ಬಿಸಿ ಬಿಸಿ ಸುದ್ದಿ

ಬಿಜೆಪಿ ಕಲಬುರಗಿಗೆ ಮೋಸ ಮಾಡಿದೆ: ಶಾಸಕ ಡಾ. ಅಜಯ್ ಸಿಂಗ್

ಕಲಬುರಗಿ: ಪಾಲಿಕೆ ಚುನಾವಣೆ ಪ್ರಚಾರ ಅಖಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ, ವಿಧಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕ, ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ಧುಮುಕಿದ್ದಾರೆ.

ಭಾನುವಾರ ಕಲಬುರಗಿಯ ವಿವಿಧ ವಾರ್ಡ್‍ಗಳಲ್ಲಿ ಸುತ್ತಾಡಿ ಕಾಂಗ್ರೆಸ್ ಉಮೇದುವಾರರ ಪರ ಬಿರುಸಿನ ಪ್ರಚಾರ ನಡೆಸಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇಲ್ಲಿನ ವಾರ್ಡ್ 25 ರ ಜೆಆರ್ ನಗರದಲ್ಲಿ ಉಮೇದುವಾರ ರತೀಶ ಭೂಸನೂರ್ ಪರ ಮತ ಯಾಚನೆಗೆ ಭಾನುವಾರ ಆಯೋಜಿಸಲಾಗಿದ್ದ ರೋಡ್ ಷೋ ಹಾಗೂ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮತ ಯಾಚಿಸಿದ ಅಜಯ್ ಸಿಂಗ್ ಬಿಜೆಪಿ ಕಲಬುರಗಿ ಪ್ರಗತಿಗೆ, ಕಲ್ಯಾಣ ನಾಡಿನ ಪ್ರಗತಿಗೆ ವಿರೋಧಿ ಎಂದು ಆರೋಪಿಸಿದರು.

ಕಲಂ 371 (ಜೆ) ನಮ್ಮ ಭಾಗಕ್ಕೆ ಬೇಕೆಂದು ಇಲ್ಲಿ ಹೋರಾಟ ನಡೆದಾಗ ಆ ಪಕ್ಷದ ಮುಕಂಡರು, ಗೃಹ ಸಚಿವರಾಗಿದ್ದ ಎಲ್‍ಕೆ ಆ್ವಣಿ ಅದನ್ನು ತಿರಸ್ಕರಿಸಿದ್ದರು. ಇನ್ನು ಕಲಬುಗಿಯಲ್ಲಿ ಏಮ್ಸ್ ಸ್ಥಾಪಿಸುವ ನಮ್ಮ ಆಗ್ರಹಕ್ಕೂ ಮಣೆ ಹಾಕಲಿಲ್ಲ. ಕಲಬುರಗಿಯಲ್ಲಿ ರೇಲ್ವೆ ವಿಭಾಗೀಯ ಕಚೇರಿ ಮಂಜೂರಾಗಿತ್ತು, ಯೂಪಿಎ ಸರಕಾರದ ಕೊಡುಗೆಯಾಗಿದ್ದ ಈ ಯೋಜನೆಯನ್ನು ಕೈಬಿಟ್ಟಿದ್ದಾರೆ. ಟೈಕ್ಸಟೈಲ್ ಪಾರ್ಕ್ ರದ್ದು ಮಾಡಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಹಣವನ್ನೂ ಕಡಿತ ಮಾಡಿದೆ. ಕೊರೋನಾ ಸಮಯದಲ್ಲಿ ಆಕ್ಸೀಜನ್, ರೆಮ್‍ಡಿಸಿವಿರ್ ಪೂರೈಸದೆ ಕಲಬುರಗಿಗೆ ಮೋಸ ಮಾಡಿದೆ ಎಂದು ದೂರಿದರು.

ಕಲಬುರಗಿ ಪ್ರಗತಿಗೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ. ಇಎಸ್‍ಐಸಿ ಆಸ್ಪತ್ರೆ ಸಂಕೀರ್ಣ, ಜಿಮ್ಸ್ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್, ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ, ಜಿಮ್ಸ್ ಕಾಲೇಜು, ವಿಮಾನ ನಿಲ್ದಾಣ, ಹೈಕೋರ್ಟ್, ಕಲಂ 371 (ಜೆ) ಅನುಷ್ಠಾನ, ಮಡಂಲಿಗೆ ಸಾವಿರಾರು ಕೋಟಿ ರು ಅನುದಾನ ಸೇರಿದಂತೆ ಅನೇಕ ಕೊಡುಗೆಗಳನ್ನು ಕಾಂಗ್ರೆಸ್‍ನ  ಕೇಂದ್ರ ಹಾಗೂ ರಾಜ್ಯ ಸರಕಾgಗಳು ನೀಡಿವೆ, ಮುಖಂಡರಾದ ಡಾ. ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ  ದಿ. ಧರಂಸಿಂಗ್, ದಿ. ಖಮರುಲ್ ಇಸ್ಲಾಂ  ಅವರೂ ಕೊಡುಗೆ ನೀಡಿದ್ದಾರೆಂದರು.

ಡಬ್ಬಲ್ ಇಂಜಿನ್ ಸರ್ಕಾರ ಎನ್ನುತ್ತಾರೆ, ಕಲ್ಯಾಣ ನಾಡಲ್ಲಿ ಮಾತ್ರ ಈ ಇಂಜಿನ್ ಫೇಲ್ ಆಗಿದೆ. ಇಲ್ಲಿನ ಎಲ್ಲ ಎಂಪಿಗಳು ಬಿಜೆಪಿಯವರು, ಹೆಚ್ಚಿನವರು ಬಿಜೆಪಿ ಶಾಸಕರು, ಹೀಗಿದ್ದರೂ ಕಲ್ಯಾಣಕ್ಕೆ ಮಂಜೂರಾದ ಯೋಜನೆಗಳು ಕೈಬಿಟ್ಟು ಹೋಗುತ್ತಿವೆ.

ಕಲಬುರಗಿ ದೂರ ದರ್ಶನ ಕೇಂದ್ರವೂ ಬಂದ್ ಆಗುತ್ತಿದೆ. ಇದಕ್ಕೆಲ್ಲ ಬಿಜೆಪಿ ನಾಯಕರ ಹೊಣೆಗೇಡಿತನವೇ ಕಾರಣ, ಇನ್ನು ಪಾಲಿಕೆ ಆಡಳಿತ ಬಿಜೆಪಿ ತೆಕ್ಕೆಗೆ ಹೋದರೆ ಗತಿ ಏನೆಂದು ಮತದಾರರು ಯೋಚಿಸಿರಿ ಎಂದು ಡಾ. ಅಜಯ್‍ಸಿಂಗ್ ಆತಂಕ ಹೊರಹಾಕಿದರು.

ವಾರ್ಡ್ 25 ರ ಕಾಂಗ್ರೆಸ್ ಹುರಿಯಾಳು ರತೀಶ ಕುಮಾರ್ ಭೂಸನೂರ್ ಇವರು ಯುವಕರು, ಇವರನ್ನು ಗೆಲ್ಲಿಸಿದರೆ ಈ ವಾರ್ಡ್‍ನ ಸರ್ವತೋಮುಖ ಪ್ರಗತಿ ಸಾಧ್ಯವಾಗಲಿದೆ, ಸೆ. 3 ರಂದು ಎಲ್ಲರು ಕೈ ಗುರುತಿಗೆ ಮತ ಹಾಕಿ ಗೆಲ್ಲಿಸಿ ತರಬೇಕೆಂದರು.

ಮುಖಂಡರಾದ ಅರುಣ ಪಾಟೀಲ್ ಕೋಡಲಹಂಗರಗಾ, ಶರಣಬಸಪ್ಪ ಬೆಳವಗಿ, ರಾಜು ಭೀಮಳ್ಳಿ, ಸಂತೋಷ ಪಾಟೀಲ್ ದಣ್ಣೂರÀ, ಶೆÀಟಗಾರ್, ಪರಮೇಶ್ವರ ಹಳಜೋಳ, ಶಂಕರಸಿಂಗ್, ಪೀಲು ತಿವಾರಿ, ಕೆಪಿಸಿಸಿ ಸದಸ್ಯ ಹಣಮಂತರಾವ ಭೂಸನೂರ್, ಶರಮು ಭೂಸನೂರ್ ಸೇರಿದಂತೆ ಅನೇಕರು ಇದ್ದರು.

emedialine

Recent Posts

ಪೂರ್ವ ಪೀಠಿಕೆ ಓದುವ ಮೂಲಕ ಸಂವಿಧಾನ ದಿನ ಆಚರಣೆ

ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…

4 hours ago

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

15 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

1 day ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

1 day ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

1 day ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

1 day ago