ಗುರುವನ್ನು ಹುಡುಕಿಕೊಂಡು ಹೊರಟ ಅಲ್ಲಮನ ಓಡಾಟ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸುಮಾರು ಐದಾರು ಊರುಗಳಲ್ಲಿ ಅಲ್ಲಮಪ್ರಭುಗಳ ಸ್ಮಾರಕಗಳು ಸಿಗುತ್ತವೆ. ಜಮಖಂಡಿಯಲ್ಲಿ ಅಲ್ಲಮಪ್ರಭು ಹೆಸರಿನ ಪುರಾತನ ನೆಲ ಮಾಳಿಗೆಯ ದೇವಾಲಯ ಸಿಗುತ್ತದೆ. ಬ್ರಾಹ್ಮಣ ಕುಟುಂಬದ ಹಿರಿಯರು ತಲೆತಲಾಂತರದಿಂದ ಪ್ರಭುದೇವರ ಲಿಂಗದ ಪೂಜೆ ಮಾಡುತ್ತಿರುವುದು ಕಂಡು ಬರುತ್ತದೆ.

ಇಲ್ಲಿಂದ ನಾಲ್ಕೈದು ಕಿ. ಮೀ. ದೂರದಲ್ಲಿರುವ ಹುಳ್ಯಾಳ ಗ್ರಾಮದಲ್ಲಿ ಹಳೆಯ ದೇವಾಲಯದ ಪಾದುಕೆಗಳು ಹಿರೇಮಠ ಮನೆತನದ ಜಗುಲಿಯ ಮೇಲೆ ಇಂದಿಗೂ ಪೂಜಿಸಲ್ಪಡುತ್ತಿವೆ. ಇಲ್ಲಿಂದ 5 ಕಿ.ಮೀ. ದೂರದಲ್ಲಿ ಕಂಕನವಾಡಿ ಗ್ರಾಮದಲ್ಲಿ ಗುಹೇಶ್ವರನ ಗಡ್ಡಿ (ಗೋರ ಶಿರಪ್ಪನಗಡ್ಡಿ) ಕಂಡು ಬರುತ್ತದೆ. ಈ ಸ್ಥಳದಲ್ಲಿ ಅಲ್ಲಮಪ್ರಭುಗಳು ಓಡಾಡಿರುವುದಕ್ಕೆ ಪುರವೆಗಳಿವೆ.

ಅಲ್ಲೊಂದು ದೊಡ್ಡ ಮಂದಿರವಿದೆ. ಸುಮಾರು 600 ಎಕರೆ ಜಮೀನನ್ನು ದೇವಸ್ಥಾನದ ಪೂಜಾರಿಗಳು ಒಕ್ಕಲುತನ ಸಾಗುವಳಿಗೆ ಬಳಸಿಕೊಂಡಿರುವುದನ್ನು ಕಾಣಬಹುದು.
ಚಿಮ್ಮಡ ಗ್ರಾಮದಲ್ಲಿ ಅಲ್ಲಮಪ್ರಭುವಿನ ದೇವಾಲಯವಿದೆ. ದೇವಾಲಯದ ಎದುರಿಗೆ ಹರಿವಾಣ (ಪರ್ಯಾಣ) ಮಂಟಪವಿದೆ.

ಊರ ಹೊರಗಡೆ ಇರುವ ದೊಡ್ಡ ದಿಬ್ಬದಲ್ಲಿ ಅಲ್ಲಮಪ್ರಭುಗಳು ವಾಯು ವಿಹಾರಕ್ಕೆ ಬರುತ್ತಿದ್ದ ಸ್ಥಳವಾಗಿತ್ತು ಎಂಬುದಕ್ಕಾಗಿ ಅಲ್ಲೊಂದು ಸ್ಮಾರಕ ನಿರ್ಮಿಸಿರುವುದನ್ನು ಕಾಣಬಹುದು. ಪ್ರಭುದೇವರ ಶೂನ್ಯಪೀಠಾರೋಹಣಕ್ಕೆ ಸಂಬಂಧಪಟ್ಟಂತೆ ಚೆನ್ನಬಸವಣ್ಣನ ವಚನದಲ್ಲಿ ಹರಿವಾಣ, ಬಟ್ಟಲು, ಪ್ರಸಾದದ ಪ್ರಸ್ತಾಪ ಬರುವಂತೆ ಈ ಸ್ಥಳಗಳಲ್ಲಿ ಈಗಲೂ ಹರಿವಾಣ ಹಾಗೂ ಕಿಚಡಿ ಉತ್ಸವ ನಡೆಯುತ್ತವೆ.

ತೇರದಾಳದಲ್ಲಿ ಕೂಡ ಅಲ್ಲಮಪ್ರಭುವಿನ ದೇವಾಲಯವಿದ್ದು, ಅದರ ಮುಂದೆಯೂ ಹರಿವಾಣ ಮಂಟಪವಿದೆ. ಅಲ್ಲಮಪ್ರಭುವಿಗೆ ಸಂಬಂಧಿಸಿದಂತೆ ಬಹು ದೊಡ್ಡ ದೇವಾಲಯವಿದು. ಇಲ್ಲಿ ದಿನಕ್ಕೆ ನಾಲ್ಕೈದು ಬಾರಿ ಪೂಜೆ ಮಾಡಲಾಗುತ್ತಿದೆ. ಕತೃ ಗದ್ದುಗೆಯ ಜೊತೆಗೆ ಮಗಿ (ಕುಂಡಲ) ಪೂಜೆ ಮಾಡಿಕೊಂಡು ಬರುತ್ತಿದ್ದಾರೆ.

ಅಲ್ಲಮಪ್ರಭು ಹೆಸರಿನ ಬಾವಿ ಕೂಡ ಇದೆ ಎಂದು ಹೇಳಲಾಗುತ್ತಿದೆ. ಗುಡಿಯ ಮುಂದೆಯೇ ಸಿದ್ಧರಾಮೇಶ್ವರ ದೇವಾಲಯ ಇದೆ. ಸಿದ್ಧರಾಮನಿಗೆ ಕಂಬಳಿ ಏರಿಸುವ ಪದ್ಧತಿ ಇಲ್ಲಿರುವುದು ಬಹಳ ಮುಖ್ಯವಾದುದು.

ಗದಗನಲ್ಲಿ ಕೂಡ ಅಲ್ಲಮಪ್ರಭುಗಳ ಸ್ಮಾರಕಗಳು ಸಿಗುತ್ತವೆ. ಗದಗನಲ್ಲಿ ಇರುವ ಪ್ರಭುದೇವರ ದೇವಾಲಯವು ಈಗ ಬೇರೆಯವರ ಸುಪರ್ದಿಯಲ್ಲಿರುವುದನ್ನು ಕಾಣಬಹುದು. ಕಣವಿ ಹಾಗೂ ಕುರ್ತಕೋಟಿಗಳಲ್ಲಿ ಅಲ್ಲಮಪ್ರಭುವಿಗೆ ಸೇರಿದ ಮೂರು, ಮೂರು ಸ್ಮಾರಕಗಳಿವೆ.

ಮುಳಗುಂದದಲ್ಲಿ ಅಲ್ಲಮಪ್ರಭುವಿನ ಸ್ಮಾರಕ ಸೇರಿದಂತೆ ಮಡಿವಾಳ ಮಾಚಿದೇವರ ಶಿಲ್ಪ ಇರುವುದನ್ನು ಕಾಣಬಹುದು. ಅಲ್ಲಮಪ್ರಭುಗಳು ತಮ್ಮ ಗುರುಗಳನ್ನು ಹುಡಕಿಕೊಂಡು ಮೇಲಿನ ಈ ಭಾಗಗಳಲ್ಲಿ ಓಡಾಟ ನಡೆಸಿರಬೇಕು ಎಂಬ ವಿಷಯ ಕ್ಷೇತ್ರಕಾರ್ಯದಿಂದ ತಿಳಿದು ಬರುತ್ತವೆ.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

5 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

5 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

7 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

7 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

7 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

7 hours ago