ಜಾಗತಿಕ ಶಾಂತಿಗೆ ತಾಲಿಬಾನಿ ಕಂಟಕ: ಪ್ಯಾಟಿ ಕಳವಳ

ಕಲಬುರಗಿ: ಇಂದಿನ ಸಂದಿಗ್ದ ಪರಿಸ್ಥಿತಿಯಲ್ಲಿ ಒಂದು ದೇಶ ಪ್ರಾಣ ಸಂಕಟದಲ್ಲಿರುವಾಗ ಚೀನಾ ಮತ್ತು ಪಾಕಿಸ್ತಾನ್ ದೇಶಗಳು ತಾಲಿಬಾನ್ ಉಗ್ರರಿಗೆ ಮಾನ್ಯತೆ ನೀಡುವುದು ಎಷ್ಟು ಸಮಂಜಸ? ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಮಾಜಿ ಸಿಂಡಿಕೇಟ್ ಸದಸ್ಯ ಶ್ಯಾಮರಾವ್ ಪ್ಯಾಟಿ ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ಈಗಾಗಲೇ ತಾಲಿಬಾನಿಗಳ ಉಪಟಳ ಅವರ ಅಟ್ಟಹಾಸದಿಂದ ಸಂಪೂರ್ಣ ಅಪಘಾನಿಸ್ತಾನದ ಪರಿಸ್ಥಿತಿ ಹೇಳತೀರದು. ಹಸುಳೆಗಳು, ಹೆಣ್ಣು ಮಕ್ಕಳ ಸ್ಥಿತಿ ಶೋಚನೀಯವಾಗಿದ್ದು ದುರದೃಷ್ಟಕರ ಸಂಗತಿ. ಅಪಾರ ಪ್ರಮಾಣದಲ್ಲಿ ದೊಡ್ಡಣ್ಣನ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಅವನೇ ಸೃಷ್ಟಿಕರಿಸಿದ ತಾಲಿಬಾನ್ ಉಗ್ರರ ಕೈವಶವಾಗಿದೆ. ಶಾಂತಿ ಮಂತ್ರ ಪಠಿಸಿ, ಅಶಾಂತಿ ಸೃಷ್ಟಿಸಿ ಜೀವಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇದನ್ನು ನೋಡಿ ವಿಶ್ವಸಂಸ್ಥೆ ಮೂಕ ಪ್ರೇಕ್ಷಕರಂತೆ ಇದ್ದರೆ ವಿಶ್ವ ಸಮುದಾಯದ ಗತಿಯೇನು? ಎಂದು ಅವರು ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ವಾಸ್ತವವನ್ನು ಮನಗಾಣಲು ಅಂತರ್ರಾಷ್ಟ್ರೀಯ ಸಮುದಾಯ ಮತ್ತು ವಿಶ್ವಸಂಸ್ಥೆ ವಿಫಲವಾದರೆ ಗತಿಯೇನು!. ವಿಶ್ವಸಮುದಾಯ ಒಂದಾಗಿ ಹೋರಾಡುವ ಕಾಲವಿದು. ಮನುಕುಲ ಉಳಿಯಬೇಕಾದರೆ ಉತ್ತಮ ಜೀವನ ನಡೆಸಬೇಕಾದರೆ ವಿಶ್ವ ಸಮುದಾಯದ ಅಂಗವಾದ ವಿಶ್ವಸಂಸ್ಥೆ ಮಧ್ಯಸ್ಥಿಕೆಯಿಂದ ತಾಲಿಬಾನ್ ಉಗ್ರರ ಉಪಟಳ ತಡೆಯಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಸ್ಥಿರತೆ ನಿಯಂತ್ರಣಕ್ಕೆ ತರದೇ ಇದ್ದರೆ ವಿಶ್ವದಲ್ಲಿ ಅಶಾಂತಿ ಉಂಟಾಗಿ ಮನುಕುಲ ನಾಶವಾಗುವ ಸಂದರ್ಭ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ ಅವರು, ಭಾರತದ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಭಯೋತ್ಪಾದನೆ ವಿರುದ್ಧ ವಿಶ್ವದಲ್ಲಿಯೇ ಪ್ರಬಲ ವ್ಯಕ್ತಿಯಾಗಿ ಧ್ವನಿ ಎತ್ತಿದ್ದು, ವಿಶ್ವಸಂಸ್ಥೆಯು ಕೂಡಲೇ ಮಧ್ಯಸ್ಥಿಕೆ ತಾಲಿಬಾನ್ ಭೀತಿಯನ್ನು ನಿಯಂತ್ರಿಸಬೇಕು ಎಂದು ಕೋರಿದ್ದಾರೆ.

ಭಾರತೀಯರಲ್ಲಿ ದೇಶದ ಸಮಗ್ರತೆ ಇದ್ದು, ತಾಲಿಬಾನ್ ಕಂಟಕದಿಂದ ಭಾರತಕ್ಕೆ ಯಾವುದೇ ರೀತಿಯಲ್ಲಿ ತೊಂದರೆ ಇಲ್ಲ. ಹಿಂದೂ, ಮುಸ್ಲಿಂರೆಲ್ಲರೂ ದೇಶದಲ್ಲಿ ಒಟ್ಟಾಗಿದ್ದು, ಒಂದಾಗಿದ್ದಾರೆ. ಹೀಗಾಗಿ ತಾಲಿಬಾನ್‌ಗಳ ಆಟ ದೇಶದಲ್ಲಿ ನಡೆಯುವುದು ಅಸಾಧ್ಯ ಎಂದು ಅವರು ತಿಳಿಸಿದ್ದಾರೆ.

emedialine

Recent Posts

ಎಲೇಕ್ಷನ್’ನಲ್ಲಿ ಗಿಮಿಕ್ ಮಾಡಿ ಮತಪಡೆದುಕೊಳ್ಳುವುದು ಮಾತ್ರ ಗೊತ್ತು; ಮಣಿಕಂಠ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…

22 mins ago

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

4 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

10 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

20 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

22 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

22 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420