ಆಳಂದ: ಕಳೆದ ಮೂರು ದಿನಗಳಿಂದಲೂ ಮೊಡ ಮುಸಕಿದ ವಾತಾವರಣ ಹಾಗೂ ರವಿವಾರ ಬೆಳಗಿನ ಜಾವ ಸುರಿದ ಧಾರಾಕಾರ ಮಳೆಯಿಂದಾಗಿ ಹಲವಡೆ ಕಳ್ಳ, ಕೊಳ್ಳಗಳಲ್ಲಿ ನೀರು ಉಕ್ಕಿ ಹರಿದಿವೆ.
ಅಲ್ಲದೆ, ಆಳಂದ ಹೊರವಲಯದ ತಡಕಲ್ ರಸ್ತೆ, ದೇಗಾಂವ, ಸಾಲೇಗಾಂವ ಗ್ರಾಮ ಸಂಪರ್ಕ ರಸ್ತೆ ಹಾಗೂ ಸೇತುವೆಯಲ್ಲಿ ನೀರಿನ ಪ್ರಹವಾದಿಂದ ಸಂಚಾರ ಕಡಿತೊಂಡು ಕೆಲಕಾಲ ಪ್ರಯಾಣಕ್ಕೆ ನಾಗರಿಕರು ಪರದಾಡಿದ್ದಾರೆ.
ತಾಲೂಕಿನಾದ್ಯಂತ ರಾಶಿಗೆ ಬಂದ ಅಲ್ಪಾವಧಿ ಬೆಳೆ ಹೆಸರು, ಉದ್ದು ಮಳೆಯ ನಿರಂತರ ಅಡ್ಡಿಯಿಂದಾಗಿ ಹೊಲದಲ್ಲೇ ರಾಶಿಗೆ ಬಂದ ಫಸಲು ಹಾನಿಯಾಗುತ್ತಿರುವುದು ರೈತರ ನಿದ್ದೆಗೆಡಿಸಿದೆ. ಸತತ ಮಳೆಯಿಂದ ತೆಗ್ಗು ಪ್ರದೇಶದ ಜಮೀನುಗಳಲ್ಲಿ ಮಳೆ ನೀರು ನಿಂತುಕೊಂಡಿವೆ. ಹಲವಡೆ ಕರಿನೀರು ಹರಿಯುತ್ತಿದ್ದು, ಇದರಿಂದ ಬೆಳೆದ ನಿಂತ ತೊಗರಿ, ಸೋಯಾಭಿನ್ ಸೂರ್ಯಕಾಂತಿ ಬೆಳೆಗಳು ಸಹ ಹಾನಿಯಾಗುವ ಆತಂಕ ಎದುರಾಗಿದೆ.
ರವಿವಾರ ತಾಲೂಕಿನ ಏಳು ಮಳೆಮಾಪನ ಕೇಂದ್ರಗಳ ಪೈಕಿ ಆಳಂದ, ಕೊರಳ್ಳಿ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾದರೆ, ನಿಂಬರಗಾ ಮತ್ತು ಖಜೂರಿ ವಲಯದಲ್ಲಿ ಮಧ್ಯಮ ಸುರಿದಿದೆ. ನರೋಣಾ, ಸರಸಂಬಾ ವಲಯದದಲ್ಲಿ ಮಳೆ ಸಾಧಾರವಾಗಿ ಕೂಡಿದೆ. ಕಳೆದ ೧೦ ದಿನಗಳಿಂದಲೂ ಮಳೆಯ ಧಾರಾಕಾರ ಹಾಗೂ ಸಾಧಾರಣದ ನಡುವೆ ಕೃಷಿ ಯಾವ ಕಾರ್ಯವೂ ನಡೆಯದಂತಾಗಿ ಕೃಷಿ ಕಾರ್ಯಕ್ಕೆ ಅಡಿಯಾಗಿದೆ ಎಂದು ರೈತರು ಹೇಳಿಕೊಂಡಿದ್ದಾರೆ.
ಮಳೆ ವಿವರ: ಆಳಂದ ವಲಯ ೯೬.೪೦ ಮಿ.ಮೀ, ನಿಂಬರಗಾ ೪೩ ಮಿ.ಮೀ, ಕೊರಳ್ಳಿ ೯೫.೫೦ ಮಿ.ಮೀ, ಮಾದನಹಿಪ್ಪರಗಾ ೨೨ ಮಿ.ಮೀ, ಸರಸಂಬಾ ೨೯ ಮಿ.ಮೀ, ನರೋಣಾ ೧೨ ಮಿ.ಮೀ, ಖಜೂರಿ ೫೨ ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ರಸ್ತೆಗಳ ಅವ್ಯವಸ್ಥೆ: ಮಳೆಯ ಆರಂಭಗೊಂಡಾಗಿನಿಂದಲೂ ಗ್ರಾಮೀಣ ಭಾಗದ ಅಲ್ಲಲ್ಲಿನ ಸಂಪರ್ಕ ರಸ್ತೆಗಳು ಕಿತ್ತಿಹೋಗಿವೆ. ತಾಲೂಕಿನ ಭಾಗದ ಬೆಣ್ಣೆಶಿರೂರ ಮತ್ತು ಕುಲಾಲಿ ನಡುವಿನ ರಸ್ತೆ ಸಂಪರ್ಕವೂ ಕಡಿತೊಂಡಿದೆ ಎಂದು ವರದಿಯಾಗಿದೆ. ಇದಕ್ಕೆ ಹೊರತಲ್ಲ ಎನ್ನುವಂತೆ ನಿಂಬರಗಾ, ನೆಲ್ಲೂರು, ದಣ್ಣೂ, ಮತ್ತು ಕೊಡಲಹಂಗರಗಾ ಎಲೆನಾವದಗಿ ರಸ್ತೆಗಳ ತೆಗ್ಗು ದಿನ್ಯೆಗಳಿಂದ ಕೂಡಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಕೆಲವು ತಿಂಗಳ ಹಿಂದೆಯಷ್ಟೇ ನಿರ್ಮಿಸಿದ ಆಳಂದ ಚೆಕ್‌ಪೋಸ್ಟ್‌ನಿಂದ ಕೊರಳ್ಳಿ ಮಾರ್ಗದ ರಸ್ತೆ, ಜವಳಗಾ ಜೆ, ಝಳಕಿ, ಹೊದಲೂರ, ದೇವಂತಗಿ, ಸಾಲೇಗಾಂವ ಅನೇಕ ರಸ್ತೆಗಳ ಕಾಮಗಾರಿ ಹದಗೆಟ್ಟಿರುವುದು ಗುಣಮಟ್ಟದ ಕಾಮಗಾರಿಗೆ ಕೈಗನ್ನಡಿಯಾಗಿದೆ.
ಕಳೆಪೆ ಕಾಮಗಾರಿ ಆರೋಪ: ಕಡೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಮತ್ತು ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ ಅಡಿಯಲ್ಲಿ ಕೈಗೊಂಡ ಹಲವು ರಸ್ತೆಗಳು ಕಳೆಪ್ಪ ಮಟ್ಟದಿಂದ ಕೈಗೊಂಡಿದ್ದರಿಂದ ಕೆಲವೆ ತಿಂಗಳಲ್ಲಿ ಮಳೆಯಲ್ಲಿ ಮತ್ತಷ್ಟು ಹಾನಿಗೀಡಾಗಿ ವಾಹನ ಹಾಗೂ ಜನರ ಸಂಚಾರಕ್ಕೆ ಮತ್ತೆ ತೊಂದರೆ ಪಡುವಂತಾಗಿದೆ. ಈ ಕುರಿತು ಸಮಗ್ರವಾಗಿ ತನಿಖೆ ಕೈಗೊಂಡು ತಪ್ಪಿತಸ್ಥರ ಮೇಲೆ ಹಾಗೂ ಭಾಗಿಯಾದವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಸಿಪಿಐ ಜಿಲ್ಲಾ ಮುಖಂಡ ಮೌಲಾ ಮುಲ್ಲಾ ಒತ್ತಾಯಿಸಿದ್ದಾರೆ.
ಅಮರ್ಜಾ ಗೇಟ್‌ನಿಂದ ನೀರು: ಅಮರ್ಜಾ ಅಣೆಕಟ್ಟೆಗೆ ಒಳಹರಿವು ನೀರಿನಿಂದಾಗಿ ಐದು ಗೇಟಗಳ ಮೂಲಕ ಸುಮಾರು ೫೦೦ ಕ್ಯೂಸೆಕ್ ನೀರು ಹರಿಬಿಡಲಾಗಿತ್ತಾದರು. ಮಧ್ಯದಲ್ಲಿ ಒಳ ಹರಿವು ಕಡಿಮೆಯಾದ ಮೇಲೆ ಎರಡ್ಮೂದಿನಗಳ ಕಾಲ ಗೇಟ್ ಮುಚ್ಚಲಾಗಿತ್ತು. ಆದರೆ ರವಿವಾರ ಕಳೆದ ಅ. ೨೯ರಂದು ಒಂದು ಗೇಟ ಮೂಲಕ ನೀರು ಬಿಡಲಾಗಿತ್ತು. ಆದರೆ ಹರಿವು ಹೆಚ್ಚಾಗಿದ್ದರಿಂದ ಅ.೩೦ರಿಂದ ಸೆ. ೧ರವರೆಗೆ ೫೦೦ ಕ್ಯೂಸೆಕ್ ನೀರು ನಿತ್ಯ ಬಿಟ್ಟು ಬಳಿಕ ಹರಿವು ಕುಗ್ಗಿದ್ದರಿಂದ ನಾಲ್ಕು ದಿನಗಳ ಕಾಲ ಗೇಟ್ ನೀರು ಸ್ಥಗಿತಗೊಳಿಸಲಾಗಿತ್ತು.
ಆದರೆ, ರವಿವಾರ ಅಣೆಕಟ್ಟೆಯ ಮೇಲ್ಭಾಗದಲ್ಲಿ ಹರಿವು ಹೆಚ್ಚಾಗಿದ್ದರಿಂದ ಸೆ. ೫ರಂದು ಬೆಳಗಿನ ಜಾವ ಅಣೆಕಟ್ಟೆಯ ಐದು ಗೇಟಗಳ ಮೂಲ ಮತ್ತೆ ೫೦೦ಕ್ಯೂಸೆಕ್ ನೀರು ಹರಿಬಿಡಲಾಗಿದೆ ಎಂದು ನೀರಾವರಿ ನಿಗಮದ ಅಣೆಕಟ್ಟೆಯ ಸಹಾಯಕ ಇಂಜಿನಿರ್ ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.
ಮಳೆಯ ಹೀಗೆ ಮುಂದುವರೆದರೆ ನೀರಿನ ಹರಿವು ಹೆಚ್ಚಾದರೆ ನದಿ ದಂಡೆಯಲ್ಲಿ ಅಪಾಯವಿರುತ್ತದೆ. ಈ ಭಾಗದ ಸಾರ್ವಜನಿಕರು, ಜಾನುವಾರುಗಳಿಗೆ ನದಿಗಿಳಿದೆ ಎಚ್ಚರಿಕೆಯಿಂದ ಮುಂಜಾಗೃತೆ ಕ್ರಮವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…