ಸಿದ್ಧರಾಮರು ತಮಗೆ ಅಣ್ಣನಂತಿರುವ ಬಾಲಬೊಮ್ಮಣ್ಣನವರನ್ನು ನೆನಪಿಸಿ ವಚನಗಳನ್ನು ಬರೆಯುವುದನ್ನು ಗಮನಿನಿಸಿದರೆ ಬಾಲಬೊಮ್ಮಣ್ಣ ಸಿದ್ಧರಾಮನಿಗೆ ಅಣ್ಣನಂತೆ, ಶಿಷ್ಯನಂತಿದ್ದ. ಬಾಲಬೊಮ್ಮಣ್ಣನಿಗೆ ಸಿದ್ಧರಾಮ ಲಿಂಗದೀಕ್ಷೆ ಕೊಟ್ಟರು ಎಂಬುದು ತಿಳಿದು ಬರುತ್ತದೆ.
ರಾಘವಾಂಕನ ಸಿದ್ಧರಾಮ ಚರಿತೆಯ ಪ್ರಕಾರ ಮಲ್ಲಿಕಾರ್ಜುನ ದೇವಾಲಯ ಕಟ್ಟಲು ಮನೆಯಿಂದ ಹೊರಗಾದ ಸಿದ್ಧರಾಮನ ಜೊತೆ ಬೊಮ್ಮಣ್ಣ ಬಂದಿದ್ದರು. ಸಿದ್ಧರಾಮ ಮೊದಲು ಮಲ್ಲಿಕಾರ್ಜುನ ಹೆಸರಿನಲ್ಲಿ ಮಠ ಕಟ್ಟಿಸಿದ. ದೇವಾಲಯ ಕಟ್ಟಲು ತನ್ನ ಬಳಿ ಹಣ ಇಲ್ಲ ಎಂಬ ಚಿಂತೆ ಸಿದ್ಧರಾಮನಿಗೆ ಆಯ್ತು. ಚಾಮಲಾದೇವಿಗೆ ಶಿವ ಕನಸಿನಲ್ಲಿ ಬಂದು ಹೇಳಿದ್ದರಿಂದ ಸಿದ್ಧರಾಮನಿಗೆ ಹೊಲ ನೀಡಿದಳು. ಆ ಹೊಲದಲ್ಲಿ ಬೊಮ್ಮಣ್ಣನಿಗೆ ಗುದ್ದಲಿ ಕೊಟ್ಟು ಅಗೆದು ನೋಡಲು ಅಲ್ಲಿ ಹೊನ್ನಿನ ಕೊಪ್ಪರಿಗೆ ಹತ್ತಿತು. ಆ ದ್ರವ್ಯವನ್ನು ಚಾಮಲಾದೇವಿಗೆ ಮರಳಿ ಕೊಡಲು ಹೋದಾಗ ನೀನೆ ಆ ಧನವನ್ನು ಬಳಸು ಎಂದು ಅವರು ಹೇಳಿದರಂತೆ.
ಈ ಹಣದಲ್ಲಿ ಮೊದಲು ಮಲ್ಲಿಕಾರ್ಜುನ ದೇವಾಲಯ ಕಟ್ಟಿಸಿದ. ನಾಲ್ಕು ದೇವಕೋಷ್ಠ, 8 ಸಣ್ಣ ದೇವಕೋಷ್ಠ, ನವಣೆಯ ಹೊಲದಲ್ಲಿ ಶಿವಯೋಗಿ ಬಂದು ಭೇಟಿಯಾದ ಸ್ಥಳದಲ್ಲಿ ಮತ್ತೊಂದು, ನಲಿದು ಹರ ಕುಳ್ಳಿರ್ದ ಜಾಗದಲ್ಲಿ ಒಂದು, ಊರೊಳಗಿನ ಛತ್ರದಲ್ಲೊಂದು, ಅನುಗ್ರವಿತ್ತ ಗುರುಮೂರ್ತಿಯ ಬಳಿ ಒಂದು ಸೇರಿದಂತೆ ಸುಮಾರು 17 ಮಲ್ಲಿಕಾರ್ಜುನ ದೇವಾಲಯಗಳನ್ನು ಕಟ್ಟಿಸಿದರು ಎಂಬುದು ತಿಳಿದುಬರುತ್ತದೆ.
ಮಲ್ಲಿಕಾರ್ಜುನ ಪಂಡಿತಾರಾಧ್ಯರ ಗಣ ಸಹಸ್ರ ನಾಮಾವಳಿಯಲ್ಲಿ ಬೊಮ್ಮಣ್ಣನ ಹೆಸರಿದೆ. ಸಂಸ್ಕøತದ ಈ ಕೃತಿಯನ್ನು ಪಾಲ್ಕುರಿಕೆ ಸೋಮನಾಥ ಕನ್ನಡಕ್ಕೆ ತರುತ್ತಾರೆ. 770 ಅಮರಗಣಂಗಳನ್ನು ಹೆಸರಿಸುವಾಗ ಫ.ಗು. ಹಳಕಟ್ಟಿಯವರು ಈ ಕೃತಿಯನ್ನೇ ಅನುಸರಿಸಿರುವುದು ವಚನಸಂಪುಟದಿಂದ ಕಂಡುಬರುತ್ತದೆ. ರೇವಣಸಿದ್ಧ, ಅನಿಮಿಷ, ಅಲ್ಲಮಪ್ರಭು, ನೀಲಾಂಬಿಕೆಯರನ್ನು ಸ್ಮರಿಸುವ ಬಾಲಬೊಮ್ಮಣ್ಣನ ವಚನವಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ರೇವೂರ (ಬಿ) ಗ್ರಾಮದಲ್ಲಿ ರೇವಣಸಿದ್ಧೇಶ್ವರ ದೇವಾಲಯವಿದ್ದು, ದೇವಾಲಯದ ಕಾಂಪೌಂಡ್ ಒಳಗೆ ಸಿದ್ಧರಾಮೇಶ್ವರ, ಮಲ್ಲಿಕಾರ್ಜುನ ದೇವಾಲಯಗಳಿವೆ. ಊರ ಕೊನೆಗೆ ಬೊಮ್ಮಯ್ಯನ ಮಠ ಕಂಡುಬರುತ್ತದೆ. ಗರ್ಭಗುಡಿಯಲ್ಲಿ ಬಾಲಬೊಮ್ಮನ ಶಿವಲಿಂಗವಿದೆ. ಅಕ್ಕಲಕೋಟ ತಾಲ್ಲೂಕಿನ ಹಂಜಗಿಯಲ್ಲಿ ಬಾಲಬೊಮ್ಮನ ದೇವಾಲಯವಿದೆ. ಇದು ಅವರ ಹುಟ್ಟೂರು.
ಜೇವೂರಿನಲ್ಲಿ ಪುರಾತನ ಕಾಲದ ಕಾಶಿಲಿಂಗ, ಸೋಮಲಿಂಗ ದೇವಸ್ಥಾನಗಳಿರುವುದರಿಂದ ದೇವರ ದರ್ಶನಕ್ಕಾಗಿ ಬೊಮ್ಮಣ್ಣನವರು 5 ಕಿ.ಮೀ. ಸಮೀದ ಜೇವೂರಿಗೆ ಬರುತ್ತಿದ್ದರು ಎಂದು ಅನಿಸುತ್ತದೆ. ಹಂಜಗಿ-ಜೇವೂರ ಮಧ್ಯೆ ಅವರು ಕುಳಿತು ಹೋಗುವ ಸ್ಥಳದಲ್ಲಿ ಬೊಮ್ಮಣ್ಣನ ತೋರು ಗದ್ದುಗೆಯಿದೆ. ಜೇವೂರಿನಲ್ಲಿ ಅವರ ಸಮಾದಿ ಇದೆ. ನಾಗಣಸೂರಿನಲ್ಲಿಯೂ ಬಾಲಬೊಮ್ಮಣ್ಣನ ಸ್ಮಾರಕವಿದೆ. 1217ರ ಬ್ಯಾಗೇಹಳ್ಳಿಯ ಶಾಸನ ಕೂಡ ಬಲಬೊಮ್ಮಯ್ಯನ ಇರುವಿಕೆಯನ್ನು ಸಾಬೀತುಪಡಿಸುವಂತಿದೆ.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…