ಬಿಸಿ ಬಿಸಿ ಸುದ್ದಿ

ಹಳಕರ್ಟಿ ಖದೀರಿ ದರ್ಗಾ ಉರೂಸ್ ರದ್ದು: ಕೇರಳ ಮಹಾರಾಷ್ಟ್ರ ಭಕ್ತರು ಕಣ್ಣಿಗೆ ಬಿದ್ದರೆ ಕ್ರಮ

ವಾಡಿ: ಸಾಂಕ್ರಾಮಿಕ ರೋಗ ಕೊರೊನಾ ಮತ್ತೊಮ್ಮೆ ತನ್ನ ಅಟ್ಟಹಾಸ ಮೆರೆಯುವ ಲಕ್ಷಣಗಳು ಕಾಣಿಸುತ್ತಿದ್ದು, ಕೋವಿಡ್ ಹೊಸ ಮಾರ್ಗಸೂಚಿಗಳನ್ವಯ ಇದೇ ಆ.22 ರಂದು ನಡೆಯಬೇಕಿದ್ದ ಈ ಭಾಗದ ಸುಪ್ರಸಿದ್ಧ ಸಜ್ಜಾದಾ ನಸೀನ್ ಆಸ್ತಾನ್-ಇ-ಖದೀರಿ ಹಳಕರ್ಟಿ ದರ್ಗಾ ಶರೀಫ್‍ರ 44ನೇ ಉರೂಸ್ ಈ ವರ್ಷವೂ ಕೂಡ ಸಂಪೂರ್ಣ ರದ್ದುಪಡಿಸಲಾಗಿದೆ ಎಂದು ದರ್ಗಾದ ಪೀಠಾಧಿಪತಿ ಅಬುತುರಾಬ ಶಹಾ ಖ್ವಾದ್ರಿ ಪ್ರಕಟಿಸಿದ್ದಾರೆ.

ಜಾತ್ರಾಮಹೋತ್ಸವ ನಿಮಿತ್ತ ದರ್ಗಾ ಸಭಾಂಗಣದಲ್ಲಿ ತಹಶೀಲ್ದಾರ ಉಮಾಕಾಂತ ಹಳ್ಳೆ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಸಾಹೇಬ ಅವರು ಮಾತನಾಡಿದರು. ದೇಶದ ಹತ್ತಾರು ರಾಜ್ಯಗಳಿಂದ ಉರೂಸ್‍ಗೆ ಆಗಮಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಅಸಂಖ್ಯಾತ ಭಕ್ತರಿಗೆ ಈಗಾಗಲೇ ಉರೂಸ್ ರದ್ದಾಗಿರುವ ಸಂದೇಶ ರವಾನಿಸಿದ್ದೇವೆ.

ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಕೈಗೊಳ್ಳಲಾದ ಸೀಮಿತ ಜನರ ಸಮ್ಮುಖದಲ್ಲಿ ಅತ್ಯಂತ ಸರಳವಾಗಿ ಸಾಂಪ್ರದಾಯಿಕ ಧಾರ್ಮಿಕ ಆಚರಣಗಳನ್ನು ಪೂರ್ಣಗೊಳಿಸಿದ್ದೇವು. ಈ ವರ್ಷವೂ ಕೂಡ ಪೊಲೀಸ್ ಇಲಾಖೆಯಿಂದ ಉರೂಸ್ ಆಚರಿಸದಂತೆ ಆದೇಶವಿದ್ದು, ಅದನ್ನು ನಾವು ಗೌರವಿಸುತ್ತೇವೆ. ಪ್ರತಿವರ್ಷ ಹೈದರಾಬಾದ ನಗರದಿಂದ ಹಳಕರ್ಟಿ ಉರೂಸ್‍ಗಾಗಿ ಆಗಮಿಸುತ್ತಿದ್ದ ಸಂಧಲ್ ವಿಶೇಷ ರೈಲು ಮಂಜೂರಾತಿಗೆ ಕೋರಿ ರೈಲ್ವೆ ಇಲಾಖೆಗೆ ಪತ್ರ ಬರೆಯಲಾಗಿದೆ.

ಇಲಾಖೆಯಿಂದ ಯಾವೂದೇ ಉತ್ತರ ಬಂದಿಲ್ಲ. ಒಂದು ವೇಳೆ ವಿಶೇಷ ರೈಲು ಸೌಲಭ್ಯ ಸಿಕ್ಕರೆ ಮೆರವಣಿಗೆಯಿಲ್ಲದೆ ‘ಸಂಧಲ್’ ಹಳಕರ್ಟಿ ದರ್ಗಾ ತಲುಪಲಿದೆ. ರೋಗದ ಭೀಕರತೆಯನ್ನು ಅರಿತುಕೊಂಡು ಭಕ್ತರು ಮನೆಯಿಂದಲೇ ಹರಕೆ ತೀರಿಸುವ ಮೂಲಕ ದರ್ಗಾ ಶರೀಫ್ ಅವರ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.

ಈ ವೇಳೆ ಮಾತನಾಡಿದ ತಹಶೀಲ್ದಾರ ಉಮಾಕಾಂತ ಹಳ್ಳೆ ಹಾಗೂ ಪಿಎಸ್‍ಐ ವಿಜಯಕುಮಾರ ಭಾವಗಿ, ಉರೂಸ್ ಸಂಪೂರ್ಣ ರದ್ದುಪಡಿಸಲಾಗಿದೆ. ಹೊರಗಿನ ಭಕ್ತರು ದರ್ಗಾ ಪ್ರವೇಶ ಮಾಡುವಂತಿಲ್ಲ. ವಿಶೇಷವಾಗಿ ಸೊಂಕಿತರ ನಾಡು ಕೇರಳ ಮತ್ತು ಮಹಾರಾಷ್ಟ್ರದ ಭಕ್ತರ ಮೇಲೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಆ.22 ರಿಂದ 24 ವರೆಗೆ ದರ್ಗಾ ಪ್ರವೇಶ ನಿಷೇಧಿಸಲಾಗಿದೆ. ಉರೂಸ್‍ನ ಸಾಂಪ್ರಾದಾಯಿಕ ಆಚರಣೆಗಳನ್ನು ಕೆಲವೇ ಜನರ ಸಹಭಾಗಿತ್ವದಲ್ಲಿ ಸರಳವಾಗಿ ನಡೆಸಬೇಕು. ಸಂಧಲ್ ಮೆರವಣಿಗೆಗೆ ಅವಕಾಶವಿಲ್ಲ.

ನಿಗದಿತ ಜನಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರೆ ಹಿಂದೆಮುಂದೆ ನೋಡದೆ ಊರೂಸ್ ಸಮಿತಿ ವಿರುದ್ಧ ಎಫ್‍ಐಆರ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕಾನೂನಿನ ನಿಯಮಗಳಡಿ ಆಚರಣೆಗಳನ್ನು ಪೂರೈಸಿದರೆ ಎಲ್ಲರಿಗೂ ಅನುಕೂಲ ಎಂದು ಕಿವಿಮಾತು ಹೇಳಿದರು.

ನಾಲವಾರ ನಾಡಕಚೇರಿಯ ಉಪ ತಹಶೀಲ್ದಾರ ಲಕ್ಷ್ಮೀನಾರಾಯಣ, ಕ್ರೈಂ ಪಿಎಸ್‍ಐ ತಿರುಮಲೇಶ, ಕಂದಾಯ ನಿರೀಕ್ಷಕ ಪ್ರಶಾಂತ ರಾಠೋಡ ಇದ್ದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

8 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

19 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

19 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

21 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

22 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

22 hours ago