ಆಳಂದ: ಕಾಯಕ, ದಾಸೋಹ ಮತ್ತು ಸಮಾನತೆ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವ ತತ್ವದ ಪ್ರಚಾರದ ಜೊತೆಗೆ ಗಡಿನಾಡಿನಲ್ಲಿ ಕನ್ನಡದ ದೀಪವನ್ನು ಬೆಳಗುತ್ತಿರುವ ಖಜೂರಿ ಕೋರಣೇಶ್ವರ ಮಠದ ಶ್ರೀಗಳ ಕಾರ್ಯ ಶ್ಲಾಘನೀಯವಾಗಿದೆ ಎಂದು ಕರ್ನಾಟಕ ನವ ನಿಮಾಣ ಸೇನೆ ರಾಜ್ಯಾಧ್ಯಕ್ಷ ಹಾಗೂ ರಾಜ್ಯ ಬಿಜೆಪಿ ಯುವ ಮೋರ್ಚಾ ಮುಖಂಡ ಭೀಮಾಶಂಕರ ಪಾಟೀಲ ಅವರು ಹೇಳಿದರು.
ತಾಲೂಕಿನ ಖಜೂರಿ ಕೋರಣೇಶ್ವರ ಮಠದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳ ಅವರ ೬೨ನೇ ಹುಟ್ಟು ಹಬ್ಬದ ಅಂಗವಾಗಿ ಶ್ರೀಮಠದಲ್ಲಿ ಏರ್ಪಡಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಗಡಿಯಂದರೆ ಬೆಳಗಾಂವಗೆ ಮಾತ್ರ ಸೀಮಿತವಲ್ಲ. ಈ ಭಾಗದ ಸುತ್ತಮುತ್ತಲಿನ ಪ್ರದೇಶವೂ ಒಳಗೊಂಡಿದೆ. ಇಲ್ಲಿ ಕನ್ನಡ ಉಳಿಸಿ ಬೆಳೆಸುವಲ್ಲಿ ಖಜೂರಿ ಮಠದ ಶ್ರೀಗಳ ಕಾರ್ಯಕ್ಕೆ ಸಮಾಜ ಮತ್ತು ಸರ್ಕಾರ ಸ್ಪಂದಿಸುವ ಕಾರ್ಯವನ್ನು ಮಾಡಬೇಕಾಗಿದೆ. ಶ್ರೀಗಳ ಕನ್ನಡ ಚಟುವಟಿಕೆಗಳಿಗೆ ಸರ್ಕಾರ ಪ್ರೋತ್ಸಾಹ ನೀಡುವ ಮೂಲಕ ಗಡಿನಾಡಿನಲ್ಲಿನ ಕನ್ನಡದ ದೀಪವನ್ನು ಆರದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.
ಕನ್ನಡದಲ್ಲೇ ಶರಣರಿಗೆ ವಚನಗಳನ್ನು ಬರೆಸಿದ ಬಸವಣ್ಣನವರನ್ನು ವಿಶ್ವಗುರುವಾಗಿದ್ದಾರೆ. ಆದರೆ ಅವರನ್ನು ಮನೆಯ ಜಗುಲಿಗೆ ಸೀಮಿತಗೊಳಿಸಿದ್ದು ಸರಿಯಲ್ಲ. ಬಸವ ತತ್ವದ ಕುರಿತು ವಿಶ್ವವ್ಯಾಪಿ ಪ್ರಚಾರಗೊಳ್ಳಲು ಮಕ್ಕಳಿಗೆ ಹಾಗೂ ಬೇರೊಬ್ಬರಿಗೆ ಸಂಸ್ಕಾರ ಹೇಳಿಕೊಡುವ ಮೂಲಕ ಬಸವಣ್ಣನವರಿಗೆ ವಿಶ್ವ ಗುರುವಿನ ಸ್ಥಾನ ಕೊಡಲಿಕ್ಕೆ ಸಾಧ್ಯವಾಗುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಮುರುಘೇಂದ್ರ ಮಹಾಸ್ವಾಮಿಗಳು ಅವರು, ಜನರ ಶ್ರೇಯೋಭಿವೃದ್ಧಿಗಾಗಿ ಶ್ರೀಮಠವು ಸದಾ ಸಿದ್ಧವಾಗಿದೆ. ಜನರ ಕಲ್ಯಾಣವೇ ನಮ್ಮ ಕಲ್ಯಾಣವಾಗಿದೆ, ಧಾರ್ಮಿಕ ಸಂಸ್ಕಾರದೊಂದಿಗೆ ಶೈಕ್ಷಣಿಕ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಬೇಕು ಎಂದರು.
ಸಮ್ಮುಖ ವಹಿಸಿದ್ದ ಚಳಕಾಪೂರ ಮಠದ ಶ್ರೀಗಳು, ಪತ್ರಕರ್ತ ಸಂಘದ ಅಧ್ಯಕ್ಷ ಮಹಾದೇವ ವಡಗಾಂವ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಮಂಜುನಾಥ ಬಂಗರಗಿ, ಉಪಾಧ್ಯಕ್ಷ ಸೋನಾಬಾಯಿ ಹುಲ್ಲೆ, ಜೆಡಿಎಸ್ ಅಧ್ಯಕ್ಷ ಬಾಬುರಾವ್ ಸುಳ್ಳದ, ಸಿದ್ಧಯ್ಯಾ ಗುತ್ತೇದಾರ, ಹಣಮಂತ ಶೇರಿ, ಡಿ.ಎಂ.ಪಾಟೀಲ, ಜಗದೀಶ ಕೋರೆ ಸೇರಿದಂತೆ ಗ್ರಾಮದ ಶರಣ, ಶರಣಿಯರು ಹಾಗೂ ವಿವಿಧ ಭಾಗಗಳಿಂದ ಭಕ್ತಾದಿಗಳು ಪಾಳ್ಗೊಂಡು ಶ್ರೀಗಳಿಗೆ ಗುರುವಂದನೆ ಸಲ್ಲಿಸಿದರು.
ಯುವ ಮುಖಂಡ ಗಂಗಾಧರ ಕುಂಬಾರ ನಿರೂಪಿಸಿದರು. ಮಂಜುನಾಥ ಕಂದಗುಳೆ ಸ್ವಾಗತಿಸಿದರು. ಬಳಿಕ ಭಕ್ತಾದಿಗಳು ಶ್ರೀಗಳಿಗೆ ತೊಟ್ಟಿಲು ತೋಗಿ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬುವನ್ನು ಆಚರಿಸಿ ಭಕ್ತಿ ಗೀತೆಗಳನ್ನು ಹಾಡಿ ಹರಿಸಿ ಪ್ರಸಾದ ಸ್ವೀಕರಿಸಿದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…