ಭಾಲ್ಕಿ: ಬಸವಾದಿ ಶರಣರ ಅನುಭಾವದ ಮಂಥನದಿಂದ ಹೊರಹೊಮ್ಮಿದ ನುಡಿಮುತ್ತುಗಳೆಂದರೆ, ವಚನಗಳು. ವಚನಗಳಲ್ಲಿ ಜೀವನ ಮೌಲ್ಯಗಳು ಅಡಗಿವೆ. ವಚನಗಳು ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿವೆ. ಶರಣರ ವಚನಗಳು ಜನಸಾಮಾನ್ಯರ ಹೃದಯ ತಟ್ಟೆಗೆ ನೀಡುವ ಸದುದ್ದೇಶವನ್ನು ಹೊಂದಿದ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ತಮ್ಮದೇ ಆದ ವಿಶಿಷ್ಟ್ಯ ಶೈಲಿಯಲ್ಲಿ ಸರಳ, ಸಹಜವಾದ ಭಾಷೆಯಲ್ಲಿ ವಚನಗಳಿಗೆ ಭಾವಾರ್ಥವನ್ನು ಬರೆದಿದ್ದಾರೆ. ಅವರ ಅನುಭಾವದ ಬರವಣಿಗೆಯಿಂದ ವಚನ ಸ್ಫೂರ್ತಿ, ವಚನ ಪರಿಮಳ ಮತ್ತು ವಚನ ವಚನ ಸಂಜೀವಿನಿ ಮೂರು ಗ್ರಂಥಗಳು ಪ್ರಕಟಗೊಂಡಿವೆ. ಈ ಮೂರು ಗ್ರಂಥಗಳ ಲೋಕಾರ್ಪಣೆಯನ್ನು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯಸನ್ನಿಧಾನದಲ್ಲಿ ಮಾಡಲಾಯಿತು.
ಸಾನಿಧ್ಯ ವಹಿಸಿದ ಪೂಜ್ಯರು ವಚನಗಳ ಹಿರಿಮೆಯನ್ನು ಹೇಳಿದರು. ವಚನಗಳು ನಮ್ಮ ನಿಜವಾದ ಸಂಪತ್ತು. ವಚನಗಳೇ ನಮಗೆ ದಾರಿದೀಪ. ನಾವು ಶರಣರ ದರ್ಶನವನ್ನು ವಚನಗಳಲ್ಲಿ ಮಾಡಬೇಕು. ದಿನನಿತ್ಯ ವಚನಪಠಣ ಮಾಡುವ ಮೂಲಕ ಬಸವತತ್ವವನ್ನು ಮೈಗೂಡಿಸಿಕೊಳ್ಳಬೇಕು.
ವಚನಗಳಲ್ಲಿ ನಮ್ಮ ಜೀವನದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದೆ. ನಮ್ಮ ಜೀವನ ಭೌತಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಶ್ರೀಮಂತವಾಗಬೇಕಾದರೆ ನಾವು ಶರಣರ ವಚನಗಳಿಗೆ ಮೊರೆಹೋಗಬೇಕು. ವಚನಗಳು ನಮ್ಮ ಜೀವನವನ್ನು ಎತ್ತರ ಎತ್ತರಕ್ಕೆ ಒಯ್ಯುತ್ತವೆ. ನಮ್ಮ ಜೀವನ ಭವ್ಯದಿವ್ಯವಾಗುತ್ತದೆ ಎಂದು ನುಡಿದರು.
ಶರಣ ಜೀವಿಗಳಾದ ವಿಶ್ವನಾಥಪ್ಪ ಬಿರಾದಾರ, ಶರಣ ಸೋಮನಾಥಪ್ಪ ಅಷ್ಟೂರೆ, ಶರಣ ರಾಜಶೇಖರ ಅಷ್ಟೂರೆ ಇವರ ಹಸ್ತದಿಂದ ಮೂರು ಕೃತಿಗಳ ಲೋಕಾರ್ಪಣೆ ಜರುಗಿತು. ದೀಪಕ ಥಮಕೆ ನಿರೂಪಿಸಿದರು. ರಾಜು ಜುಬರೆ ಗ್ರಂಥ ಪರಿಚಯ ಮಾಡಿಕೊಟ್ಟರು. ಅಕ್ಕನಬಳಗದಿಂದ ವಚನ ಸಂಗೀತವನ್ನು ನಡೆಯಿತು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…