿ ತಮ್ಮ ಜೀವನದುದ್ದಕ್ಕೂ ಮಾಡಿದ ಅನೇಕ ಸಾಧನೆಗಳ ಜೊತೆಗೆ ವಿಶೇ?ವಾಗಿ ಮಹಿಳಾ ವಿಮೋಚನೆಗಾಗಿ ಜೀವಮಾನದುದ್ದಕ್ಕೂ ರಾಜಿ ರಹಿತವಾಗಿ ದುಡಿದ ಅಮೋಘ ವ್ಯಕ್ತಿತ್ವ. ವಿದ್ಯಾಸಾಗರರ ಬಗ್ಗೆ ’ನಮ್ಮ ದೇಶದಲ್ಲಿ ಅವರಿಂದ ಸ್ಫೂರ್ತಿ ಪಡೆಯದಿದ್ದಂತಹ ಯಾವುದೇ ವ್ಯಕ್ತಿ ಇರಲಿಲ್ಲ’ ಎಂದು ವಿವೇಕಾನಂದರು ನುಡಿದಿದ್ದಾರೆ ಎಂದು ಹೇಳಿದರು.

ಎಐಎಮ್‌ಎಸ್‌ಎಸ್ ನಗರ ಅಧ್ಯಕ್ಷೆ ಮಹಾದೇವಿ.ಜಿ.ಮಾನೆ, ಸುಕನ್ಯಾ.ಎಸ್.ಎಚ್, ಮಹಾದೇವಿ ಅತನೂರ,ಶಿಲ್ಪಾ.ಎಮ್.ಹುಲಿ, ಸವಿತಾ, ರಾಧಿಕಾ ಚೌಧರಿ ಇತರರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

12 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

22 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

22 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

22 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago