ಭಾರತೀಯ ಸಂಸ್ಕøತಿಯಲ್ಲಿ ಹಬ್ಬಗಳಿಗೆ ವಿಶೇಷ ಸ್ಥಾನಮಾನವಿದೆ. ಹಬ್ಬಗಳಲ್ಲಿ ಎರಡು ಪ್ರಕಾರಗಳು ಒಂದು ಧಾರ್ಮಿಕ ಹಬ್ಬಗಳು. ಇನ್ನೊಂದು ರಾಷ್ಟ್ರೀಯ ಹಬ್ಬಗಳು. ನಾವು ಧಾರ್ಮಿಕ ಹಬ್ಬಗಳು ಮನೆ ಮನೆಗಳಲ್ಲಿ ಸಡಗರ ಸಂಭ್ರಮದಿಂದ ಆಚರಿಸುತ್ತೇವೆ.
ಆದರೆ ರಾಷ್ಟ್ರೀಯ ಹಬ್ಬಗಳಾದ ಸ್ವಾತ್ರಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಇವುಗಳನ್ನು ಶಾಲೆ ಕಾಲೇಜುಗಳಿಗೆ ಸೀಮಿತವಾಗಿವೆ. ನಿಜಾಚರಣೆಯಲ್ಲಿ ಧಾರ್ಮಿಕ ಹಬ್ಬಗಳಿಗಿಂತಲೂ ರಾಷ್ಟ್ರೀಯ ಹಬ್ಬಗಳಿಗೆ ನಾವು ಹೆಚ್ಚಿನ ಪ್ರಾಶಸ್ತೆಯನ್ನು ನೀಡಿ, ಮನೆ ಮನೆಗಳಲ್ಲಿ ಆಚರಿಸುವ ಮೂಲಕ ನಮ್ಮ ಮಕ್ಕಳಲ್ಲಿ ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿಯನ್ನು ಬಿತ್ತಬೇಕು.
ಸ್ವಾತಂತ್ರ್ಯವೆಂದರೆ, ಬರಿ ನಮ್ಮನ್ನು ಆಳುವವರ ಬದಲಾವಣೆಯಲ್ಲ. ಅಲ್ಲದೆ ಕೇವಲ ರಾಜಕೀಯ ಸ್ವಾತಂತ್ರ್ಯವು ಅಲ್ಲ. ಎಲ್ಲ ಬಂಧನಗಳಿಂದ ಮುಕ್ತಗೊಳಿಸುವುದೇ ನಿಜವಾದ ಸ್ವಾತಂತ್ರ್ಯ. ಬಸವಾದಿ ಶರಣರು 12ನೇ ಶತಮಾನದಲ್ಲಿ ಮೊಟ್ಟ ಮೊದಲು ಪರಿಪೂರ್ಣ ಸ್ವಾತಂತ್ರದ ಕಹಳೆಯನ್ನು ಉದಿದರು.
ಕೆಲವರಿಗಷ್ಟೇ ಸೀಮಿತವಾಗಿರುವ ಧರ್ಮ, ದೇವರು, ಶಿಕ್ಷಣವನ್ನು ಎಲ್ಲರನ್ನೂ ಮುಕ್ತವಾಗಿ ನೀಡಿದರು. ಜಾತಿ-ಮತ-ವರ್ಣ-ವರ್ಗ ಲಿಂಗಭೇದವಿಲ್ಲದೆ ಎಲ್ಲಾ ಸಮುದಾಯದವರಿಗೂ ಲಿಂಗದೀಕ್ಷೆಯನ್ನು ನೀಡುವ ಮೂಲಕ ಧಾರ್ಮಿಕ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಕಾಯಕ ದಾಸೋಹ ತತ್ವಗಳನ್ನು ಹೇಳುವ ಮೂಲಕ ಆರ್ಥಿಕ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಸಾರಿದರು.
ಎಲ್ಲರಿಗೂ ಓದು ಬರಹವನ್ನು ಕಲಿಸುವ ಮೂಲಕ ಶೈಕ್ಷಣಿಕ ಹಾಗೂ ಸಾಹಿತ್ಯಿಕ ಸ್ವಾತಂತ್ರ್ಯವನ್ನು ನೀಡಿದರು. ನಾವೆಲ್ಲರೂ ಸಮಾನರು ಎಂದು ಹೇಳುತ್ತ ಸಾಮಾಜಿಕ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿದರು. ಅನುಭವಮಂಟಪದಲ್ಲಿ ಉಚ್ಚವರ್ಣಿಯರಿಂದ ಹಿಡಿದು ತುಳಿತಕ್ಕೊಳಾದ ಎಲ್ಲಾ ಸಮುದಾಯದ ಪ್ರತಿನಿಧಿಗಳನ್ನು ಮುಕ್ತಿವಾಗಿ ಸ್ವತಂತ್ರವಾಗಿ ಅವಕಾಶ ನೀಡಿದರು. ಎಲ್ಲರೂ ಸಮಾನವಾಗಿ ಕುಳಿತುಕೊಂಡು ಸಂವಾದ, ಚರ್ಚೆ ಮಾಡುತ್ತಿದ್ದರು. ಆ ಅನುಭಾವದ ಸಂವಾದದಿಂದಲೇ ಹುಟ್ಟಿರುವ ವಚನಸಾಹಿತ್ಯ ಜಾಗತೀಕ ಸಾಹಿತ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತದೆ.
ದೀನರು, ದಲಿತರು, ವೇಶ್ಯರು, ದಾಸಿಯರು, ಕಸಗೂಡಿಸುವರು, ದನಕಾಯುವವರು, ಬಟ್ಟೆ ಒಗೆಯುವವರು ಹೀಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಶರಣರ ಸ್ವಾತಂತ್ರ ಆಂದೋಲನದಲ್ಲಿ ಭಾಗಿ ಆಗಿದರು. ಹಾಗಾಗಿಯೇ ಶರಣರು ಪರಿಪೂರ್ಣ ಸ್ವಾತಂತ್ರ್ಯವನ್ನು ನೀಡಲು ಸಾಧ್ಯವಾಯಿತು.
ಬಸವಾದಿ ಶರಣರ ಪರಂಪರೆಯನ್ನು ಮುನ್ನಡೆಸುವ ಮೂಲಕ ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಕೆಳದಿ ರಾಣಿ ಚೆನ್ನಮ್ಮ ಅನೇಕ ರಾಜ ಮಹಾರಾಜರು ಸ್ವಾತಂತ್ರಕ್ಕಾಗಿಯೇ ಹೋರಾಡಿದರು. ಅವರ ತ್ಯಾಗ ಬಲಿದಾನದಿಂದ ದೊರೆತಿರುವ ಸ್ವಾತಂತ್ರ್ಯವನ್ನು ನಾವು ಕಾಯ್ದುಕೊಳ್ಳಬೇಕಾದರೆ ಬಸವಾದಿ ಶರಣರ ವಚನ ಮಾರ್ಗದಲ್ಲಿ ಮುನ್ನಡೆಯುವ ಅನಿವಾರ್ಯತೆ ಇಂದು ಉಂಟಾಗಿದೆ.
ರಾಷ್ಟ್ರಭಕ್ತಿ ಎಂದರೆ ಸೀಮೆಯ ಮೇಲೆ ಹೋಗಿ ಯುದ್ಧ ಮಾಡುವುದು ಅಷ್ಟೇ ಅಲ್ಲ. ದೇಶದ ನಾಗರಿಕರಾದ ನಾವೆಲ್ಲರೂ ನಮ್ಮ ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಪೂರೈಸಿದರೆ ಅದುವೇ ರಾಷ್ಟ್ರಭಕ್ತಿ ಆಗುತ್ತದೆ. ಕೊರನಾ ಮಹಾಮಾರಿಯ ಕಾಲದಲ್ಲಿ ಡಾಕ್ಟರ್, ನರ್ಸ, ಆಶಾ ಕಾರ್ಯಕರ್ತೆಯರು, ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಯವರು ಮತ್ತು ಪೋಲಿಸ್ ಇಲಾಖೆ ಸಿಬ್ಬಂದಿಯವರು ಮಾಡಿರುವ ಸೇವೆ ನಿಜವಾದ ರಾಷ್ಟ್ರಭಕ್ತಿ ಅಲ್ಲವೆ. ತಮ್ಮ ಜೀವನವನ್ನೇ ಮುಡುಪಾಗಿಟ್ಟು ಆಪತ್ಕಾಲದಲ್ಲಿ ಸೇವಾಭಾವದಿಂದ ಮಾಡಿರುವ ಕೆಲಸವೇ ರಾಷ್ಟ್ರಭಕ್ತಿ.
ನಾವು ನಮ್ಮ ದೇಶದ ನಿಸರ್ಗ ಸಂಪತ್ತನ್ನು ರಕ್ಷಿಸಬೇಕಾಗಿದೆ. ನಮ್ಮ ದೇಶದ ಪರಿಸರವನ್ನು ಕಾಪಾಡಬೇಕಾಗಿದೆ. ಒಂದು ವೇಳೆ ನಾವು ನಿಸರ್ಗವನ್ನು ಕಾಪಾಡದಿದ್ದರೆ ನಮ್ಮ ಜೀವನ ಯಾರಿಂದಲೂ ಕಾಪಾಡಲು ಸಾಧ್ಯವಿಲ್ಲ. ಆ ದಿಶೆಯಲ್ಲಿ ನಾವೆಲ್ಲರೂ ನಿಸರ್ಗ ಸಂಪತ್ತು, ದೇಶದ ಸಾರ್ವಜನಿಕ ಸಂಪತ್ತನ್ನು ರಕ್ಷಿಸುವ ಮೂಲಕ ರಾಷ್ಟ್ರಪ್ರೀತಿಯನ್ನು ಮೆರೆಯೋಣ. ನಮ್ಮ ರಾಷ್ಟ್ರ ಸಮೃದ್ಧ ಹಾಗೂ ಸಧೃಡ ಆಗುವ ನಿಟ್ಟಿನಲ್ಲಿ ಸಂಕಲ್ಪವನ್ನು ತೊಟ್ಟು ಎಲ್ಲರೂ ಒಗ್ಗೂಡಿ ಶ್ರಮಿಸೋಣ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…