ಸಿಟ್ಟು ತನ್ನ ವೈರಿ ಶಾಂತಿ ಪರರ ವೈರಿ
ಭಾಲ್ಕಿ-ಅಗಸ್ಟ-೨೫
ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ
ತನಗಾದ ಆಗೇನು ಅವರಿಗಾದ ಚೇಗೆಯೇನು
ತನುವಿನ ಕೋಪ ತನ್ನ ಹಿರಿತನದ ಕೇಡು
ಮನದ ಕೋಪ ತನ್ನ ಅರಿವಿನ ಕೇಡು
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೇ
ನೆರೆಯ ಮನೆ ಸುಡದು ಕೂಡಲಸಂಗಮದೇವಾ

ವಚನಗಳು ನಮಗೆ ತಾಯಿಯಾಗಿ, ತಂದೆಯಾಗಿ, ಬಂಧುವಾಗಿ ಹಿತೋಪದೇಶವನ್ನು ಮಾಡುತ್ತವೆ. ನಮ್ಮ ಜೀವನ ಸರ್ವೋತೋಮುಖ ಅಭಿವೃದ್ಧಿಗಾಗಿ ಮಾರ್ಗದರ್ಶನ ಮಾಡುತ್ತವೆ. ಅದಕ್ಕಾಗಿ ನಾವು ದಿನನಿತ್ಯ ವಚನ ಪಠಣ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ನಮ್ಮ ದೈನಂದಿನ ಜೀವನದಲ್ಲಿ ಅನೇಕ ಸಂದರ್ಭಗಳಲ್ಲಿ ನಾವು ಕೋಪ ಮಾಡುತ್ತೇವೆ. ಹೆಂಡತಿ, ಮಕ್ಕಳು, ತಂದೆ, ತಾಯಿ ಹೀಗೆ ಮನೆಯಲ್ಲಿದ್ದವರೇ ಏನಾದರೂ ಒಂದು ಮಾತನಾಡಿದರೆ, ಕೆಲವರಿಗೆ ಅತೀಯಾದ ಕೋಪ ಬರುತ್ತದೆ.

ಆ ಸಂದರ್ಭದಲ್ಲಿ ಅವನಿಂದ ಅಹಿತಕರವಾದ ಘಟನೆಗಳನ್ನು ನಡೆಯುತ್ತವೆ. ಸಣ್ಣ ವಿಷಯದಲ್ಲಿಯೂ ಕೋಪ ಮಾಡಿಕೊಳ್ಳುವುದರಿಂದ ನಮ್ಮ ಮಾನಸಿಕ ನೆಮ್ಮದಿ ಕೌಟುಂಬಿಕ ಬದುಕು ಹಾಳಾಗುತ್ತದೆ. ಬಸವಣ್ಣನವರು ಮೇಲಿನ ವಚನದಲ್ಲಿ ನಾವು ಕೋಪ ಮಾಡಿಕೊಳ್ಳಬಾರದು ಎಂದು ಸೊಗಸಾಗಿ ಹೇಳಿದ್ದಾರೆ.

ಕೆಲವರು ಅಜ್ಞಾನದಿಂದ ತಾಳ್ಮೆ ಇರಲಾರದೆ ತನಗೆ ಮುನಿಯವರಿಗೆ ಕೋಪ ಮಾಡುತ್ತಾರೆ. ಯಾವುದೇ ಒಂದು ಸಂದರ್ಭದಲ್ಲಿ ತನ್ನ ಮನಸ್ಸಿಗೆ ತಕ್ಕಂತೆ ನಡೆಯದಿದ್ದರೆ ಅಲ್ಲಿಯೂ ನಾವು ಕೋಪ ಮಾಡುತ್ತೇವೆ. ಆದರಿಂದ ಆಗುವ ಕೆಲಸ ಕೂಡ ಹಾಳಾಗುತ್ತದೆ. ನಮ್ಮ ವ್ಯಕ್ತಿತ್ವದ ಘನತೆ ಗೌರವ ಕಡಿಮೆ ಆಗುತ್ತದೆ. ಸಾರ್ವಜನಿಕ ಜೀವನದಲ್ಲಿ ನಮಗೆ ಅಗೌರವವಾಗುತ್ತದೆ. ನಾವು ಕೋಪ ಮಾಡುವುದರಿಂದ ನಮ್ಮ ತನು-ಮನ ಹಾಳಾಗುತ್ತದೆ.

ಹೇಗೆ ಮನೆಯೊಳಗೆ ಹತ್ತಿರುವ ಬೆಂಕಿ ನಮ್ಮ ಮನೆಯನ್ನೇ ಸುಡುತ್ತದೆಯೋ ಅದೇ ರೀತಿ ನಾವು ಕೋಪ ಮಾಡುವುದರಿಂದ ನಮ್ಮ ತನು-ಮನ ಅಸ್ವಸ್ತವಾಗುತ್ತದೆ. ಅದಕ್ಕಾಗಿ ಬಸವಣ್ಣನವರು ಕೋಪ ಮಾಡಬಾರದು ಎಂದು ಹೇಳುತ್ತಾರೆ. ನಾವು ಸ್ವಲ್ಪ ಸಂಯಮದಿಂದ ಪ್ರೀತಿಯಿಂದ ಇದ್ದರೆ ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಸಿಟ್ಟು ತನ್ನ ವೈರಿ ಶಾಂತಿ ಪರರ ವೈರಿ ಎಂಬ ಗಾದೆ ಮಾತು ಇದನ್ನೇ ಹೇಳುತ್ತದೆ. ನಾವು ಶಾಂತಿನಿಂದ ಬಾಳಿದರೆ ನಮ್ಮ ಜೀವನ ಹಸನವಾಗುತ್ತದೆ.

ಕೋಪ ಮಾಡಬಾರದು ಅಂದರೆ ಪೂರ್ತಿಯಾಗಿ ಶಾಂತವೇ ಇರಬೇಕೆಂಬುದು ಅರ್ಥವಲ್ಲ. ಕೋಪ ಇರಬೇಕು. ಆದರೆ ಆದರಿಂದ ಮನಸ್ಸುಗಳು ಕೆಡಬಾರದು. ನಾವು ಸಮುದ್ರದ ನೀರಿನ ಮೇಲೆ ಗೆರೆ ಎಳೆದರೆ ಕೆಲವು ಕ್ಷಣ ಅಷ್ಟೇ ಗೆರೆಯನ್ನು ಕಾಣುತ್ತದೆ. ನಂತರ ಅದು ನೀರಿನಲ್ಲಿ ಮಾಯವಾಗುತ್ತದೆ. ಅದೇ ರೀತಿ ನಾವು ಸಮುದ್ರದ ದಡದಲ್ಲಿರುವ ಉಸುಕಿನ ಮೇಲೆ ಗೆರೆ ಎಳೆದರೆ ಅದು ಸ್ವಲ್ಪ ಸಮಯ ಇದ್ದು ಸಮುದ್ರದ ಅಲೆಯಿಂದ ಮಾಯವಾಗುತ್ತದೆ. ಈ ರೀತಿಯಾಗಿ ನಮ್ಮ ಕೋಪ ಇರಬೇಕು.

ಮಕ್ಕಳಿಗೆ ಬುದ್ಧಿ ಹೇಳುವ ಸಂದರ್ಭದಲ್ಲಿ ಮನೆಯಲ್ಲಿ ಅಹಿತಕರವಾದ ಘಟನೆಗಳನ್ನು ನಡೆಯಬಾರದೆಂದು ಹೇಳುವ ಮಾತುಗಳಲ್ಲಿ ನಾವು ಕೋಪ ಮಾಡಬೇಕು. ಆದರೆ ಅದು ನೀರಿನ ಮೇಲೆ ಗೆರೆ ಎಳೆದಂತೆ, ಉಸುಕಿನ ಮೇಲೆ ಗೆರೆ ಎಳೆದಂತೆ ಇರಬೇಕು. ಆದರೆ ಕೆಲವರು ಕಲ್ಲಿನ ಮೇಲೆ ಗೆರೆ ಎಳೆದಂತೆ ಆಯುಷ್ಯದುದ್ದಕ್ಕೂ ಕೋಪ ಮಾಡುತ್ತಾರೆ.

ಆದ್ದರಿಂದ ಏನೂ ಪ್ರಯೋಜನ ಸಾಧ್ಯವಿಲ್ಲ. ನಾವು ನಮ್ಮ ಜೀವನ ಸುಂದರ ಹಾಗೂ ಸುಖಿ ಮಾಡಿಕೊಳ್ಳಬೇಕಾದರೆ ಕೋಪ ಮಾಡದೆ ಶಾಂತಿ, ಸಮಾಧಾನದಿಂದ ಬಾಳುವ ಕಲೆಯನ್ನು ಕಲಿಯಬೇಕು. ಶರಣರ ವಚನಗಳು ನಮಗೆ ಆ ಕಲೆಯನ್ನು ತಾಯಿ-ತಂದೆ ಹಾಗೆ ಕಲಿಸುತ್ತವೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

22 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago