ಬಿಸಿ ಬಿಸಿ ಸುದ್ದಿ

ಶರಣ ಭೋಗಯ್ಯ, ಅಲ್ಲಯ್ಯ, ಕಕ್ಕಯ್ಯ, ಕೇತಯ್ಯ, ಚೆನ್ನಯ್ಯ

ಹಿಂದಣ, ಮುಂದಣ ಕರ್ಮ ಅರಿಯದೆ ವರ್ತಮಾನದಲ್ಲಿ ಬದುಕಿದ ಶರಣರು ಕಾಯಕ- ದಾಸೋಹ ಪ್ರಜ್ಞೆಯ ಸಮ ಸಮಾಜ ನಿರ್ಮಿಸಲು ಬಯಸಿದವರು. ತವನಿಧಿಯಂತಿರುವ ವವನರಾಶಿ ಕೊಟ್ಟು ಇಂದಿಗೂ ನಮ್ಮೊಂದಿಗೆ ಬದುಕಿದವರು. ಇಂತಹ ಉದಾತ್ತ ಚಿಂತನೆಯ ಶರಣರ ಬದುಕು ಹಾಗೂ ಬೋಧನೆಗೆ ಸಾಮಾನ್ಯ ಜನರು ಇಂದಿಗೂ ತಮ್ಮ ಹೃದಯದಲ್ಲಿ ಮಹತ್ವ ಸ್ಥಾನ ಕೊಟ್ಟಿದ್ದಾರೆ.

ಕೆಂಭಾವಿ ಭೋಗಣ್ಣ: ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕೆಂಭಾವಿ ಆಗ ಪ್ರಮುಖ ಅಗ್ರಹಾರ ಕೇಂದ್ರವಾಗಿತ್ತು. ಈ ಮೊದಲು ಜಿನಪುರ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಇಲ್ಲಿ ಲಿಂಗನಿಷ್ಠೆಯ ಭೋಗಣ್ಣ ವಾಸಿಸುತ್ತಿದ್ದ. ಕುಹಕಿಗಳ ಕುಹಕತನದಿಂದಾಗಿ ಊರು ಬಿಟ್ಟು ಹೊರಟ ಈತನ ಹಿಂದೆ ಸ್ಥಾವರಲಿಂಗಗಳೆಲ್ಲವೂ ಬೆನ್ನು ಹತ್ತಿದವು.

ನಂತರ ಈತನ ಜೊತೆಯಲ್ಲೇ ಮತ್ತೆ ಊರಿಗೆ ಬಂದು ನೆಲೆಸಿದವು ಎಂಬ ಪ್ರತೀತಿಯನ್ನು ಇವರ ಬಗ್ಗೆ ಹೇಳಲಾಗುತ್ತಿದೆ. ಭೋಗಣ್ಣನ ಲಿಂಗನಿಷ್ಠೆ ಕೇಳಿದ ಸಿದ್ಧರಾಮ ಇಲ್ಲಿಗೆ ಬಂದಿರಬೇಕು. ಅಲ್ಲಿಯೇ ರೇವಣಸಿದ್ಧ, ಸಂಗಮನಾಥ ದೇವಾಲಯಗಳಿರುವುದನ್ನು ಕಾಣಬಹುದು. ದೇವಸ್ಥಾನದ ಸುತ್ತಲೂ ಕೆರೆಯ ನೀರು ಆವರಿಸಿದ್ದರಿಂದ ಹೂಳೆತ್ತುವಾಗ ಚಂದಿಮರಸನ ಕಾಲದ ಎರಡು ಮಹಡಿಯುಳ್ಳ ಕಟ್ಟಡಗಳಿರುವುದು ಪತ್ತೆಯಾಗಿದೆ.

ಹಾವಿನಾಳ ಕಲ್ಲಯ್ಯ: ಯಾದಗಿರಿ ಜಿಲ್ಲೆಯ ಸುರಪುರದ ದೇವಾಪುರ ಕ್ರಾಸ್‌ನಿಂದ ೧ ಕಿ. ಮೀ. ದೂರದ ಹೊಲದಲ್ಲಿ ಕಲ್ಲಿನಾಥ ದೇವಾಲಯವಿದ್ದು, ಹಾವಿನಾಳದ ಅಕ್ಕಸಾಲಿಗ ಕುಟುಂಬದ ಶಿವಣಯ್ಯ-ಸೋಮವ್ವೆ ದಂಪತಿಯ ಮಗ ಈ ಕಲ್ಲಯ್ಯ ಎಂದು ಹೇಳಲಾಗುತ್ತಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಾವಿನಾಳದವರು ಎಂದು ಕೂಡ ಹೇಳಲಾಗುತ್ತಿದ್ದು ಈ ಎರಡೂ ಕಡೆ ಒಂದೊಂದು ಐತಿಹ್ಯ ಉಳಿದುಕೊಂಡು ಬಂದಿರುವುದನ್ನು ಕಾಣಬಹುದು. ಅದೇರೀತಿಯಾಗಿ ಬಸವಕಲ್ಯಾಣ ತಾಲ್ಲೂಕಿನ ಚಿಟ್ಟಾ (ಕೆ) ಗ್ರಾಮದಲ್ಲಿ ಕಲ್ಲೇಶ್ವರ ದೇವಸ್ಥಾನವಿದೆ.

ಢೋಹರ ಕಕ್ಕಯ್ಯ: ಯಾದಗಿರಿ ಸುರಪುರ ತಾಲ್ಲೂಕಿನ ಕಕ್ಕೇರಿ ಹಾಗೂ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಕ್ಕೇರಿಗಳಲ್ಲಿ ಕಕ್ಕೇಶ್ವರ ದೇವಾಲಯ ಹಾಗೂ ಸ್ಮಾರಕಗಳಿವೆ. ಕಲ್ಯಾಣಕ್ರಾಂತಿಯ ನಂತರ ಬೆಳಗಾವಿ ಸಮೀಪ ನಡೆದ ಯುದ್ಧದಲ್ಲಿ ೧೧ ಜನ ಶರಣರು ಲಿಂಗೈಕ್ಯರಾಗುತ್ತಾರೆ. ಹೀಗಾಗಿ ಖಾನಾಪುರದ ಕಕ್ಕೇರಿಯಲ್ಲಿ ಕಕ್ಕಯ್ಯನ ಶಿಲಾಮೂರ್ತಿ ಇರುವ ದೇವಸ್ಥಾನವಿದೆ. ಇದು ಅವರ ಸಮಾಧಿಯಾಗಿರಬಹುದು. ಬಸವಕಲ್ಯಾಣದಿಂದ ೨೩ ಕಿ. ಮೀ. ದೂರದ ತೊಗಲೂರಿನಲ್ಲಿ ಡೋಹರ ಕಕ್ಕಯ್ಯನ ಮಂಥಣಿಗಳನ್ನು ಕಾಣಬಹುದು. ಈ ಉರಲ್ಲಿ ಹಳೆಯ ಕಟ್ಟೆಯಿದೆ. ಶರಣರು ಇಲ್ಲಿ ಅನುಭಾವ ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಕಕ್ಕಯ್ಯನವರ ಪತ್ನಿ ಬಿಷ್ಟಾದೇವಿ ದೇವಾಲಯ ಕೂಡ ಇದೆ.

ಏಲೇಶ್ವರದ ಕೇತಯ್ಯ: ಯಾದಗಿರಿಯಿಂದ ೨೭ ಕಿ.ಮೀ. ದೂರದ ಏಲೇಶ್ವರ ಗ್ರಾಮದಲ್ಲಿ ಏಲೇಶ್ವರ ಮಂದಿರವಿದ್ದು, ಅದೀಗ ಸಂಪೂರ್ಣ ಹಾಳಾಗಿ ಹೋಗಿದೆ. ಕೃಷಿ ಕಾಯಕದ ಶರಣ ಕೇತಯ್ಯನ ಸ್ಮಾರಕ ಕೂಡ ಇಲ್ಲಿದೆ. ಲಿಂಗ ನಿಷ್ಠೆಯುಳ್ಳ ಇವರನ್ನು ಪರೀಕ್ಷಿಸಲು ಇವರು ಬಿತ್ತುವ ಕಾಳುಗಳನ್ನು ಸುಟ್ಟರು. ದನ ಕರುಗಳನ್ನು ಕಳವು ಮಾಡಿದರು. ಆದರೆ ತನ್ನ ಲಿಂಗ ನಿಷ್ಠೆಯಿಂದಾಗಿ ಅವೆಲ್ಲವನ್ನು ಮರಳಿ ಪಡೆಯುತ್ತಿದ್ದ ಎಂಬ ಐತಿಹ್ಯ ಇವರ ಬಗ್ಗೆ ಹುಟ್ಟಿಕೊಂಡಿದೆ. ವಚನಕಾರ್ತಿ ರೆಮ್ಮವ್ವೆ ಕೂಡ ಇದೇ ಏಲ್ಹೇರಿಯವರು. ಇವರು ರಚಿಸಿದ ೨೩ ವಚನಗಳು ಸಿಕ್ಕಿವೆ.

ಮಾದಾರ ಚೆನ್ನಯ್ಯ: ಬಸವಕಲ್ಯಾಣದಿಂದ ೧೫ ಕಿ. ಮೀ. ದೂರ ಕ್ರಮಿಸಿದರೆ ಚಂಡಕಾಪುರ ಎಂಬ ಗ್ರಾಮವಿದ್ದು, ಅಲ್ಲಿ ರಾಮೇಶ್ವರ ಲಿಂಗ ದೇವಸ್ಥಾನವಿದೆ. ಗರ್ಭಗೃಹದಲ್ಲಿ ಲಿಂಗಗಳಿವೆ. ಸಮೀಪದಲ್ಲಿಯೇ ಅಮೃತಕುಂಡ ಇದೆ. ಶಿವನು ಮಾದಾರ ಚೆನ್ನಯ್ಯನ ಅಂಬಲಿಯ ಸವಿಯನ್ನುಂಡ ಜಾಗ ಇದಾಗಿದೆ. ಮೋರ್ಖಂಡಿಯಲ್ಲಿ ಪುರಾತಾನಕಾಲದ ಸಿದ್ಧರಾಮೇಶ್ವರ ದೇವಾಲಯವಿದ್ದು, ಅಲ್ಲಮ-ಸಿದ್ಧರಾಮೇಶ್ವರ ಭೇಟಿಯ ಸ್ಮಾರಕ ಇದಾಗಿರಬಹುದು.

ಗೋರ್ಟಾ-ಗೋರಕ್ಷ: ಮೂಲತಃ ಪಟ್ಟದಕಲ್ಲಿನ ನಾಥ ಪಂಥದ ಗೋರಕ್ಷ ಗೋರ್ಟಾ (ಬಿ) ಗ್ರಾಮದಲ್ಲಿ ಬಂದಿದ್ದರು. ತನ್ನ ಯೋಗ ಸಿದ್ಧಿಯಿಂದ ವಜ್ರಕಾಯನಾದ ಗೋರಕ್ಷನ ಜೊತೆ ಸಂವಾದ ನಡೆಸಿದ ಅಲ್ಲಮ ಗೋರಕ್ಷನನ್ನು ಲಿಂಗಭಕ್ತನನ್ನಾಗಿ ಪರಿವರ್ತಿಸಿದ್ದು, ಇಲ್ಲಿಯೇ ಎಂದು ಹೇಳಲಾಗುತ್ತಿದೆ. ಗೋರಕ್ಷನ ಉತ್ಸವಮೂರ್ತಿ, ಗೋಸಾಯಿಗಳ ಮಹಾದೇವ ಮಂದಿರ, ಪಟ್ಟದಕಲ್ಲಿನ ಮಲ್ಲಿಕಾರ್ಜುನ ದೇವಾಲಯಗಳಿವೆ.

ದಸರಯ್ಯ ಪತ್ರಿವನ: ಗೋರ್ಟಾದಿಂದ ಭಾಲ್ಕಿ ಕಡೆ ಹೋಗುವಾಗ ಅಪರೂಪದ ದಸರಯ್ಯ-ಮೋಟಮಲ್ಲ ಹೆಸರಿನ ಪತ್ರಿವನ ಕಾಣಿಸುತ್ತದೆ. ಲಿಂಗಪೂಜೆಗಾಗಿ ಪತ್ನಿ ವೀರಮ್ಮಳ ಜೊತೆ ದಿನವೂ ಕೆಳಗೆ ಬಿದ್ದ ಪತ್ರಿಯನ್ನು ಮಾತ್ರ ಕೊಂಡೊಯ್ಯುತ್ತಿದ್ದರು. ಇವರ ಪರೀಕ್ಷೆಗೆಂದು ಮೋಟಮಲ್ಲ ಎಂಬ ಢಕಾಯಿತ ಬಂದು ಕಿರುಕುಳ ಕೊಟ್ಟಾಗ ಕಳ್ಳನ ಮನಸ್ಸನ್ನೇ ಪರಿವರ್ತನೆ ಮಾಡಿದರು. ಶರಣರು ಮಾಡಿದ ಈ ಮೌನಕ್ರಾಂತಿಯಿಂದಾಗಿ ಜನರು ಸಹ ತಮ್ಮ ಮನಸ್ಸು ಪರಿವರ್ತನೆ ಮಾಡಿಕೊಂಡು ಶರಣ ಪಥದಲ್ಲಿ ಸಾಗಿದರು ಎಂಬುದು ಅವರ ಬಗೆಗೆ ಇರುವ ಈ ಐತಿಹ್ಯಗಳಿಂದ ತಿಳಿದು ಬರುತ್ತದೆ.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

1 hour ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

12 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

12 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

14 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

14 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

14 hours ago