ಬಿಸಿ ಬಿಸಿ ಸುದ್ದಿ

ಶರಣ ನುಲಿಯ ಚಂದಯ್ಯ: ಶರಣ ಚರಿತೆ

ಬಸವಾದಿ ಪ್ರಮಥರಲ್ಲಿಯೇ ವಿಶಿಷ್ಟ ಶರಣರೆನಿಸಿಕೊಂಡಿರುವ ನುಲಿಯ ಚಂದಯ್ಯ ಸಾಕಾರಲಿಂಗವನ್ನು ನಿರಾಕರಿಸಿ ನಿರಾಕಾರ ಲಿಂಗವನ್ನು ದೃಢವಾಗಿ ಅನುಷ್ಠಾನಗೊಳಿಸಿಕೊಂಡ ಶ್ರೇಷ್ಠ ಕಾಯಕ ಶರಣ. ಈಗಿನ ವಿಜಯಪುರ ಜಿಲ್ಲೆಯ ಶಿವಣಗಿ ಇವರ ಹುಟ್ಟೂರು. ಇವರು ಹಲವಾರು ವಚನ ರಚನೆ ಮಾಡಿರುವ ಸಾಧ್ಯತೆಗಳಿವೆ. ಆದರೆ ಕೇವಲ ೪೮ ವಚನಗಳು ಮಾತ್ರ ಲಭ್ಯವಿವೆ. ಚಂದೇಶ್ವರಲಿಂಗ ಇವರ ವಚನಾಂಕಿತ. ಸಮಯವನ್ನು ನೋಡಲು ಗಡಿಯಾರದ ಅವಶ್ಯಕತೆಯಿದೆ. ಆದರೆ ಗಡಿಯಾರವೇ ಸಮಯವಲ್ಲ. ಗಡಿಯಾರ ಇಲ್ಲದೆಯೂ ಸಮಯ ತನ್ನ ಚಲನಶೀಲತೆಯನ್ನು ಹೊಂದಿರುತ್ತದೆ. ಈ ಗಡಿಯಾರವೆಂಬ ಸಾಧನವಿಲ್ಲದೇ ಸಾಧನೆ ಮಾಡಿ ತೋರಿಸಬಹುದು ಎಂಬುದು ನುಲಿಯ ಚಂದಯ್ಯನ ಸಿದ್ಧಾಂತ.

ಶಿವಣಗಿಯಿಂದ ನಾಲ್ಕು ಕಿ.ಮೀ. ದೂರವಿರುವ ರಾಮತೀರ್ಥಕ್ಕೆ ಹೋಗಿ ಹುಲ್ಲು ತಂದು, ಬಾವಿಯಲ್ಲಿ ಆ ಹುಲ್ಲನ್ನು ತೋಯಿಸಿ ಒಣಗಿಸಿ ಅದರಿಂದ ಕೃಷಿ ಸಲಕರಣೆಗಳಾದ ಹಗ್ಗ ಕಣ್ಣಿ ಹೊಸೆಯುವ ಕಾಯಕ ಮಾಡುತ್ತಿದ್ದರು. ಹೀಗೆ ಕಾಯಕ ನಿರತರಾಗಿದ್ದಾಗ ಒಮ್ಮೆ ಕೊರಳಲ್ಲಿನ ಇಷ್ಟಲಿಂಗ ಕಳಚಿ ಬೀಳುತ್ತದೆ. ಕೆಳಗೆ ಬಿದ್ದ ಕೊರಳ ಲಿಂಗವನ್ನು ಎತ್ತಿಕೊಳ್ಳದೆ ತಮ್ಮ ಕಾಯಕದಲ್ಲಿ ಮುನ್ನಡೆದಾಗ ಇಷ್ಟಲಿಂಗ ಅವರ ಬೆನ್ನು ಹತ್ತಿ ಬರುತ್ತದೆ. ಆ ಇಷ್ಟಲಿಂಗವನ್ನು ಮತ್ತೆ ಪಡೆಯಲು ಚಂದಯ್ಯ ನಿರಾಕರಿಸುತ್ತಾನೆ ಎನ್ನುವ ಅವರ ಜೀವನದ ಪ್ರಮುಖ ಘಟನೆಯನ್ನು ನಡುಗನ್ನಡ ಕಾಲದ ಕಾವ್ಯ, ಕೃತಿಗಳು ಹೇಳುತ್ತವೆ. ಮೌಖಿಕವಾಗಿಯೂ ಇದೇ ಮಾಹಿತಿ ಸಿಗುತ್ತದೆ. ಈ ಘಟನೆಗೆ ಸಂಬಂಧಿಸಿದಂತೆ ನುಲಿಯ ಚಂದಯ್ಯ, ಮಡಿವಾಳ ಮಾಚಿದೇವ, ಹೆಂಡದ ಮಾರಯ್ಯವರ ಸಂವಾದ ರೂಪದ ವಚಗಳು ಕೂಡ ಇರುವುದನ್ನು ಗುರುತಿಸಬಹುದು.

ಶಿವಣಗಿ:
ನುಲಿಯ ಚಂದಯ್ಯನ ದೇವಾಲಯ. ಇದರ ಕೆಳಗೆ ಸುರಂಗ ಮಾರ್ಗವಿದ್ದು, ೪ ಕಿ. ಮೀ. ದೂರದಲ್ಲಿ ರಾಮತೀರ್ಥ ಶಿವಮಂದಿರ, ಬಾವಿ, ಜನವಸತಿಗಾಗಿ ಇರುವ ಸ್ಥಳವನ್ನು ಕಾಣಬಹುದು. ಇಲ್ಲಿಂದ ೨೬ ಕಿ.ಮೀ. ದೂರವಿರುವ ಸಿಂದಗಿ ತಾಲ್ಲೂಕಿನ ಕುಳೇಕುಮಟಗಿಗೆ ಬಂದು ಹೋಗುವ ಸಂಪರ್ಕವಿಟ್ಟುಕೊಂಡಿರುವುದರಿಂದ ಇಲ್ಲಿಯೂ ಚಂದೇಶ್ವರ ದೇವಾಲಯವಿದೆ. ಎದುರಿಗೆ ಪುಷ್ಕರಣಿಯಿದೆ.

ಬಸವಕಲ್ಯಾಣ: ಬಸವಣ್ಣನವರ ಕೀರ್ತಿವಾರ್ತೆ ಕೇಳಿ ಶಿವಣಗಿಯಿಂದ ೨೦೬ ಕಿ.ಮೀ. ದೂರ ಇರುವ ಬಸವಕಲ್ಯಾಣಕ್ಕೆ ನುಲಿಯ ಚಂದಯ್ಯ ಆಗಮಿಸಿದ್ದರಿಂದ ಬಸವಕಲ್ಯಾಣದಲ್ಲಿ ಅವರ ಸ್ಮಾರಕಗಳಿವೆ. ಅಕ್ಕನಾಗಮ್ಮನ ಗವಿ, ತ್ರಿಪುರಾಂತಕೇಶ್ವರ ದೇವಸ್ಥಾನದಿಂದ ಊರು ದಾಟುವಾಗ ಬಲ ಮಗ್ಗುಲು ಸಿಗುವ ಸ್ಮಾರಕವೇ ನುಲಿಯ ಚಂದಯ್ಯನವರದು. ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿರದವರು ಈ ಗವಿಯನ್ನು ಈಗ ಅಭಿವೃದ್ಧಿ ಪಡಿಸಿದ್ದಾರೆ. ನುಲಿಯ ಚಂದಯ್ಯನ ವಿಗ್ರಹಗಳಿವೆ. ಕಲ್ಯಾಣಕ್ಕೆ ಬಂದು ಹಗ್ಗ ಕಣ್ಣಿ ಹೊಸೆಯಲು ಅವರು ಬಳಸುತ್ತಿದ್ದ ಒಂದು ಬಾವಿ, ದೇವರ ಪೂಜೆ ಹಾಗೂ ಕುಡಿಯುವ ನೀರಿಗಾಗಿ ಬಳಸುತ್ತಿದ್ದ ಇನ್ನೊಂದು ಬಾವಿ ಗವಿಯ ಎದುರಿಗಿವೆ. ಬಸವ ಜಯಂತಿ ಮರುದಿನ ಬಸವಕಲ್ಯಾಣದಲ್ಲಿ ಜಾತ್ರೆ ಆಚರಿಸುತ್ತಾರೆ.

ಗಡವಂತಿ, ಉಳವಿ, ತರೀಕೆರೆ, ನಂದಿ: ಬಸವಕಲ್ಯಾಣದಿಂದ ೩೭ ಕಿ.ಮೀ. ದೂರದ ಗಡವಂತಿಯಲ್ಲಿ ಕೂಡ ಸ್ಮಾರಕವಿದೆ. ಕಲ್ಯಾಣ ಕ್ರಾಂತಿಯ ನಂತರ ಚೆನ್ನಬಸವಣ್ಣ, ಮಡಿವಾಳ ಮಾಚಿದೇವರ ನೇತೃತ್ವದಲ್ಲಿ ನುಲಿಯ ಚಂದಯ್ಯರಾದಿಯಾಗಿ ಉಳವಿ, ಅಲ್ಲಿಂದ ತರೀಕೆರೆವರೆಗೆ ೯೦೮ ಪ್ರಯಾಣ ಬೆಳೆಸಿದರು. ತರೀಕೆರೆಯಿಂದ ೧೦ ಕಿ. ಮೀ. ಕ್ರಮಿಸಿದರೆ ಚಿಕ್ಕಮಗಳೂರು ಜಿಲೆಯ ನಂದಿ ಗ್ರಾಮ. ಈ ಗ್ರಾಮದಲ್ಲಿರುವ ಈಶ್ವರ ದೇವಾಲಯವನ್ನು ಸಿದ್ಧೇಶ್ವರ ದೇವಾಲಯ ಎಂತಲೂ ಕರೆಯುತ್ತಾರೆ. ಆದರೆ ಆಚರಣೆಗಳೆಲ್ಲ ನುಲಿಯ ಚಂದಯ್ಯನವರಿಗೆ ಸಂಬಂಧಿಸಿದವುಗಳಾಗಿವೆ. ಚಂದಯ್ಯನವರು ಬಳಸುತ್ತಿದ್ದರು ಎನ್ನಲಾಗುವ ಜೋಳಿಗೆ, ಪಾದುಕೆ, ಬೆತ್ತಗಳಿವೆ. ಪ್ರಾಂಗಣದ ಮರದ ಕೆಳಗಿರುವ ಕಟ್ಟೆಯನ್ನು ಚಂದಯ್ಯನ ಕಟ್ಟೆ ಎಂದು ಕರೆಯುತ್ತಾರೆ.

ನುಲೇನೂರ: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ನುಲೇನೂರಿನಲ್ಲಿ ಚಂದಯ್ಯನವರು ಕೆಲವು ವರ್ಷ ಇದ್ದುದರಿಂದ ಪದ್ಮಾವತಿ ನಗರ ಹೋಗಿ ನುಲೇನೂರ ಆಯಿತು. ರಾಮಗಿರಿ ಸಮೀಪವಿರುವುದರಿಂದ ಇದನ್ನು ಆರ್. ನುಲೇನೂರ ಎಂದು ಕರೆಯುತ್ತಾರೆ. ಅಲ್ಲಿಂದ ಮತ್ತೆ ಟಿ. ನುಲೇನೂರಗೆ ಬರುತ್ತಾರೆ. ಆಮೇಲೆ ದುಮ್ಮಿ ಗ್ರಾಮಕ್ಕೆ ಬಂದರು ಎಂಬ ಮಾಹಿತಿ ಇದೆ. ನುಲೇನೂರನಲ್ಲಿ ಅನುಭವ ಮಂಟಪ, ಚಂದಯ್ಯನ ಗದ್ದುಗೆ ಇರುವ ದೇವಾಲಯವಿದೆ. ಅವರು ಇಲ್ಲಿಯೇ ಐಕ್ಯರಾಗಿರಬೇಕು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

3 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

14 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

14 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

16 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

16 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

16 hours ago