ಕರ್ನಾಟಕದ ಸುಮಾರು 20 ಊರುಗಳಲ್ಲಿ ಅಲ್ಲಮಪ್ರಭುಗಳ ಸ್ಮಾರಕಗಳಿದ್ದು, ಅಲ್ಲೆಲ್ಲ ಅಲ್ಲಮಪ್ರಭುವಿನ ಚರಿತ್ರೆ ಕಟ್ಟಿಕೊಡುವ ಅನೇಕ ಮಾಹಿತಿಗಳು ಸಿಗುತ್ತವೆ. ಅಧ್ಯಾತ್ಮಜ್ಞಾನದ ಮೇರು ಸದೃಶ ವ್ಯಕ್ತಿತ್ವದ ಅಲ್ಲಮಪ್ರಭುಗಳು ಶರಣ ಸಾಧಕರ ಜೊತೆ ಚರ್ಚೆ, ಸಂವಾದ ನಡೆಸಿದವರು.

ಅವರು ಆಗ ಎಷ್ಟು ಜನರಿಗೆ ಭೇಟಿಯಾಗಿದ್ದರೋ, ಎಷ್ಟು ಜನರ ಜೊತೆ ಸಂವಾದ ನಡೆಸಿದ್ದರೋ ಆ ಎಲ್ಲ ಶರಣರು ಕಲ್ಯಾಣಕ್ಕೆ ಆಗಮಿಸಿ ವಚನಗಳು ಬರೆದಿರುವುದನ್ನು ನಾವು ಗುರುತಿಸಬಹುದು. ಅಂತೆಯೇ ಅಲ್ಲಮಪ್ರಭುಗಳು ದೇಶಾಂತರಕ್ಕೆ ಹೋಗಿಲ್ಲ. ಅಧ್ಯಾತ್ಮಜೀವಿಗಳನ್ನು ಕಲ್ಯಾಣದ ಧಾರೆಗೆ, ಕಲ್ಯಾಣದ ದಾರಿಗೆ ತಂದು ಮುಟ್ಟಿಸುವ ಮಹತ್ವದ ಕೆಲಸ ಮಾಡಿದ್ದಾರೆ ಎಂದು ಹೇಳಬಹುದು.

ಅಲ್ಲಮಪ್ರಬುಗಳ ಬಗ್ಗೆ ಒಂದೆರಡು ತ್ರಿಪದಿ, ತತ್ವಪದಕಾರರ ಚಿಕ್ಕ ಚಿಕ್ಕ ಹಾಡುಗಳು, ದುರುದುಂಡೇಶ್ವರ ಕವಿಯ ಪ್ರಭುದೇವರ ಯಕ್ಷಗಾನ, ಮಂಜುನಾಥ ಭಾಗವತರ ಮಯಾ ಕೋಲಾಹಲ, ಶಿವಾನಂದ ಕವಿಯ ಅಲ್ಲಮಪ್ರಭು ಸಣ್ಣಾಟ ಮಾತ್ರ ಸಿಗುತ್ತವೆ. ಆದರೆ ಅವರ ಹೆಸರಿನ ಸ್ಮಾರಕಗಳು ಮತ್ತು ಮಾಹಿತಿಗಳು ಆಯಾ ಸ್ಥಳಗಳಲ್ಲಿ ಉಳಿದುಕೊಂಡು ಬಂದಿವೆ. ಅಲ್ಲಮಪ್ರಭುವಿನ ತಂದೆ ನಿರಹಂಕಾರ.

ತಾಯಿ ಸುಜ್ಞಾನಿ. ಇವರ ಹುಟ್ಟೂರು ಬಳ್ಳಿಗಾವಿ, ಕರವೂರು, ಬನವಾಸಿ ಎಂದು ಭಿನ್ನ ಅಭಿಪ್ರಾಯಗಳಿರುವುದನ್ನು ಗುರುತಿಸಬಹುದು. ಆದರೂ ಬಳ್ಳಿಗಾವಿಯೇ ವರ ಹುಟ್ಟೂರು ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಅನಿಮಿಷ ಅಲ್ಲಮನ ಗುರು ಎಂಬುದು ಅವರ ವಚನಗಳಿಂದ ತಿಳಿದು ಬರುತ್ತದೆ.

ಬಳ್ಳಿಗಾವಿಯ ಕೇದಾರನಾಥ ದೇವಲಯ, ತ್ರಿಪುರಾಂತಕೇಶ್ವರ ದೇವಾಲಯಗಳಿವೆ. ಅದರ ಮಗ್ಗುಲಿನ ಸ್ಥಳವನ್ನು ಅಲ್ಲಮಪ್ರಭು ಇದ್ದ ಸ್ಥಳ ಎಂದು ಜನ ಗುರುತಿಸುತ್ತಾರೆ. ಸಮೀಪದ ಮಾಳಗೊಂಡನಕೊಪ್ಪದಲ್ಲಿ ಅನಿಮಿಷಾರಣ್ಯ (ಪತ್ರವನ), ಅನಿಮಿಷನ ಗದ್ದುಗೆ ಇದೆ. ಈ ಗರ್ಭಗೃಹದ ಮಗ್ಗುಲಿಗೆ ಗೊಗ್ಗಯ್ಯನ ಸಮಾಧಿ, ಅದರ ಮಗ್ಗುಲಲ್ಲಿ ಗೊಗ್ಗಯ್ಯನ ಹೊಂಡ ಮುಂತಾದ ಸ್ಮಾರಕಗಳು ಕಾಣಸಿಗುತ್ತವೆ.

ಒಕ್ಕಲಿಗ ಗೊಗ್ಗಯ್ಯನ ಜೊತೆಯಲ್ಲಿ ಅಲ್ಲಮಪ್ರಭು ಬಹುಶಃ ಇಲ್ಲಿಯೇ ಚರ್ಚೆ ಮಾಡಿರಬೇಕು. ಹತ್ತಿರದಲ್ಲೇ ಶಿವಳ್ಳಿ (ಶಿವಪುರ) ಎಂಬ ಹಳ್ಳಿ ಇದೆ. ಅಲ್ಲಿರುವ ದೇವಾಲಯದಲ್ಲಿ ಅಲ್ಲಮಪ್ರಭು ತಪಸ್ಸು ಮಾಡಿದ್ದರು ಎಂದು ಹೇಳಲಾಗುತ್ತಿದೆ. ಗೊಗ್ಗಯ್ಯನ ದೇವಾಲಯ ಕೂಡ ಇದೆ.

ತನ್ನ ಗುರುವಾದ ಅನಿಮಿಷರಿದ್ದ ಊರು ಪಟ್ಟದಕಲ್ಲು. ಹೀಗಾಗಿ ಅಲ್ಲಮಪ್ರಭುಗಳು ಅಲ್ಲಿಯೂ ಓಡಾಡಿರಬೇಕು. ಅವರಿಗೆ ಗೋರಕ್ಷ ಎಂಬ ಸಾಧಕ ಇಲ್ಲಿಯೇ ಸಿಗುತ್ತಾನೆ. ಬೀದರ್ ಜಿಲ್ಲೆಯ ಗೋರ್ಟಾದಲ್ಲಿ ಗೋರಕ್ಷನ ದೇವಾಲಯವಿದೆ. ಅಲ್ಲಮಪ್ರಭುಗಳು ಗೋರಕ್ಷನ ಜೊತೆ ಇಲ್ಲಿಯೇ ಚರ್ಚೆ ನಡೆಸಿರಬೇಕು.

ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ನೃತ್ಯ ಮಂಟಪವಿದೆ. ಅಲ್ಲಿನ ಶಿವೋತ್ಸವ ಮಂಟಪದಲ್ಲಿ ಶರಣರ ಶಿಲ್ಪಗಳಿವೆ. ಅಲ್ಲಮಪ್ರಭು ಇಲ್ಲಿಗೆ ಆಗಮಿಸಿದ್ದರು. ಅನತಿ ದೂರದಲ್ಲಿ ಎರಡು ಅಲ್ಲಮಪ್ರಭು ದೇವಾಲಯಗಳಿವೆ. ಕಾಮಲತೆ (ಮಯಾದೇವಿ) ಅಲ್ಲಮನನ್ನು ಹುಡಕಲು ಬಂದಾಗ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಮಾಯವಾಗುತ್ತಿದ್ದರು ಎಂದು ಹೇಳಲಾಗುತ್ತದೆ.

ಅಲ್ಲಮಪ್ರಭು-ಸಿದ್ಧರಾಮ ಮೊದಲ ಭೇಟಿಯಾದ ಸೊಲ್ಲಾಪುರದ ಕೆರೆಯ ದಂಡೆಯಲ್ಲಿ ಅಲ್ಲಮಪ್ರಭು ದೇವಾಲಯವಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮೊಸರಕಲ್ಲಿನ ಅಜಗಣ್ಣ ಮುಕ್ತಾಯಕ್ಕರ ಸ್ಮಾರಕವಿದೆ. ಇದೇ ಬೆಟ್ಟದಲ್ಲಿಯೇ ಅಲ್ಲಮಪ್ರಭು ಇವರನ್ನು ಭೇಟಿಯಾಗಿರಬೇಕು ಎಂದು ಅಂದಾಜಿಸಬಹುದು. ಸಮೀಪದಲ್ಲಿಯೇ ಇರುವ ಗೂಗಲ್‍ನಲ್ಲಿ ಪ್ರಭುದೇವರ ದೇವಾಲಯವಿದೆ. ಮಾನ್ವಿ ತಾಲ್ಲೂಕಿನ ಮೊರಟದ ಬಂಕಯ್ಯನ ದೇವಾಲಯವಿದೆ. ಅಲ್ಲೂ ಕೂಡ ಅಲ್ಲಮಪ್ರಭುವಿನ ಸ್ಮಾರಕವಿದೆ.

ಬಸವಕಲ್ಯಾಣದಲ್ಲಿ ಅಲ್ಲಮಪ್ರಭು ಹೆಸರಿನ ಗವಿ ಮಠವಿದೆ. ಇದೇ ಸ್ಥಳದಲ್ಲಿಯೇ ಶರಣರ ಜೊತೆ ಸಂವಾದ ನಡಸುತ್ತಿದ್ದರು ಎಂಬುದು ಗೊತ್ತಾಗುತ್ತದೆ. ಅಲ್ಲಮಪ್ರಭು ಬೆಳಗಿಸಿದ ದೀಪ ಇಂದಿಗೂ ಅಲ್ಲಿರುವುದನ್ನು ಕಾಣಬಹುದು. ಗದಗನಲ್ಲೂ ಒಂದು ಮಠವಿದೆ. ಚಿಟಗುಪ್ಪದಲ್ಲಿ ಅಲ್ಲಮಪ್ರಭುವಿನ ಗವಿ ಇದೆ. ಮಗ್ಗುಲ್ಲಲ್ಲೇ ದೇವಾಲಯವಿದೆ.

ಶರಣ ಚರಿತೆಗೆ ಸ್ಮಾರಕಗಳೇ ದೊಡ್ಡ ಸಾಕ್ಷಿಯಾಗಿರುವುದರಿಂದ ಸಂಶೋಧನಾಸಕ್ತರು ಈ ಕಡೆ ಗಮನಹರಿಸಬೇಕಾಗಿದೆ. ಏಕೆಂದರೆ ಈ ಸ್ಮಾರಕಗಳಲ್ಲಿ ಈಗೀಗ ಯಾರ್ಯಾರೋ ಬಂದು ಸೇರಿಕೊಂಡು ಇದು ನಮ್ಮ ಹಿರಿಯರಿಗೆ ಸಂಬಂಧಿಸಿದ್ದು ಎಂದು ತಮ್ಮ ಹೆಸರು ಹೇಳಿಕೊಳ್ಳುತ್ತಿದ್ದಾರೆ. ಸ್ಮಾರಕಗಳು ಕೈಜಾರಿದರೆ ಶರಣರ ಇತಿಹಾಸವೇ ನಮ್ಮ ಕೈಯಿಂದ ಜಾರುತ್ತವೆ.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

7 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

10 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

14 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

15 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

17 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420