ಬಿಸಿ ಬಿಸಿ ಸುದ್ದಿ

ಮಾತಾ ಮಾಣಿಕೇಶ್ವರಿ ಟ್ರಸ್ಟ್ ಪ್ರಕರಣ: ಐತಿಹಾಸಿಕ ಆದೇಶ ನೀಡಿದ ಕೋರ್ಟ್

ಅಮ್ಮನ ದರ್ಶನಕ್ಕೆ ಯಾರ ಅನುಮತಿ ಅವಶ್ಯಕತೆ ಇಲ್ಲ: ಕೋರ್ಟ್

ಸೇಡಂ: ಮಾತಾ ಮಾಣಿಕೇಶ್ವರಿ ಟ್ರಸ್ಟ್ ವಿರುದ್ಧ ಕಲಬುರಗಿ ಹೈಕೋರ್ಟ ಪೀಠದಲ್ಲಿ ಸಲ್ಲಿಸಲಾಗಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ಸುಖಾಂತ್ಯ ಕಂಡಿದೆ. ಈ ನಿಟ್ಟಿನಲ್ಲಿ ಐತಿಹಾಸಿಕ ಆದೇಶ ಹೊರಡಿಸಿರುವ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಮತ್ತು ಅಶೋಕ ಜಿ. ನಿಜಗಣ್ಣವರ ದ್ವಿಸದಸ್ಯ ಪೀಠ ಅಮ್ಮನವರ ದರ್ಶನಕ್ಕೆ ಭಕ್ತರು ಮುಕ್ತವಾಗಿ ತೆರಳಬಹುದು ಎಂದು ಹೇಳಿದೆ.

ಜುಲೈ 1 ರಂದು ಅರ್ಜಿ ಕೈಗೆತ್ತಿಕೊಂಡ ಕೋರ್ಟ ಸಾಕ್ಷಾö್ಯಧಾರಗಳನ್ನು ಪರಿಶೀಲಿಸಿದ್ದು, ಆದೇಶದ ಅರ್ಜಿ ಹೊರಬಿದ್ದಿದೆ. ಇದರಿಂದ ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಪ್ರಕರಣ ಒಂದು ಹಂತಕ್ಕೆ ಬಂದು ನಿಂತಿದ್ದು, ಭಕ್ತರಲ್ಲಿದ್ದ ಆತಂಕಕ್ಕೆ ಕೊಂಚ ವಿರಾಮ ದೊರೆತಂದಾಗಿದೆ.

ಸಾಮಾಜಿಕ ಕಾರ್ಯಕರ್ತ ಶಿವಕುಮಾರ ನಿಡಗುಂದ ಸಲ್ಲಿಸಿದ ಅರ್ಜಿಯಲ್ಲಿ ಅಮ್ಮನವರನ್ನು ಟ್ರಸ್ಟಿಗಳ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸಬೇಕು, ಅಮ್ಮನವರಿಗೆ ಮಹಿಳಾ ಸೇವಕಿ ನೇಮಿಸಬೇಕು, ಭಕ್ತರಿಗೆ ಮುಕ್ತ ದರ್ಶನ ಕಲ್ಪಿಸಬೇಕು, ಅಮ್ಮನವರ ಆರೈಕೆಗೆ ವೈದ್ಯರನ್ನು ನೇಮಿಸಬೇಕು ಮತ್ತು ಅಮ್ಮನವರು ನೆಲೆಸಿರುವ ಕೊಠಡಿಯಲ್ಲಿ ಸೂಕ್ತ ಸೌಲಭ್ಯ ಕಲ್ಪಿಸಬೇಕು ಎಂದು ಕೋರ್ಟ ಮೊರೆ ಹೋಗಿದ್ದರು.

ಸಾಮಾಜಿಕ ನ್ಯಾಯ ಕಲ್ಪಿಸುವ ಅಡಿ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಅರ್ಜಿದಾರನ ಬಹುತೇಕ ಕೋರಿಕೆಗಳು ಪೂರ್ಣಗೊಂಡಿವೆ ಎಂದು ಹೇಳಿದೆ.

ನಿಜಕ್ಕೂ ಇದೊಂದು ಐತಿಹಾಸಿಕ ತೀರ್ಪು. ಇದು ನನಗೆ ತೃಪ್ತಿ ತಂದಿದೆ. ಸಾಮಾಜಿಕ ನ್ಯಾಯದ ಪರಿಧಿಯಲ್ಲಿ ಕೋರ್ಟ್ ನಾನು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದೆ. ಇದರಿಂದ ನಾನು ಅಂದುಕೊಂಡ ಕೋರಿಕೆಗಳ ಪೈಕಿ ಕೆಲವು ಪೂರ್ಣಗೊಂಡಿವೆ. ಅಮ್ಮನವರಿಗೆ ಆರೋಗ್ಯ ಸೇವೆ ಕಲ್ಪಿಸುವ ಮತ್ತು ಇನ್ನೂ ಕೆಲ ವಿಚಾರಗಳ ಬಗ್ಗೆ ಸುಪ್ರಿಮ್ ಕೋರ್ಟ್ ಮೊರೆ ಹೋಗುವ ಆಲೋಚನೆಯಲ್ಲಿದ್ದೆನೆ. ಅಮ್ಮನವರು ಅನಧಿಕೃತವಾಗಿ ಟ್ರಸ್ಟಿಗಳ ಬಂಧನದಲ್ಲಿಲ್ಲ ಎಂದ ಮೇಲೆ ಭಕ್ತರು ಯಾವಾಗ ಬೇಕಾದರೂ ತೆರಳಿ ದರ್ಶನ ಪಡೆಯಬಹುದಾಗಿದೆ. ಆಶ್ರಮದ ಯಾರೊಬ್ಬರೂ ತಡೆದರೂ ಕೋರ್ಟ ಆದೇಶ ಉಲ್ಲಂಘಿಸಿದಂತಾಗುತ್ತದೆ. ಕೆಲ ದಿನಗಳಲ್ಲೆ ನಾನು ಸಹ ದರ್ಶನಕ್ಕೆ ತೆರಳಲಿದ್ದೆನೆ.                                                                                                                                                                – ಶಿವಕುಮಾರ ಭೀ ನಿಡಗುಂದಾ, ಸಾಮಾಜಿಕ ಕಾರ್ಯಕರ್ತ

ಸಾಮಾಜಿಕ ಕಾರ್ಯಕರ್ತ ಶಿವಕುಮಾರ ನಿಡಗುಂದಾ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ನೆಲೆಸಿರುವ ಮಾಣಿಕ್ಯಗಿರಿ ಆಶ್ರಮದ ಟ್ರಸ್ಟಿಗಳ ನಡೆ ವಿರುದ್ಧ ಕಲಬುರಗಿ ಹೈಕೋರ್ಟ ಪೀಠದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ನಂತರ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಅಮ್ಮನವರನ್ನು ಟ್ರಸ್ಟಿಗಳು ಅನಧಿಕೃತ ಬಂಧನದಲ್ಲಿ ಇರಿಸಿದ್ದಾರೆಯೇ, ಅವರಿಗೆ ಸೂಕ್ತ ಆರೋಗ್ಯ ಸೌಲಭ್ಯ ದೊರೆಯುತ್ತಿದೆಯೇ?, ಮಹಿಳಾ ಸೇವಕಿ ನೇಮಕ ಮಾಡಲಾಗಿದೆಯೇ? ಭಕ್ತರಿಗೆ ದರ್ಶನ ದೊರೆಯುತ್ತಿದೆಯೇ? ಎಂಬ ಬಗ್ಗೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವೈದ್ಯಾಧಿಕಾರಿಗಳ ತಂಡ ರಚಿಸಿ ತೆರಳಲು ಸೂಚಿಸಿತ್ತು. ಆಗ ತೆರಳಿದ ಸಂದರ್ಭದಲ್ಲಿ ಮಾತಾ ಮಾಣಿಕೇಶ್ವರಿ ಅಮ್ಮನವರ ದೈಹಿಕ ವೈದ್ಯಕೀಯ ಪರೀಕ್ಷೆಗೆ ಟ್ರಸ್ಟ್ ಕಾರ್ಯದರ್ಶಿ ಶಿವಯ್ಯಸ್ವಾಮಿ ವಿರೋಧ ವ್ಯಕ್ತಪಡಿಸಿದ್ದರು. ನಂತರ ಮೇಲ್ನೊಟಕ್ಕೆ ಪರಿಶೀಲನೆ ನಡೆಸಿದ ಮಹಿಳಾ ವೈದ್ಯರ ತಂಡ ಅಮ್ಮನವರ ಆರೋಗ್ಯ ತೀರಾ ಹದಗೆಟ್ಟಿರುವ ಬಗ್ಗೆ ವರದಿ ಸಲ್ಲಿಸಿತ್ತು.

ಆದೇಶದಲ್ಲೆನದೆ:  ಅರ್ಜಿ ಸಲ್ಲಿಸಿದ ಆರಂಭಿಕ ಹಂತದಲ್ಲಿ ಮಾತಾ ಮಾಣಿಕೇಶ್ವರಿ ಅನಧಿಕೃತ ಬಂಧನದಲ್ಲಿದ್ದರು, ಅರ್ಜಿ ಕೋರ್ಟ ಮೆಟ್ಟಿಲೇರಿದ ನಂತರ ಭಕ್ತರಿಗೆ ದರ್ಶನ ನೀಡಲಾಗಿದೆ. ಅಮ್ಮನವರ ಮುಕ್ತ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಕೋರ್ಟಗೆ ಸ್ಪಷ್ಟನೆ ನೀಡಿದ್ದಾರೆ.

ಮಾತಾ ಮಾಣಿಕೇಶ್ವರಿ ಅಮ್ಮನವರು ಅಸ್ವಸ್ಥರಾಗಿದ್ದು, ಕಳಪೆ ಮಟ್ಟದ ಪೋಷಣೆಯಲ್ಲಿರುವುದಾಗಿ ಜಿಲ್ಲಾಧಿಕಾರಿಗಳು ವರದಿಯಲ್ಲಿ ಉಲ್ಲೆಖಿಸಿದ್ದಾರೆ. ನಂತರ ಅರ್ಜಿದಾರರ ಕೋರಿಕೆಯಂತೆ ಮಹಿಳಾ ಸಹಾಯಕಿಯನ್ನು ನೇಮಕ ಮಾಡಿ, ದರ್ಶನ ನೀಡಲಾಗುತ್ತಿದೆ.

ಅಮ್ಮನವರು ಹಾಸಿಗೆ ಹಿಡಿದಿದ್ದಾರೆ. ಕದಲಲು ಆಗದಂತಹ ಹೀನಾಯ ಪರಿಸ್ಥಿತಿಯಲ್ಲಿ ಅಮ್ಮ ಇದ್ದಾರೆ ಎಂದು ಉಲ್ಲೆಖ. ಪ್ರಕರಣ ದಾಖಲಿಸುವ ಮುನ್ನ ಅಮ್ಮನವರು ಅನಧಿಕೃತವಾಗಿ ಟ್ರಸ್ಟಿಗಳ ಬಂಧನದಲ್ಲಿದ್ದರು. ಈಗ ಅವರ ದರ್ಶನ ನೀಡಲಾಗುತ್ತಿದೆ. ಹೇಬಿಯಸ್ ಕಾರ್ಪಸ್ ಅರ್ಜಿ ಅಡಿ ಅಮ್ಮನವರ ಆರೋಗ್ಯದ ಬಗ್ಗೆ ಮುಂದುವರೆಯಲಾಗಲ್ಲ ಎಂದ ಕೋರ್ಟ.

ಈಗಲೂ ಅಮ್ಮನವರು ವೈದ್ಯಕೀಯ ಸೇವೆ ಆಪೇಕ್ಷಿಸಿದ್ದೆ ಆದಲ್ಲಿ ಜಿಲ್ಲಾ ವೈದ್ಯಾಧಿಕಾರಿಗಳ ತಂಡ ಶೀಘ್ರವೇ ತೆರಳಿ ವೈದ್ಯಕೀಯ ಸೇವೆ ಕಲ್ಪಿಸುವಂತೆ ಆದೇಶದಲ್ಲಿ ಜಿಲ್ಲಾಧಿಕಾರಿ ಮತ್ತು ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ ಕೋರ್ಟ್. ಅಮ್ಮನವರು ಯಾವುದೇ ರೀತಿಯ ವೈದ್ಯಕೀಯ ಸೇವೆ, ಯಾವಾಗ ಬೇಕಾದರೂ ಪಡೆಯಬಹುದು ಎಂದು ಉಲ್ಲೆÃಖ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

5 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

5 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

5 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago