ಇದು ಬಿಜೆಪಿಯವರ ತೀರ್ಥಯಾತ್ರೆ: ಡಾ. ಅಜಯ್ ಸಿಂಗ್ ಲೇವಡಿ

0
26

ಕಲಬುರಗಿ:ಮೋದಿ ಸಂಪುಟದ ಸಚಿವರ ಜನಾಶಿರ್ವಾದ ಯಾತ್ರೆಯನ್ನು ತೀರ್ಥಯಾತ್ರೆ ಎಂದು ವಿಧಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರಾಗಿರುವ ಡಾ. ಅಜಯ್ ಸಿಂಗ್ ಟೀಕಿಸಿದ್ದಾರೆ.

ಜನ ಇವರನ್ನೆಲ್ಲ ಆಯ್ಕೆ ಮಾಡಿ ಕಳುಹಿಸಿ 2 ವರ್ಷಗಳೇ ಗತಿಸಿವೆ. ಈಗೇನು ಜನಾಶಿರ್ವಾದ ಪಡೆಯೋದಿದೆ? ಜನರ ಆಶಿರ್ವಾದದಿಂದ ಆಯ್ಕೆಯಾಗಿ ಹೋದವರು ಇವರೆಲ್ಲರೂ 2 ವರ್ಷದಲ್ಲಿ ಅದೇನು ಜನಪರ ಪ್ರಗತಿಪರ ಕೆಲಸಗಳನ್ನು ಮಾಡಿz್ದÉೀವೆ ಎಂಬುದರ ಮಾಹಿತಿ ನೀಡುವ ಕಾಲವಿದು. ಈ ಕಾಲದಲ್ಲಿ ಆಶಿರ್ವಾದ ಮಾಡಿರೆಂದು ಬಂದರೆ ಇವರಿಗೆ ಏನನ್ನಬೇಕು? ಜನರ ಆಶಿರ್ವಾದ ತಮಗೆ ತೋಚಿದಂತೆ ಬಳಸುತ್ತಿರುವ ಬಿಜೆಪಿಗರಿಗೆ ರಾಜ್ಯದ ಜನತೆ ಕ್ಷಮಿಸೋದಿಲ್ಲವೆಂದು ಅವರು ಹೇಳಿದ್ದಾರೆ.

Contact Your\'s Advertisement; 9902492681

ಕಲ್ಯಾಣ ನಾಡಾದ ಬೀದರ್‍ನಿಂದ ಶುರುವಾಗಿರುವ ಜನಾಶಿರ್ವಾದ ಯಾತ್ರೆಯುದ್ದಕ್ಕೂ ಕೋವಿಡ್ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಗಡಿ ಜಿಲ್ಲೆಗಳಾದ ಬೀದರ್, ಕಲಬುರಗಿಯಲ್ಲಿ ರಾತ್ರಿ ಕಫ್ರ್ಯೂ ಜಾರಿಯಲ್ಲಿದ್ದರೂ ರಾತ್ರಿ 10. 30 ರ ವರೆಗೂ ಸಭೆ ಮಾಡಿದ್ದಾರೆ. ಕೇಂದ್ರ ಸಚಿವರು, ಶಾಸಕರು ಇವರೆಲ್ಲರ ವಿರುದ್ಧ ಜಿಲ್ಲಾಡಳಿತ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂದು ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.

ಜನಾಶಿರ್ವಾದ ಪಡೆದು ಕಲ್ಯಾಣ ನಾಡಲ್ಲಿ ಕಲಬುರಗಿ, ಬೀದರ್ ಸೇರಿದಂತೆ 5 ಸ್ಥಾನಗಳಲ್ಲಿ ಬಿಜೆಪಿ ಗೆದ್ದರೂ ಇಲ್ಲಿಗೆ ಬರಬೇಕಾಗಿದ್ದಂತಹ ರೇಲ್ವೆ ವಿಭಾಗೀಯ ಕಚೇರಿ, ಸಿಪೆಟ್ ಕಚೇರಿ ಸೇರಿದಂತೆ 8 ಕ್ಕೂ ಹೆಚ್ಚು ಪ್ರಗತಿಪರ ಯೋಜನೆಗಳು ತರಲಾಗಿಲ್ಲ. ಇಲ್ಲಿ ಮಂಜೂರಾದಂತಹ ಇವೆಲ್ಲ ಯೋಜನೆಗಳು ಕೈಬಿಟ್ಟು ಹೋದರೂ ಇವರಿಗೆ ಪರಿವೇ ಇಲ್ಲದವರಂತೆ ಇದ್ದಾರೆ. ಇದೀಗ ಮತ್ತೆ ಜನಾಶಿರ್ವಾದ ಎಂದು ಬರುತ್ತಿದ್ದಾರೆ. ಇದು ಜನಾಶಿರ್ವಾದವಲ್ಲ, ಕೊನೆ ಮುಖ ತೋರಿಸಿ ಹೋಗುತ್ತಿz್ದÉೀವೆ ತೀರ್ಥಯಾತ್ರೆಗೆ ಎಂದು ಹೇಳುವಂತಿದೆ ಬಿಜೆಪಿಯವರ ಈ ಯಾತ್ರೆ ಎಂದು ಡಾ. ಅಜಯ್ ಸಿಂಗ್ ಲೇವಡಿ ಮಾಡಿದ್ದಾರೆ.

ಬೀದರ್ ಸಂಸದರು, ಈಗ ಕೇಂದ್ರ ಸಚಿವರಾಗಿರುವ ಭಗವಂತ ಖೂಬಾ ಯಾತ್ರೆಯುದ್ದಕ್ಕೂ ಗುಡಿ ಗುಂಡಾರ ಸುತ್ತುತ್ತಿದ್ದಾರೆ. ಕಲ್ಯಾಣದ ಬಿಜೆಪಿ ಶಾಸಕರುಗಳು ಇವರಿಗೆ ಸಾಥ್ ನೀಡುತ್ತಿದ್ದಾರೆ. ದಾರಿಯಲ್ಲೆಲ್ಲಾ ಮಠಗಳಿಗೆ – ಮಂದಿರಗಳಿಗೆ ಹೋಗಿ ಬರುತ್ತಿದ್ದಾರೆ. ಹೀಗಾಗಿ ಇದು ಅಕ್ಷರಶಃ ಬಿಜೆಪಿಯವರ ತೀರ್ಥಯಾತ್ರೆಯಂತೆಯೇ ಕಂಗೊಳಿಸುತ್ತಿದೆ, ಡಬಲ್ ಇಂಜಿನ್ ಸರಕಾರ ಈಗಲೇ ಕಲ್ಯಾಣಕ್ಕೆ ದೋಖಾ ಮಾಡಿದೆ. ಬಿಜೆಪಿಯವರಿಗೆ ತಕ್ಕಪಾಠ ಕಲಿಸಲು ಜನ ಸಿದ್ಧರಾಗಿರುವಾಗಲೇ ಈ ತೀರ್ಥ ಯಾತ್ರೆ ಹೊರಟಿದೆ ಎಂದು ಡಾ. ಅಜಯ್ ಸಿಂಗ್ ಕುಟುಕಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here