ಕಲಬುರಗಿ: ಕೇಂದ್ರ ಸಚಿವ ಭಗವಂತ ಖೂಬಾ ನೇತೃತ್ವದಲ್ಲಿ ಬೀದರ್‍ನಿಂದ ಹೊರಟಂತಹ ಬಿಜೆಪಿ ಜನಾಶಿರ್ವಾದ ಯಾತ್ರೆಯಲ್ಲಿ ಗನ್ ಹಿಡಿದು, ಗುಂಡು ಹಾರಿಸಿ ಮೆರೆದಾಡುವಂತಹ ಹುಚ್ಚು ಸಂಪ್ರದಾಯ, ಗೂಂಡಾ ಸಂಸ್ಕøತಿ ಕಂಡಿರೋದು ಕಳವಳಕಾರಿ ಎಂದಿರುವ ವಿದಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್ ಸಿಂಗ್ ಬಿಜೆಪಿಯ ಜನಾಶಿರ್ವಾದ ಯಾತ್ರೆಯ ಮೂಲಕವಾಗಿ ಶಾಂತಿ ಬಯಸುವ ಕರ್ನಾಟಕಕ್ಕೂ ಬಿಹಾರ, ಉಪ್ರದಲ್ಲಿ ಕಾಣುವಂತಹ ಹುಚ್ಚಾಟದ ಗನ್ ಸಂಸ್ಕøತಿ ಕಾಲಿಟ್ಟಂತಾಗಿದೆ ಎಂದು ಆತಂಕ ಹೊರಹಾಕಿದ್ದಾರೆ.
ಬಿಜೆಪಿ ಜನಾಶೀರ್ವಾದ ಯಾತ್ರೆಗೆ ಯಾದಗಿರಿ ಭಾಗದಲ್ಲಿ ಬಂದೂಕಿನ ಸ್ವಾಗತ ಮಾಡಿರುವುದು ಬಿಜೆಪಿಯ ಸಂಸ್ಕತಿ ಎಂತಹದ್ದಿದೆ ಎಂಬುದನ್ನು ಎತ್ತಿ ತೋರಿಸಿದೆ. ಶಿಸ್ತಿನ ಪP್ಷÀದ ಹಕೀಕತ್ತು ಬಯಲಾಗಿದೆ. ಆಡಳಿತದಲ್ಲಿರುವವರೇ ಹೀಗೆ ಗನ್ ಸಂಸ್ಕøತಿಗೆ ಬೆಂಬಲಿಸುವ ಮೂಲಕ ಸಮಾಜದಲ್ಲಿ ಅದೆಂತಹ ಸಂದೇಶ ಸಾರಲು ಹೊರಟಿದ್ದಾರೆಂಬುದನ್ನು ಜನರೇ ಅರಿಯಬೇಕಾಗಿದೆ ಎಂದು ಡಾ. ಅಜಯ್ ಸಿಂಗ್ ಹೇಲಿದ್ದಾರೆ.
ಗನ್ ಹಿಡಿದ 4 ಜನರನ್ನು ಬಂಧಿಸಲಾಗಿದೆ, 4 ಪೆÇಲೀಸರನ್ನು ಅಮಾನತು ಮಾಡಲಾಗಿದೆ. ಇದಷ್ಟೆ ಕ್ರಮ ಎಂದರೆ ಸಾಲದು, ಇಂತಹ ಸಂಸ್ಕøತಿಗೆ ಕಾರಣರಾದಂತಹ ಕೇಂದ್ರ ಸಚಿವ ಖೂಬಾ ಸೇರಿದಂತೆ ಯಾತ್ರೆಯಲ್ಲಿದ್ದಂತಹ ಬಿಜೆಪಿಯ ಮುಕಂಡರೆಲ್ಲರ ವಿರುದ್ಧವೂ ಪ್ರಕರಣ ದಾಖಲಾಗಬೇಕು, ಅವರೆಲ್ಲರ ವಿರುದ್ಧ ಶಿಸ್ತು ಕ್ರಮ ಜಾರಿಯಾಗಬೇಕು. ಕಲಬುರಗಿಯಲ್ಲೂ ಜನಾಶಿರ್ವಾದ ಯಾತ್ರೆ ಆಯೋಜಕರ ವಿರುದ್ಧ ಪ್ರಕರಣ ದಾಖಲಾಗಿದೆಯೇ ವಿನಹಃ ಪಾಲ್ಗೊಂಡವರ ಮೇಲಿಲ್ಲ, ಹೀಗ್ಯಾಕೆ? ಜನಾವ್ಬಾದಿರ ಸ್ಥಾನದಲ್ಲಿದ್ದವರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ, ಅವರ ಮೇಲೂ ಪ್ರಕರಣಗಲು ದಾಖಲಾಗಿ ಕ್ರಮಗಳು ಜರುಗಬೇಕು.
ಯಾದಗಿರಿ ಹಾಗೂ ಕಲಬುರಗಿ ಜಿಲ್ಲಾಡಳಿತಗಲು ಈ ವಿಚಾರದಲ್ಲಿ ಯಾರದೋ ಅಣತಿಯಂತೆ ವರ್ತನೆ ಮಾಡದೆ ನಿಸ್ಪಕ್ಷಪಾತವಾಗಿ, ಕಾನೂನು ಪ್ರಕಾರ ತಮ್ಮ ಕೆಲಸ ಮಾಡಿ ಜನರಲ್ಲಿ ಕಾನೂನಿದೆ, ಅದು ಎಲ್ಲರಿಗೂ ಒಂದೇ ಇರಲಿದೆ ಎಂದು ಸಾರಿ ಹೇಳುವಂತಹ ಕ್ರಮಗಳಿಗೆ ಮುಂದಾಗಬೇಕೆಂದು ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.
ಗನ್ ಕಲ್ಚರ್ ಹಿಂದಿನ ಕಾಣದ ಕೈ ಯಾರು? ಅವರನ್ನು ಹುಡುಕಿ ಕ್ರಮಕ್ಕೆ ಮುಂದಾದಗಬೇಕು, ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಕೋವಿಡ್ ಬೀತಿ ಇದ್ದರೂ ನಿಯಮಗಳನ್ನು ಉಲ್ಲಂಘಿಸಿರುವ ಬಿಜೆಪಿ ನಾಯಕರ ವಿರುದ್ಧ ತಕ್ಷಣ ಕ್ರಮ ಜರುಗಿಸಬೇಕು ಎಂದೂ ಡಾ. ಅಜಯ್ ಸಿಂಗ್ ಒತ್ತಾಯಿಸಿದ್ದಾರೆ.
ಕಲಬುರಗಿಯಲ್ಲಿ ಕೋವಿಡ್ ಕಟ್ಟುನಿಟ್ಟಿನ ನಿಯಮಗಳಿವೆ ಎಂದು ಕಾಂಗ್ರೆಸ್ ಪಕ್ಷ ತನ್ನ ವಿಭಾಗೀಯ ಸಮಾವೇಶವನ್ನ ರಾಯಚೂರಿಗೆ ಸ್ಥಳಾಂತರ ಮಾಡಿ ನಿಮಯ ಪಾಲಿಸಿದೆ. ಆದರೆ ಕಲಬುರಗಿಯಲ್ಲಿ ಆಡಳಿತರೂಢ ಬಿಜೆಪಿ ರಾಜಾರೋಷವಾಗಿ ನಿಯಮಗಳನ್ನೆಲ್ಲ ಗಾಳಿಗೆ ತೂರಿದ್ದು ದುರಂತ, ನಿಯಮ ಉಲ್ಲಂಘಿಸಿದವರೆಲ್ಲರಿಗೂ ಕೇಸ್ ಹಾಕಿ ಕ್ರಮಕ್ಕೆ ಮುಂದಾಗದೆ ಸಂಘಟಕರ ಮೇಲೆ ಮಾತ್ರ ಕ್ರಮ ಕೈಗೊಳ್ಳುತ್ತಿರುವ ಜಿಲ್ಲಾಡಳಿತದ ನಿಲುವು ಇನ್ನೂ ವಿಚಿತ್ರ ಎಂದು ಡಾ. ಅಜಯ್ ಸಿಂಗ್ ವಿಷಾದಿಸಿದ್ದಾರೆ.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…