ಕಲಬುರಗಿ:ಮೋದಿ ಸಂಪುಟದ ಸಚಿವರ ಜನಾಶಿರ್ವಾದ ಯಾತ್ರೆಯನ್ನು ತೀರ್ಥಯಾತ್ರೆ ಎಂದು ವಿಧಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರಾಗಿರುವ ಡಾ. ಅಜಯ್ ಸಿಂಗ್ ಟೀಕಿಸಿದ್ದಾರೆ.
ಜನ ಇವರನ್ನೆಲ್ಲ ಆಯ್ಕೆ ಮಾಡಿ ಕಳುಹಿಸಿ 2 ವರ್ಷಗಳೇ ಗತಿಸಿವೆ. ಈಗೇನು ಜನಾಶಿರ್ವಾದ ಪಡೆಯೋದಿದೆ? ಜನರ ಆಶಿರ್ವಾದದಿಂದ ಆಯ್ಕೆಯಾಗಿ ಹೋದವರು ಇವರೆಲ್ಲರೂ 2 ವರ್ಷದಲ್ಲಿ ಅದೇನು ಜನಪರ ಪ್ರಗತಿಪರ ಕೆಲಸಗಳನ್ನು ಮಾಡಿz್ದÉೀವೆ ಎಂಬುದರ ಮಾಹಿತಿ ನೀಡುವ ಕಾಲವಿದು. ಈ ಕಾಲದಲ್ಲಿ ಆಶಿರ್ವಾದ ಮಾಡಿರೆಂದು ಬಂದರೆ ಇವರಿಗೆ ಏನನ್ನಬೇಕು? ಜನರ ಆಶಿರ್ವಾದ ತಮಗೆ ತೋಚಿದಂತೆ ಬಳಸುತ್ತಿರುವ ಬಿಜೆಪಿಗರಿಗೆ ರಾಜ್ಯದ ಜನತೆ ಕ್ಷಮಿಸೋದಿಲ್ಲವೆಂದು ಅವರು ಹೇಳಿದ್ದಾರೆ.
ಕಲ್ಯಾಣ ನಾಡಾದ ಬೀದರ್‍ನಿಂದ ಶುರುವಾಗಿರುವ ಜನಾಶಿರ್ವಾದ ಯಾತ್ರೆಯುದ್ದಕ್ಕೂ ಕೋವಿಡ್ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಗಡಿ ಜಿಲ್ಲೆಗಳಾದ ಬೀದರ್, ಕಲಬುರಗಿಯಲ್ಲಿ ರಾತ್ರಿ ಕಫ್ರ್ಯೂ ಜಾರಿಯಲ್ಲಿದ್ದರೂ ರಾತ್ರಿ 10. 30 ರ ವರೆಗೂ ಸಭೆ ಮಾಡಿದ್ದಾರೆ. ಕೇಂದ್ರ ಸಚಿವರು, ಶಾಸಕರು ಇವರೆಲ್ಲರ ವಿರುದ್ಧ ಜಿಲ್ಲಾಡಳಿತ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂದು ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.
ಜನಾಶಿರ್ವಾದ ಪಡೆದು ಕಲ್ಯಾಣ ನಾಡಲ್ಲಿ ಕಲಬುರಗಿ, ಬೀದರ್ ಸೇರಿದಂತೆ 5 ಸ್ಥಾನಗಳಲ್ಲಿ ಬಿಜೆಪಿ ಗೆದ್ದರೂ ಇಲ್ಲಿಗೆ ಬರಬೇಕಾಗಿದ್ದಂತಹ ರೇಲ್ವೆ ವಿಭಾಗೀಯ ಕಚೇರಿ, ಸಿಪೆಟ್ ಕಚೇರಿ ಸೇರಿದಂತೆ 8 ಕ್ಕೂ ಹೆಚ್ಚು ಪ್ರಗತಿಪರ ಯೋಜನೆಗಳು ತರಲಾಗಿಲ್ಲ. ಇಲ್ಲಿ ಮಂಜೂರಾದಂತಹ ಇವೆಲ್ಲ ಯೋಜನೆಗಳು ಕೈಬಿಟ್ಟು ಹೋದರೂ ಇವರಿಗೆ ಪರಿವೇ ಇಲ್ಲದವರಂತೆ ಇದ್ದಾರೆ. ಇದೀಗ ಮತ್ತೆ ಜನಾಶಿರ್ವಾದ ಎಂದು ಬರುತ್ತಿದ್ದಾರೆ. ಇದು ಜನಾಶಿರ್ವಾದವಲ್ಲ, ಕೊನೆ ಮುಖ ತೋರಿಸಿ ಹೋಗುತ್ತಿz್ದÉೀವೆ ತೀರ್ಥಯಾತ್ರೆಗೆ ಎಂದು ಹೇಳುವಂತಿದೆ ಬಿಜೆಪಿಯವರ ಈ ಯಾತ್ರೆ ಎಂದು ಡಾ. ಅಜಯ್ ಸಿಂಗ್ ಲೇವಡಿ ಮಾಡಿದ್ದಾರೆ.
ಬೀದರ್ ಸಂಸದರು, ಈಗ ಕೇಂದ್ರ ಸಚಿವರಾಗಿರುವ ಭಗವಂತ ಖೂಬಾ ಯಾತ್ರೆಯುದ್ದಕ್ಕೂ ಗುಡಿ ಗುಂಡಾರ ಸುತ್ತುತ್ತಿದ್ದಾರೆ. ಕಲ್ಯಾಣದ ಬಿಜೆಪಿ ಶಾಸಕರುಗಳು ಇವರಿಗೆ ಸಾಥ್ ನೀಡುತ್ತಿದ್ದಾರೆ. ದಾರಿಯಲ್ಲೆಲ್ಲಾ ಮಠಗಳಿಗೆ – ಮಂದಿರಗಳಿಗೆ ಹೋಗಿ ಬರುತ್ತಿದ್ದಾರೆ. ಹೀಗಾಗಿ ಇದು ಅಕ್ಷರಶಃ ಬಿಜೆಪಿಯವರ ತೀರ್ಥಯಾತ್ರೆಯಂತೆಯೇ ಕಂಗೊಳಿಸುತ್ತಿದೆ, ಡಬಲ್ ಇಂಜಿನ್ ಸರಕಾರ ಈಗಲೇ ಕಲ್ಯಾಣಕ್ಕೆ ದೋಖಾ ಮಾಡಿದೆ. ಬಿಜೆಪಿಯವರಿಗೆ ತಕ್ಕಪಾಠ ಕಲಿಸಲು ಜನ ಸಿದ್ಧರಾಗಿರುವಾಗಲೇ ಈ ತೀರ್ಥ ಯಾತ್ರೆ ಹೊರಟಿದೆ ಎಂದು ಡಾ. ಅಜಯ್ ಸಿಂಗ್ ಕುಟುಕಿದ್ದಾರೆ.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…