ಷಟ್‌ಸ್ಥಲ ಸಾಧನೆ ನಮ್ಮ ಸರ್ವಾಂಗೀಣ ವ್ಯಕ್ತಿತ್ವವನ್ನು ರೂಪಿಸುತ್ತದೆ. ನಮ್ಮ ವ್ಯಕ್ತಿತ್ವದ ಬೆಳವಣೆಗೆಯಾಗಬೇಕಾದರೆ, ನಾವು ಗುರು-ಲಿಂಗ-ಜಂಗಮರ ಮೇಲೆ ಶ್ರದ್ಧೆಯನ್ನು ಇಡಬೇಕು. ಶ್ರದ್ಧೆ ವಿಶ್ವಾಸ ನಮ್ಮ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಷಟ್‌ಸ್ಥಲದಲ್ಲಿ ಮೊದಲನೇದಾದ ಭಕ್ತಸ್ಥಲ ನಮಗೆ ಶ್ರದ್ಧೆ, ನಂಬಿಗೆಯನ್ನು ಮಾಡಲು ಹೇಳುತ್ತದೆ. ನಮಗೆ ಧರ್ಮವನ್ನು ನೀಡಿರುವ ವಿಶ್ವಗುರು ಬಸವಣ್ಣನವರ ಮೇಲೆ ನಾವು ಅಪಾರವಾದಂತಹ ಶ್ರದ್ಧೆಯನ್ನು ಇಡಬೇಕು.
ನಮ್ಮ ಮನೆಯಲ್ಲಿ ಬಸವಣ್ಣನವರ ಭಾವಚಿತ್ರವನ್ನು ಎದ್ದು ಕಾಣುವಂತೆ ಇಡಬೇಕು. ನಮ್ಮ ದಿನನಿತ್ಯದ ವ್ಯವಹಾರದಲ್ಲಿ ಯಾವುದೇ ಬರವಣಿಗೆ ಮಾಡುವ ಮೊದಲು ಓಂಶ್ರೀಗುರುಬಸವಲಿಂಗಾಯನಮಃ ಎಂದು ಬರೆಯಬೇಕು. ಬಸವಣ್ಣ ಮತ್ತು ಶಿವ ಬೇರೆ ಅಲ್ಲ. ಅದಕ್ಕಾಗಿಯೇ ಶಿವನೇ ಬಸವ, ಬಸವಾ ಶಿವನೇ ಎಂದು ಹೇಳಲಾಗುತ್ತದೆ. ಷಣ್ಮುಖ ಶಿವಯೋಗಿಗಳು ತಮ್ಮ ಒಂದು ವಚನದಲ್ಲಿ ಹೀಗೆ ಹೇಳುತ್ತಾರೆ.
ಬೀಜದೊಳಗೆ ಅಂಕುರವಿಪ್ಪುದು, ಅಂಕುರದೊಳಗೆ ಬೀಜವಿರ್ಪುದು, ಅಂಕುರ ಬೀಜವೆಂದು ಹೆಸರು ಎರಡಾದಡೇನು? ಒಳಗಿರ್ಪ ಸಾರವು ಒಂದೇ ಆಗಿರ್ಪಂತೆ, ಬಸವಣ್ಣನೆ ಶಿವನು, ಶಿವನೇ ಬಸವಣ್ಣನು, ಬಸವಣ್ಣ-ಶಿವನೆಂಬ ಹೆಸರೆರಡಾದಡೇನು? ಅಖಂಡವಸ್ತು ಒಂದೇ ಆದ ಕಾರಣ ನಿಮ್ಮ ಅಖಂಡೇಶ್ವರನೆಂಬ ಹೆಸರಟ್ಟು ಕರೆದೆನಯ್ಯಾ ದೇವರ ದೇವಾ ಶಿವಾ ಬಸವಾ ಹೆಸರು ಹೆರಡಿದ್ದರೂ ಅಖಂಡ ವಸ್ತು ಒಂದೇಯಾಗಿದೆ ಎಂಬ ನಮ್ಮ ಧೃಡವಾದ ನಂಬಿಗೆ ಇರಬೇಕು.
ಧರ್ಮಗುರು ಬಸವಣ್ಣನವರ ನಂತರ ಧರ್ಮಗ್ರಂಥವಾದ ವಚನ ಸಾಹಿತ್ಯವನ್ನು ನಾವು ಅತ್ಯಂತ ಗೌರವದಿಂದ ಕಾಣಬೇಕು. ಕ್ರೈಸ್ತರಿಗೆ ಬೈಬಲ್ ಹೇಗೆ ಮುಖ್ಯವೊ, ಮುಸ್ಲಿಂರಿಗೆ ಖುರಾನ್ ಹೇಗೆ ಮುಖ್ಯವೊ ಹಾಗೆಯೇ ಲಿಂಗಾಯತರಾದ ನಮೆಲ್ಲರಿಗೆ ವಚನ ಸಾಹಿತ್ಯ ಮುಖ್ಯ. ವಚನ ಸಾಹಿತ್ಯ ನಮ್ಮ ಧರ್ಮದ ಸಂವಿಧಾನ. ನಾವು ನಮ್ಮ ಧರ್ಮದ ಸಂವಿಧಾನದ ಹಾಗೆ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಅದು ಅಪರಾಧವಾಗುತ್ತದೆ. ವಚನಗಳು ನಮಗೆ ಯಾವ ಮಾರ್ಗವನ್ನು ತೋರಿಸುತ್ತವೆಯೋ ಅದೇ ಮಾರ್ಗದಲ್ಲಿ ಮುನ್ನಡೆಯಬೇಕು. ಲಿಂಗಾಯತ ಧರ್ಮ ಸಂಸ್ಕೃತಿ, ಸಂಸ್ಕಾರ ಹಾಳಾಗಲು ಕಾರಣವೆಂದರೆ, ನಾವು ವಚನ ಸಾಹಿತ್ಯದಿಂದ ದೂರ ಸರಿದಿದ್ದೇವೆ. ಡಾ.ಫ.ಗು.ಹಳಕಟ್ಟಿಯವರು ನಮಗೆ ವಚನ ಸಾಹಿತ್ಯದ ಕನಕ್ಷನ್‌ವನ್ನು ಕೊಟ್ಟಿದ್ದಾರೆ. ಆ ವಚನಗಳ ಬೆಳಕಿನಲ್ಲಿ ನಾವು ಮುನ್ನಡೆದರೆ ನಮ್ಮ ಜೀವನ ಪ್ರಕಾಶಮಾನವಾಗುತ್ತದೆ.
ಲಿಂಗಾಯತ ಧರ್ಮದ ಜೀವಾಳವೆಂದರೆ, ಇಷ್ಟಲಿಂಗ. ಪ್ರತಿಯೊಬ್ಬರು ಸದ್ಗುರುವಿನ ಲಿಂಗಹಸ್ತದಿಂದ ಇಷ್ಟಲಿಂಗ ದೀಕ್ಷೆಯನ್ನು ಪಡೆದುಕೊಳ್ಳಬೇಕು. ಲಿಂಗದೀಕ್ಷೆ ಆದ ಬಳಿಕ ಆ ಲಿಂಗವೇ ಸರ್ವಸ್ವವೆಂದು ತಿಳಿದು ಶರಣಮಾರ್ಗದಲ್ಲಿ ಮುನ್ನಡೆಯಬೇಕು. ಲಿಂಗಪೂಜೆಯನ್ನು ಬಿಟ್ಟು ಅನ್ಯ ದೇವ ದೇವತೆಗಳ ಉಪಾಸನೆ ಮಾಡುವುದು ತಪ್ಪು.
ಬಸವಣ್ಣನವರು ಹೇಳಿದಂತೆ ಜಗದಗಲ, ಮಿಗಿಯಲ, ಮುಗಿಲಗಲವಾಗಿರುವ, ಅಗೋಚರ, ಅಪ್ರತಿಮ, ಅಪ್ರಮಾಣವಾಗಿರುವ ಪರಶಿವನು ನಮ್ಮ ಕರಸ್ಥಲದಲ್ಲಿ ಇಷ್ಟಲಿಂಗ ರೂಪದಲ್ಲಿ ಚುಳಕಾಗಿದ್ದಾನೆ. ಇಷ್ಟಲಿಂಗ ಉಪಾಸನೆಯೇ ವೈಶ್ವಿಕ ಪೂಜೆ ಮಾಡಿದಂತೆ. ಇಷ್ಟಲಿಂಗದ ಜೊತೆಗೆ ದೀಕ್ಷಾ ಗುರುಗಳನ್ನು ಗೌರವಿಸಬೇಕು. ಧರ್ಮಗುರು ಬಸವಣ್ಣನವರ ಲಿಂಗಾಯತ ಮಾರ್ಗವನ್ನು ಹೇಳಿಕೊಡುವ ಗುರು-ಜಂಗಮರಿಗೆ ನಾವು ಶ್ರದ್ಧೆ, ನಂಬಿಕೆಯಿಂದ ನಡೆದುಕೊಳ್ಳಬೇಕು.
ಲಿಂಗಾಯತ ಧರ್ಮದಲ್ಲಿ ಅರಿವು ಆಚಾರ ಅನುಭಾವ ಇದ್ದವರು ಯಾರಬೇಕಾದರೂ ಗುರು-ಜಂಗಮ ಆಗಬಹುದು. ಅಂತಹ ವ್ಯಕ್ತಿತ್ವವನ್ನು ಹೊಂದಿರುವ ಗುರು-ಜಂಗಮರ ಮಾರ್ಗದರ್ಶನದಲ್ಲಿ ಬಸವಪಥೀಕರಾಗಬೇಕು. ಗುರು-ಲಿಂಗ-ಜಂಗಮರ ಮೇಲೆ ಶ್ರದ್ಧೆ ಜೊತೆಗೆ ನಮ್ಮಲ್ಲಿ ವಿನಯ, ಪ್ರೀತಿ, ಭಾವಶುದ್ಧಿ, ಸಮತೆ ಮುಂತಾದ ಸದ್ಗುಣಗಳನ್ನು ಅಳವಡಿಸಿಕೊಂಡಾಂತನೆ ಭಕ್ತಸ್ಥಲವನ್ನು ಅಲಂಕರಿಸುತ್ತಾನೆ.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…