ಕಲಬುರಗಿ: ಕನ್ನಡವನ್ನು ಉಸಿರಾಗಿಸಿಕೊಂಡಿದಷ್ಟೇ ವಚನ ಸಾಹಿತ್ಯಕ್ಕೆ ಮಾರು ಹೋಗಿದ್ದ ಹಳಕಟ್ಟಿ ರವರು ಅಂದು ವಚನ ಸಾಹಿತ್ಯದ ಹಸ್ತ ಪ್ರತಿಗಳಿಗಾಗಿ ಓಲೆಗರಿ ಗ್ರಂಥಗಳಿಗಾಗಿ ಹುಡುಕಾಟದ ಊರುಗಳಿಲ್ಲ, ತಡಗಾಡದ ಕೇರಿಗಳಿಲ್ಲ, ಅನ್ವೇಷಣೆ ಗೈಯದ ಆಲಯಗಳಿಲ್ಲ, ಸಂಶೋಧನೆ ನಡೆಸದ ಊರುಗಳಿಲ್ಲ, ಹೀಗೆ ಇಡೀ ಲೋಕವನ್ನೆ ತಿರುಗಿ ಅಲ್ಲಲ್ಲಿ ಹರಿದು ಹಂಚಿಹೋದ ವಚನ ಸಾಹಿತ್ಯ ವ್ಯಕ್ತಿಯಾಗಿ ಕಟ್ಟಿಕೊಟ್ಟಿದ್ದರಿಂದಲೇ ಇವತ್ತು ನಮ್ಮೆಲ್ಲರಿಗೂ ಓದುವ, ನೋಡುವ ಭಾಗ್ಯ ಸಿಕ್ಕಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶಿವರಾಜ ಅಂಡಗಿ ಅವರು ಅಭಿಪ್ರಯಾ ವ್ಯಕ್ತಪಡಿಸಿದರು.
ಅವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಯುವ ಘಟಕದಲ್ಲಿ ಮಧ್ಯಾಹ್ನ ಡಾ.ಪ.ಗು.ಹಳಕಟ್ಟಿ ರವರ ಜಯಂತಿ ಆಚರಿಸಿ ಮಾತನಾಡಿದರು. ಪ್ರತಿದಿನ ನಾವು ಒಂದು ವಚನ ಓದುವದರೊಂದಿಗೆ, ಹೇಳುವುದರೊಂದಿಗೆ, ಮುದ್ರಣ ಮಾಡುವುದರೊಂದಿಗೆ ಪ್ರಚಾರ ಮಾಡುವುದರೊಂದಿಗೆ ಸ್ವಲ್ಪ ಮಟ್ಟಿಗಾದರೂ ಅವರ ಋಣ ತೀರಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳು ಹಾಗೂ ನ್ಯಾಯವಾದಿ ವಿನೋದಕುಮಾರ ಜನೇವರಿ, ವಾಸುದೇವ ಗಡ್ಯಾಳ, ರಮೇಶ ದೊಡ್ಡಮನಿ ಹಾಗೂ ಸಂಗಮೇಶ ಕರಡಿ, ರಾಜಶೇಖರ ಮರಪಳ್ಳಿ, ಶಿವಶರಣ ಪಾಟೀಲ ರವರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…