ಕಲಬುರಗಿ : ಇಲ್ಲಿನ ರಂಗಾಯಣದಲ್ಲಿ ಆಯೋಜಿಸಿದ್ದ ರಂಗಾಂತರಾಳ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ, ಮಾಧ್ಯಮ ಅಕಾಡೆಮಿ ಸದಸ್ಯ ದೇವೇಂದ್ರಪ್ಪ ಕಪನೂರ ಅವರು, ತಾವು ಸಾಂಸ್ಕೃತಿಕ ಕ್ಷೇತ್ರದಲ್ಲಿ ನಡೆದು ಬಂದ ನಡೆಯನ್ನು ವಿವರಿಸಿದರು.
ಬಾಲ್ಯ ಕಾಲದಿಂದಲೂ ಜಾನಪದ ರಂಗಭೂಮಿಯಿಂದ ಆಕರ್ಷಕನಾಗಿ, ದೊಡ್ಡಾಟ, ಬಯಲಾಟ, ನಾಟಕಗಳಲ್ಲಿ ಭಾಗವಹಿಸಿ, ಜನಪದ ಹಾಡುಗಳನ್ನು ಹೇಳುತ್ತಾ ಬೆಳೆದು ಬಂದಿರುವುದಾಗಿ ತಿಳಿಸಿ, ಹಲವಾರು ನಾಟಕಗಳ ಹಾಡುಗಳನ್ನು ಹಾಡಿ ರಂಜಿಸಿದರಲ್ಲದೇ, ದೊಡ್ಡಾಟದ ಹೆಜ್ಜೆಗಳನ್ನು ಹಾಕಿ ತೋರಿಸಿದರು.
30-40ವರ್ಷಗಳ ಸುದೀರ್ಘ ರಂಗಾನುಭವಗಳನ್ನು ಹೊಂದಿರುವ ಕಲಾವಿದರು ತಮ್ಮ ಕಲೆಯ ಪ್ರಯೋಗಗಳ ಕುರಿತು , ನೋವು ನಲಿವುಗಳನ್ನು ಕುರಿತು ಆಸಕ್ತರ ಮುಂದೆ ಹೇಳಿ ಕೊಳ್ಳುವ ಅವಕಾಶವನ್ನು ಕಲಬುರಗಿ ರಂಗಾಯಣ ತನ್ನ ರಂಗಾಂತರಾಳ ಕಾರ್ಯಕ್ರಮದಲ್ಲಿ ನೀಡಿರುವುದು ಸಂತಸ ತಂದಿದೆ. ಅನುಭವ ಕಥನವನ್ನು ದಾಖಲಿಸಲಾಗದ ಕಲಾವಿದರಿಗೆ ಇದು ಸುವರ್ಣ ಅವಕಾಶ ನೀಡಿದಂತಾಗಿದೆ ಎಂದರು.
ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ರಂಗಭೂಮಿಯ ಎಲ್ಲ ಪ್ರಕಾರಗಳಲ್ಲಿಯೂ ದುಡಿದ ಕಲಾವಿದರು ತಮ್ಮಕಲಾ ಸೇವೆ ಬಗ್ಗೆ ಮತ್ತು ರಂಗಭೂಮಿಯಲ್ಲಿ ಅವರು ಎದುರಿಸಿದ ಸವಾಲುಗಳು ತಿಳಿಸಿದರೆ, ಅವು ಯುವ ಕಲಾವಿದರಿಗೆ ಮಾರ್ಗದರ್ಶನ ಮಾಡಬಲ್ಲವು ಎಂದರು.
ರಂಗಾಯಣ ಆಡಳಿತಾಧಿಕಾರಿ ದತ್ತಪ್ಪ ಸಾಗನೂರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ್, ಹಿರಿಯ ಪತ್ರಕರ್ತರಾದ ಶಿವರಾಯ ದೊಡ್ಡಮನಿ, ಹಿರಿಯ ಸಾಹಿತಿ ಡಾ.ಹನುಮಂತರಾವ ದೊಡ್ಡಮನಿ, ಪಟ್ಟಣಕರ್, ಸಾಯಿಬಣ್ಣ ಹೋಳ್ಕರ್ ಎಚ್.ಎಸ್. ಬಸವಪ್ರಭು ಇತರರು ಇದ್ದರು.
ರಂಗಾಯಣ ಕಲಾವಿದರಾದ ಮರಿಯಮ್ಮ ಆದೋನಿ ರಂಗಗೀತೆ ಪ್ರಸ್ತುತ ಪಡಿಸಿದರು. ಮಲ್ಲಿಕಾರ್ಜುನ ಪೂಜಾರಿ, ರಾಜು ತಬಲಾ ಸಾಥ್ ನೀಡಿದರು. ಭಾಗ್ಯ ಪಾಳಾ ನಿರೂಪಣೆ ಮಾಡಿದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…