ಕಲಬುರಗಿ ಪ್ರಗತಿಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ: ಮಾಜಿ ಶಾಸಕ ಬಿಆರ್ ಪಾಟೀಲ್

ಕಲಬುರಗಿ: ಪ್ರಗತಿಗೆ ಕಾಂಗ್ರೆಸ್ ಕೊಡುಗೆ ಅಪಾರ, ಅದರಲ್ಲೂ ಧರಂಸಿಂಗ್, ಮಲ್ಲಿಕಾರ್ಜುನ ಖರ್ಗೆ, ಖಮರುಲ್ ಇಸ್ಲಾಂ ಕೊಡುಗೆ ಇಲ್ಲಿನ ಜನತೆ ಮರೆಯಲಾಗದು ಎಂದು ಮಾಜಿ ಶಾಸಕ ಬಿಆರ್ ಪಾಟೀಲ್ ಹೇಳಿದ್ದಾರೆ.

ಇಲ್ಲಿನ ವಾರ್ಡ್ 25 ರಲ್ಲಿ ಬರುವ ಕೈಲಾಶ ನಗರದಲ್ಲಿ ಶುಕ್ರವಾರ ನಡೆದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ಹುರಿಯಾಳು ರತೀಶ ಭೂಸನೂರ್ ಪರ ಬಿರುಸಿನ ಪ್ರಚಾರ ಮಾಡಿ ಮಾತನಾಡಿದ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕಲಬುರಗಿಗೆ ಇಎಸ್‍ಐಸಿ ಆಸ್ಪತ್ರೆ, ಜಿಮ್ಸ್ ಆಸ್ಪತ್ರೆ ತಂದವರು ಕಾಂಗ್ರೆಸ್ಸಿಗರು, ವಿಮಾನ ತಂದವರು ಡಾ. ಖರ್ಗೆ, ಹೈಕೋರ್ಟ್ ತಂದವರು ಮಾಜಿ ಸಿಎಂ ಧರಂಸಿಂಗ್, ಇದಲ್ಲದೆ ನಗರದಲ್ಲಿ ಅನೇಕ ಮೂಲ ಸವಲತ್ತಿಗೆ ಬಹುಕೋಟಿ ಹಣ ಕೊಟ್ಟವರು ಕಾಂಗ್ರೆಸ್ ಆಡಳಿತದಲ್ಲೇ. ಹೀಗಾಗಿ ಕಾಂಗ್ರೆಸ್ ಪಕ್ಷದಿಂದಲೇ ಕಲಬುರಗಿ ಮಹಾನಗರ ಶಿಕ್ಷಣ, ಆರೋಗ್ಯ ಎಲ್ಲಾ ರಂಗದಲ್ಲಿ ಬೆಳೆದಿದೆ ಎಂದು ಬಿಆರ್ ಪಾಟೀಲ್ ಪ್ರತಿಪಾದಿಸಿದರು.

ಬಿಜೆಪಿ ಕಲಬುರಗಿಗೆ ಏನನ್ನೂ ಕೊಡುಗೆ ನೀಡಿಲ್ಲ. ಸುಮ್ಮನೆ ಬೊಗಳೆ ಬಿಡುತ್ತಿದೆ. ಅಲ್ಲಿ ನಮ್ಮವರಿಗೆ ಪ್ರವೇಶವೇ ಇಲ್ಲ. ನಮ್ಮವರಿಗೆ ಕಾಂಗ್ರೆಸ್ ಸರಿಯಾದ ಪಕ್ಷ. ಬಿಜೆಪಿಯಲ್ಲಿ ತೊಂದರೆ ನನಗೆಗೊತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿರುವ ಪಾಟಿಲರು ಆಸ್ಪತ್ರೆ, ಶಿಕ್ಷಣ, ಆರೋಗ್ಯ, ರಸ್ತೆ, ಹೆದ್ದಾರಿ ಇತ್ಯಾದಿ ಯೋಜನೆಗಳನ್ನು ಕಲಬುರಗಿಗೆ ತಂದವರೇ ಕಾಂಗ್ರೆಸ್ಸಿಗರು ಎಂದಿದ್ದಾರೆ.

ಕಲಂ 371 ಕಲಬುರಗಿಗೆ ತಂದವರು ಕಾಂಗ್ರೆಸ್ಸಿಗರು. ಇದಕ್ಕಾಗಿ ಬಿಜೆಪಿ ವಿರೋಧ ಮಾಡಿತ್ತು. ಕಲಬುರಗಿ ನಗರ ಮೂಲ ಸವಲತ್ತಿನಿಂದ ಕಂಗೊಳಿಸಲು ಧರಂಸಿಂಗ್, ಖರ್ಗೆಯವರ ಕೊಡುಗೆಗಳೇ ಕಾರಣ ಎಂದು ಅನೇಕ ಯೋಜನೆಗಳ ಬಗ್ಗೆ ಹೇಳಿದರು.

ಕೈಲಾಶ ನಗರ ಸೇರಿದಂತಿರುವ ವಾರ್ಡ್ 25 ರ ಸಮಸ್ಯೆಗಳಿಗೆ ಪರಿಹಾರಕ್ಕೆ ಕಾಂಗ್ರೆಸ್ ಪಕ್ಷವೇ ಮದ್ದು. ರತೀಶ ಕುಮಾರ್‍ಗೆ ಬಹುಮತದಿಂದ ಗೆಲ್ಲಿಸುವಂತೆ ಕೋರಿದರು. ಭೂಸನೂರ್ ಕುಟುಂಬದ ಸಹೋದರರು ಜನಪರವಾಗಿದ್ದುಕೊಂಡು ಎಲ್ಲರ ಕೆಲಸ ಕಾರ್ಯಗಳಿಗೆ ಸ್ಪಂದಿಸುವ ಗುಣದವರಾಗಿದ್ದಾರೆಂದು ಶ್ಲಾಘಿಸಿದ ಪಾಟೀಲರು ಬಡಾವಣೆಯ ಜನ ಈ ಬಾರಿ ಕಾಂಗ್ರೆಸ್‍ಗೆ ಇಲ್ಲಿಂದ ಗೆಲ್ಲಿಸಿ ಮಾದರಿಯಾಗಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಆರ್ ಎಸ್ ಪಾಟೀಲ್, ಗುರುಲಿಂಗ ಜಂಗಮ ಪಾಟೀಲ್, ರೇವಣಸಿದ್ದಯ್ಯ ಮಠ, ಶಾಂತವೀರಪ್ಪ ದಂಗಾಪುರ, ಶಂರಣು ನಿಂಬರ್ಗಿ, ಜಿಪಂ ಮಾಜಿ ಸದಸ್ಯ ಸಿದ್ರಾಮ ಪ್ಯಾಟಿ, ಪರಮೇಶ್ವರ ಎಚ್, ಸಿದ್ದಣ್ಣ ಈ ವಾರ್ಡ್‍ನ ಎಲ್ಲರು ಹಿಂದೆ 2 ಬಾರಿ ಎಡವಿz್ದÉೀವೆ. ಈ ಬಾರಿ ಎಡವದೆ ಸರಿಯಾದವರಿಗೆ ಆರಿಸಲು ಒಂದಾಗಿz್ದÉೀವೆ, ಕಾಂಗ್ರೆಸ್‍ಗೆ ಮತ ಹಾಕೋದಾಗಿ ನಿರ್ಧಾರ ಮಾಡಿz್ದÉೀವೆಂದು ಹೇಳುತ್ತ ಬಡಾವಣೆಯ ಪ್ರಗತಿ ಮುಖ್ಯ. ಭೂಸÀನೂರ್ ಕುಟುಂಬದವರು ಸದಾಕಾಲ ಬಡಾವಣೆಯ ಪ್ರಗತಿಗೆ ಬೆಂಬಲವಾಗಿದ್ದಾರೆ. ಹೀಗಾಗಿ ಈ ಬಾರಿ ಈ ಪರಿವಾರದ ಕುಡಿ ರತೀಶಗೆ ಅವಕಾಶ ನೀಡಲೇಬೇಕಿದೆ ಎಂದರು.

ಜಿಸ್ಸಾ ಹಾಪಕಾಮ್ಸ್ ಅಧ್ಯಕ್ಷ ಗುರುಶಾಂತ ಪಾಟೀಲ್, ಕೆಪಿಸಿಸಿ ಸದಸ್ಯ ಹಣಮಂತರಾವ್ ಭೂಸನೂರ್, ಬಸವರಾಜ ಕಲ್ಯಾಣಿ, ಗುಂಡು ಭೂಸನೂರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣು ಗೋಧಿ, ಶರಣು ಭೂಸನೂರ್, ಗೌಡಪ್ಪ, ಬಡಾವಣೆಯ ಮಹಿಳೆಯರು, ಹಿರಿಯರು ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

emedialine

Recent Posts

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

3 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

9 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

19 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

21 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

21 hours ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

21 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420