ಬಿಸಿ ಬಿಸಿ ಸುದ್ದಿ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಯಿಂದ ಚೊಚ್ಚಲ ಬಜೆಟ್ ಮಂಡನೆ: ಬಜೆಟ್ ನ ಪ್ರಮುಖ ಘೋಷಣೆ?

ನವದೆಹಲಿ:  ಮೋದಿ 2ನೇ ಸರಕಾರದ ಮೊದಲ ಸಾಮಾನ್ಯ ಬಜೆಟ್ ಇಂದು ಮಂಡನೆಗೆ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತು ಪ್ರವೇಶಿಸಿ, ಗ್ರಾಮ ಲೆಕ್ಕಿಗರ ಬಳಿ ಇರುವ ಬಾಹಿ ಖಾತೆಯನ್ನು ಸಂಸತ್ತಿಗೆ ತರುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿ, ಸೂಟ್‌ಕೇಸ್ ಸಂಸ್ಕೃತಿಗೆ ವಿದಾಯ ಹೇಳಿದರು.

ಮಹಿಳಾ ಪ್ರಧಾನಿ ಇಂದಿರಾಗಾಂಧಿ ಬಳಿಕ ಕೇಂದ್ರ ಸರ್ಕಾರದಲ್ಲಿ ಎರಡನೇ ಬಾರಿ ಬಜೆಟ್ ಮಂಡಿಸುತ್ತಿರುವ ಮಹಿಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಚೊಚ್ಚಲ ಬಜೆಟ್ ಮಂಡಿಸಲು ಬಂದ ನಿರ್ಮಲಾ ಸೀತಾರಾಮನ್, ಕೆಂಪು ಚೀಲದೊಂದಿಗೆ ಬಜೆಟ್ ಮಂಡಿಸಿದ್ದಾರೆ.

ಸಂಸತ್ತನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಕುರಿತು ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಬಲಿಷ್ಠ ದೇಶ, ಬಲಿಷ್ಠ ನಾಗರೀಕತೆ ನಮ್ಮ ಗುರಿಯಾಗಿದೆ. ದೇಶದ ಜನತೆಗೆ ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇವೆ. ನವಭಾರತದತ್ತ ನಾವು ಮುನ್ನುಗ್ಗುತ್ತಿದ್ದೇವೆ ಎಂದಿದರು.

2019-20ರ ಬಜೆಟ್ ನ ಮುಖ್ಯಅಂಶಗಳು….?

  1. ಗುಡಿಸಲು ಮುಕ್ತ ಭಾರತಕ್ಕೆ ಒತ್ತು
  2. ಜನಧನ್ ಅಕೌಂಟ್‌ ಹೊಂದಿದ ಅರ್ಹ ಮಹಿಳೆಯರಿಗೆ 5ಸಾವಿರ ಓ.ಡಿ. ನೀಡಲು ನಿರ್ಧಾರ
  3. ತೆರಿಗೆ ಪಾವತಿಗೆ ಆಧಾರ್ ಕಾರ್ಡ್ ಇದ್ದರೆ ಸಾಕು, ಪಾನ್ ಕಾರ್ಡ್ ಕಡ್ಡಾಯವಲ್ಲ
  4. ಮತ್ತಷ್ಟು ದುಬಾರಿಯಾಗಲಿದೆ ಚಿನ್ನ
  5. 3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಪೆನ್ಶನ್
  6. 60 ವರ್ಷ ಮೇಲ್ಪಟ್ಟವರಿಗೆ 3ಸಾವಿರ ರೂ. ಪೆನ್ಶನ್
  7. ಬ್ಯಾಂಕ್‌ಗಳ ಏಕೀಕರಣಕ್ಕೆ ಕೇಂದ್ರದ ಒತ್ತು
  8. 1, 2, 5, 10, 20 ಹೊಸ ನಾಣ್ಯಗಳ ಬಿಡುಗಡೆ
  9. ಆಧಾರ್ ಕಾರ್ಡ್ ಮೂಲಕ ಪ್ರಧಾನಮಂತ್ರಿ ಕರ್ಮಯೋಗಿ ಮನ್‌ಧನ್ ಯೋಜನೆ ಜಾರಿ
  10. 5 ಲಕ್ಷದವರೆಗೆ ಆದಾಯ ಹೊಂದಿದವರಿಗೆ ತೆರಿಗೆ ಇಲ್ಲ

  1. ‘ಉಜಾಲಾ’ ಯೋಜನೆಯಡಿ 3ಕೋಟಿ ಬಲ್ಬ್ ವಿತರಣೆ
  2. ಖೆಲೋ ಇಂಡಿಯಾ ಮೂಲಕ ಕ್ರೀಡೆಗೆ ಮನ್ನಣೆ
  3. ಬಸವಣ್ಣನವರ ದಾಸೋಹ ತತ್ವದಡಿ ಬಡವರಿಗೂ ದಾಸೋಹ
  4. ಬಸವಣ್ಣನವರ ಕಾಯಕವೇ ಕೈಲಾಸ ತತ್ವದಡಿ ಕೌಶಲ್ಯಾಭಿವೃದ್ಧಿ ಯೋಜನೆ ಜಾರಿ
  5. ‘ಹರ್‌ ಘರ್‌ ಜಲ’ ಯೋಜನೆ ಮೂಲಕ ಪ್ರತಿಮನೆಗೂ ಶುದ್ಧ ಕುಡಿಯುವ ನೀರು
  6. ಸಣ್ಣ ಉದ್ಯಮಿಗಳಿಗೆ 1ಕೋಟಿವರೆಗೆ ಅನುದಾನ
  7. ಶೂನ್ಯ ಬಂಡವಾಳ ಕೃಷಿಗೆ ಹೆಚ್ಚಿನ ಆದ್ಯತೆ
  8. ಉದಯ್ ಯೋಜನೆ ಮೂಲಕ ಅಡುಗೆ ಅನಿಲ ಸಂಪರ್ಕ
  9. ಒನ್ ಕಾರ್ಡ್, ಒನ್ ಟ್ರಾನ್ಸ್‌ಪೋರ್ಟ್ ಯೋಜನೆ
  10. ಎಲೆಕ್ಟ್ರಿಕಲ್ ವಾಹನ ಖರೀದಿಗೆ ಹೆಚ್ಚಿನ ಒತ್ತು
  11. ರುಪೆ ಕಾರ್ಡ್ ಮಾದರಿಯಲ್ಲಿ ಸಂಚಾರಿ ಕಾರ್ಡ್
  12. 300ಕಿಲೋ ಮೀಟರ್ ಮೆಟ್ರೋ ಸಂಚಾರಕ್ಕೆ ಗ್ರೀನ್ ಸಿಗ್ನಲ್
  13. ಮನೆ ಬಾಡಿಗೆ ಕುರಿತು ಹೊಸ ಯೋಜನೆ ತರಲು ನಿರ್ಧಾರ
  14. 2022ರೊಳಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 1.59 ಕೋಟಿ ಮನೆ ಕಟ್ಟಲು ಚಿಂತನೆ
  15. ಪ್ರಧಾನಮಂತ್ರಿ ಮತ್ಸ್ಯ ಯೋಜನೆಗೆ ಚಾಲನೆ- ಮೀನುಗಾರಿಕಾ ಅಭಿವೃದ್ಧಿಗೆ ಒತ್ತು
  16. ವಿಮಾ ಹೂಡಿಕೆ 100% ಎಫ್‌ಡಿಐಗೆ ಅನುಮತಿ
  17. ಭಾರತೀಯ ಡಿಜಿಟಲ್ ಸಾಕ್ಷರತೆ ಯೋಜನೆ ಜಾರಿ
  18. ಅಂತರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ಉನ್ನ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ
  19. ಎನ್‌ಆರ್‌ಐಗಳಿಗೂ ಆಧಾರ್ ಕಾರ್ಡ್
emedialine

View Comments

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

7 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

7 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

7 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

24 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago