ಹೈದರಾಬಾದ್ ಕರ್ನಾಟಕ

ಬಿಜೆಪಿ ಅವೈಜ್ಞಾನಿಕ ಸಲಹೆಗಳ ಪರಿಣಾಮ ಲಸಿಕಾಕರಣಕ್ಕೆ ಹಿನ್ನೆಡೆ: ಶಾಸಕ ಪ್ರಿಯಾಂಕ್ ಖರ್ಗೆ ಕಿಡಿ

ಕಲಬುರಗಿ: ಬಿಜೆಪಿ ನಾಯಕರ ಅವೈಜ್ಞಾನಿಕ ಸಲಹೆಗಳ ಪರಿಣಾಮವಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿದಿದ್ದರಿಂದ ಕೋವಿಡ್ ಲಸಿಕಾಕರಣ ಅಭಿಯಾನಕ್ಕೆ ಸಮರ್ಪಕ ವೇಗ ದೊರಕದೆ ಕುಂಟುತ್ತಾ ಸಾಗಿದೆ ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೊರೋನಾ ಸೋಂಕಿನ ಮೂರನೆಯ ಅಲೆ ರಾಜ್ಯದ ಬಾಗಿಲ ಬಳಿ ಕುಳಿತಿದೆ ಎಂದು ತಜ್ಞರು ಎಚ್ಚರಿಸಿದ್ದರೂ ಕೂಡಾ ನಿದ್ದೆಗಣ್ಣಿನಲ್ಲಿರುವ ಸರ್ಕಾರ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ದಿಟ್ಟ ಕ್ರಮ ಕೈಗೊಳ್ಳುವಲ್ಲಿ‌ ವಿಫಲವಾಗುತ್ತಿರುವುದರ ಜೊತೆಗೆ ಜಿಲ್ಲೆಯ ಕುರಿತ ತನ್ನ ದಿವ್ಯ ನಿರ್ಲಕ್ಷ್ಯತನ ಮುಂದುವರೆಸಿದೆ. ಜಿಲ್ಲೆಯ ಬಿಜೆಪಿ ನಾಯಕರು ಈ ಕುರಿತು ಮೌನವಹಿಸಿದ್ದು ಗಮನಸಿದರೆ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ‌ ಹಾಗೂ ಕಲಬುರಗಿ ‌ಜಿಲ್ಲೆಗೆ ತೋರಿಸುತ್ತಿರುವ ಅಲಕ್ಷ್ಯತನಕ್ಕೆ ಸಮ್ಮತಿಸುತ್ತಿದ್ದಾರೆ ಎನಿಸುತ್ತದೆ.

ಗೋಮೂತ್ರ ಸೇವನೆ ಹಾಗೂ ಮೈಗೆ ಹಸುವಿನ ಸಗಣಿ ಮೆತ್ತಿಕೊಳ್ಳುವುದರಿಂದ ಕೊರೋನಾ ಸೋಂಕು ನಿವಾರಿಸಿಬಹುದು ಎಂದು ಬಿಜೆಪಿ ನಾಯಕರು ಕರೆ ಕೊಟ್ಟ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಲಸಿಕೆ ಪಡೆದುಕೊಳ್ಳಲು ಮುಂದೆ ಬರಲಿಲ್ಲ. ಪ್ರಾರಂಭಿಕ ಹಂತದಲ್ಲೇ ಹೀಗೆ ಅವೈಜ್ಞಾನಿಕ ವಿಚಾರಗಳನ್ನು ಜನರ ತಲೆಯೊಳೆಗೆ ತುಂಬಿದ ಬಿಜೆಪಿ ಪಕ್ಷ ಲಸಿಕಾಕರಣ ವೇಗ ಪಡೆದುಕೊಳ್ಳುಲು ವಿಫಲವಾಗಿರುವುದಕ್ಕೆ ನೇರ ಕಾರಣವಾಗಿದೆ ಎಂದು ದೂರಿದ್ದಾರೆ.

ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳುವುದರ ಮೂಲಕ ಕೊರೋನ ಸೋಂಕನ್ನು ತಡೆಗಟ್ಟಬಹುದು.‌ ಲಸಿಕೆ ಹಾಕಿಸಿಕೊಳ್ಳುವದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವಲ್ಲಿ ಒಂದು ಕಡೆ ಸರ್ಕಾರ ವಿಫಲವಾದರೆ, ಹಸುವಿನ ಮೂತ್ರ ಸೇವನೆ ಹಾಗೂ ಸಗಣಿ ಬಳಿದುಕೊಂಡರೆ ಕೊರೋನಾ ವಾಸಿಯಾಗುತ್ತದೆ ಎನ್ನುವ ಅವೈಜ್ಞಾನಿಕ ವಿಚಾರಗಳನ್ನು ಜನರಿಗೆ ಬಿಜೆಪಿ ನಾಯಕರು ಹೇಳುತ್ತಲೇ ಹೋಗಿದ್ದರಿಂದ ಮಹತ್ವಾಕಾಂಕ್ಷಿ ಅಭಿಯಾನಕ್ಕೆ‌ ಹಿನ್ನೆಡೆಯಾಗುವಂತಾಗಿದೆ.

ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ, ಕಲಬುರಗಿ ಜಿಲ್ಲೆಯಲ್ಲಿ ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡವರು ಕೇವಲ 36 % ಹಾಗೂ ಎರಡನೆಯ ಡೋಸ್ ಹಾಕಿಸಿಕೊಂಡವರು ಕೇವಲ 9% ಮಾತ್ರ. ಅಂದರೆ, ಒಟ್ಟು 19 ಲಕ್ಷ ವಯಸ್ಕರ ಜನಸಂಖ್ಯೆಯಲ್ಲಿ 8,75,095 ಜನರು ಲಸಿಕೆ ಪಡೆದುಕೊಂಡಿದ್ದಾರೆ. ಇವರಲ್ಲಿ 7,06,232 ಜನರು ಮೊದಲನೆಯ ಡೋಸ್ ಪಡೆದರೆ, ಕೇವಲ 1,68,863 ಜನರು ಎರಡನೆಯ ಡೋಸ್ ಪಡೆದುಕೊಂಡಿದ್ದಾರೆ.

ಮೊದಲನೆಯ ಹಾಗೂ ಎರಡನೆಯ ಡೋಸ್ ಸೇರಿದಂತೆ ಕಲಬುರಗಿ ನಗರ ವ್ಯಾಪ್ತಿಯಲ್ಲಿ- 2,92,539 ಜನರು ಲಸಿಕೆ ಪಡೆದರೆ, ಚಿತ್ತಾಪುರ ತಾಲೂಕಿನಲ್ಲಿ 1,03,554 ಜನರು ಲಸಿಕೆ ಪಡೆದಿದ್ದಾರೆ. ಕ್ರಮವಾಗಿ ಆಳಂದ- 97,074, ಚಿಂಚೋಳಿ- 82,237, ಜೇವರ್ಗಿ- 81,866, ಕಲಬುರಗಿ ಗ್ರಾಮೀಣ- 79, 355, ಸೇಡಂ- 70,855 ಹಾಗೂ ಅಫಝಲಪುರ ತಾಲೂಕಿನಲ್ಲಿ ಒಟ್ಟು 67,615 ಜನರು ಲಸಿಕೆ ಪಡೆದಿದ್ದಾರೆ. ಜಿಲ್ಲೆಯ ಒಟ್ಟು 19 ಲಕ್ಷ ವಯಸ್ಕರ ಜನಸಂಖ್ಯೆಯ ಆಧಾರಕ್ಕೆ ಹೋಲಿಸಿದರೆ ಲಸಿಕೆ ಪಡೆದರವರ ಸಂಖ್ಯೆ ಗಣನೀಯ ಏರಿಕೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಕೂಡಲೇ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

100% ಲಸಿಕಾಕರಣ ಪೂರ್ಣಗೊಳಿಸುವ ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತಿಗಳಿಗೆ ಸರ್ಕಾರ ರೂ 25 ಲಕ್ಷ ವಿಶೇಷ ಪ್ರೋತ್ಸಾಹ ಅನುದಾನ ಘೋಷಿಸಲಿ. ಈ ಅನುದಾನದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ತುರ್ತಾಗಿ ಹಾಗೂ ಅವಶ್ಯಕತೆ ಇರುವ ಜನಪರ ಕಾರ್ಯಕ್ರಮ ಅಥವಾ ಯೋಜನಗಳ ಜಾರಿಗೆ ತರಲು ಅನುಕೂಲವಾಗುತ್ತದೆ. ಸರ್ಕಾರ ಈ ನಿಟ್ಟಿಯಲ್ಲಿ ಯೋಚಿಸಿದರೆ ನಾನು ನನ್ನ ಶಾಸಕರ ನಿಧಿಯಿಂದ ಅಗತ್ಯವಿರುವ ಅನುದಾನ ಒದಗಿಸಲು ಸಿದ್ದನಿದ್ದೇನೆ ಎಂದು ಶಾಸಕರು ಹೇಳಿದ್ದಾರೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago