ಬಿಸಿ ಬಿಸಿ ಸುದ್ದಿ

ಬದುಕಿನಲ್ಲಿ ಸಂಗ ಬಹಳ ಮಹತ್ವದ ಪಾತ್ರವಹಿಸುತ್ತದೆ: ವಚನ ದರ್ಶನ ಪ್ರವಚನ

ಬದುಕಿನಲ್ಲಿ ಸಂಗ ಬಹಳ ಮಹತ್ವದ ಪಾತ್ರವಹಿಸುತ್ತದೆ. ಮಳೆನೀರು ಬರುವಾಗ ಸ್ವಚ್ಚವಾಗಿರುತ್ತದೆ. ಮಳೆನೀರಿನಷ್ಟು ಸ್ವಚ್ಛ ಯಾವುದು ಇರುವುದಿಲ್ಲ. ಕುಡಿಯಲಿಕ್ಕೆ ಯೋಗ್ಯ. ಭೂಮಿಗೆ ಬಿದ್ದಾಗ ಭೂಮಿಯ ಸಂಗದಿಂದ ತನ್ನ ಸ್ವಚ್ಛತೆ ಕಳೆದುಕೊಳ್ಳುತ್ತದೆ. ಚರಂಡಿಯೊಳಗೆ ಬಿದ್ದಾಗ ಚರಂಡಿಯಾಗುತ್ತದೆ. ಸದ್ಗುರುವಿನ ಪಾದದ ಮೇಲೆ ಬಿದ್ದಾಗ ಪಾದೋದಕವಾಗುತ್ತದೆ. ನಾವು ಜನ್ಮತಾಳಿದಾಗ ಮಳೆನೀರಿನಂತೆ ಸ್ವಚ್ಛ ಪವಿತ್ರ ಹೃದಯಶುದ್ಧಿ ಇರುತ್ತದೆ. ಯಾರು ಎತ್ತಿಕೊಳ್ಳುತ್ತಾರೋ ಅವರೆಲ್ಲರ ಹತ್ತಿರ ಮಗು ಹೋಗುತ್ತದೆ. ಬೆಳೆದು ದೊಡ್ಡದಾದಂತೆಲ್ಲ ನನ್ನವರು ಹೊರಗಿನವರು ನಾನು ಈ ಜಾತಿಯವ ಆ ಜಾತಿಗೆ ದ್ವೇಷ ಮಾಡಬೇಕು. ಒಂದೊಂದೇ ಗುಣಗಳು ಅಂಟಿಕೊಳ್ಳಲು ಪ್ರಾರಂಭವಾಗುತ್ತದೆ. ಸಂಗ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಒಳ್ಳೆಯವರ ಸಂಗ ಸಿಕ್ಕರೆ ಒಳ್ಳೆಯವರಾಗುತ್ತೇವೆ. ದುರ್ಜನರ ಸಂಗ ಸಿಕ್ಕರೆ ದುರ್ಜನರಾಗುವ ಪ್ರಸಂಗ ಬರುತ್ತದೆ. ತಿಳುವಳಿಕೆ ಬಂದ ಮೇಲೆ ಅವನು ಎಲ್ಲಿ ಕೂಡುತ್ತಾನೆ. ಯಾರ ಜೊತೆ ಇರುತ್ತಾನೆ. ಸೂಕ್ಷ್ಮವಾಗಿ ಗಮನಿಸಿದಾಗ ಎಂಥವನು ಎಂದು ತಿಳಿಯುತ್ತದೆ.

ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಸಂಗದ ಮಹತ್ವವನ್ನು ಹೇಳುತ್ತಾರೆ. ಮರ ಮರ ಮಥನದಿಂದ ಅಗ್ನಿಹುಟ್ಟಿ ಆ ಮರನೆಲ್ಲವ ಸುಡದಿಪ್ಪುದೆ? ಕಟ್ಟಿಗೆಯಲ್ಲಿ ಬೆಂಕಿ ಇರುತ್ತದೆ. ಕಟ್ಟಿಗೆ ಕಟ್ಟಿಗೆ ಘರ್ಷಣೆ ಆಗಿ ಮರಗಳು ಸುಡುತ್ತವೆ. ಅರಣ್ಯದಲ್ಲಿ ಹಾಗೆ ಆಗುತ್ತಿರುತ್ತದೆ. ಹೋಮ ಯಜ್ಞಕ್ಕೆ ಹೊತ್ತಿಸುವಾಗ ಕಡ್ಡಿಪೆಟ್ಟಿಗೆ ಬಳಸುವುದಿಲ್ಲ. ಎರಡು ಕಟ್ಟಿಗೆ ತುಂಡು ತಂದು ಒಂದರ ಮೇಲೆ ಒಂದು ಇಟ್ಟು ಗರ ಗರ ತಿರುಗಿಸುತ್ತಾರೆ. ಬಗ್ ಎಂದು ಬೆಂಕಿ ಹೊತ್ತಿಕೊಳ್ಳುತ್ತದೆ.

ನಾವು ಸಕ್ಕರೆ ಕಾರ್ಖಾನೆ ಉದ್ಘಾಟನೆ ಹೋದಾಗಲೂ ಕಟ್ಟಿಗೆ ಕಟ್ಟಿಗೆ ಘರ್ಷಣೆ ಮಾಡಿ ಬೆಂಕಿ ತಯಾರಿಸಿ ನಮ್ಮ ಕೈಯೊಳಗೆ ಕೊಡುತ್ತಾರೆ. ಅದನ್ನು ನಾವು ಬಾಯಲರ್ ಒಲೆಯಲ್ಲಿ ಇಡುತ್ತೇವೆ. ಹೇಳುವ ತಾತ್ಪರ್ಯವೆಂದರೆ ಕಟ್ಟಿಗೆ ಕಟ್ಟಿಗೆ ತಿಕ್ಕಿದಾಗ ಬೆಂಕಿ ಉತ್ಪನ್ನವಾಗಿ ಆ ಕಟ್ಟಿಗೆಯು ನಾಶವಾಗುತ್ತದೆ. ಬೂದಿಯಾಗುತ್ತದೆ. ಬೂದಿಯಾದ ನಂತರ ಯಾವ ಕಟ್ಟಿಗೆ ಬೂದಿ ಎಂಬುದು ಗೊತ್ತಾಗುವುದಿಲ್ಲ.

ಮಹಾನುಭಾವರ ಸಂಗದಿಂದ ಜ್ಞಾನಾಗ್ನಿ ಹುಟ್ಟಿ ಎನ್ನ ತನುಗುಣವೆಲ್ಲವ ಸುಡದಿಪ್ಪುದೆ? ಮರ ಮರಗಳ ಘರ್ಷಣೆಯಿಂದ ಯಾವ ರೀತಿ ಅಗ್ನಿಹುಟ್ಟಿ ಮರವೆಲ್ಲವು ಸುಟ್ಟು ಬೂದಿಯಾಗುತ್ತವೆಯೋ ಅದೇ ರೀತಿ ಮಹಾನುಭಾವಿಗಳ ಸಂಗದಿಂದ ಜ್ಞಾನಾಗ್ನಿ ಹುಟ್ಟುತ್ತದೆ. ಅನುಭಾವಿಗಳು ಎಂದರೆ ಅರಿವು ಆಚಾರ ಅನುಭಾವಗಳ ಸಂಗಮವಾಗಿರುತ್ತಾರೆ. ನಡೆ-ನುಡಿ ಒಂದಾಗಿರುತ್ತದೆ. ತನು-ಮನ-ಭಾವ ಪರಿಶುದ್ಧವಾಗಿರುತ್ತಾರೆ.

ನಡೆಲಿಂಗ ನುಡಿಲಿಂಗವಾಗಿರುತ್ತಾರೆ. ಸರ್ವಾಂಗವೂ ಲಿಂಗಗುಣಗಳು ಮಾಡಿಕೊಂಡಿರುತ್ತಾರೆ. ಅಂಥ ಮಹಾನುಭಾವಿಗಳ ಸಂಗದಿಂದ ನಾವು ಅನುಭಾವಿಗಳೇ ಆಗಿರುತ್ತೇವೆ. ನಮ್ಮ ತನುಗುಣವೆಲ್ಲವೂ ನಾಶವಾಗುತ್ತದೆ. ತನುಗುಣವೆಂದರೆ ದೇಹಭಾವ ಇದ್ದವ. ನಾವು ಇಂತಹ ಶ್ರೇಷ್ಠ ಜಾತಿಯವ, ನಾನು ಇಂತಹ ಶ್ರೇಷ್ಠ ಕುಲದವ, ನಾನು ಶ್ರೀಮಂತ, ನಾನು ದೊಡ್ಡ ಅಧಿಕಾರಿ, ನಾನು ದೊಡ್ಡ ಮಂತ್ರಿ ಎಂಬ ಅಹಂ ಇರುತ್ತದೋ ಇವೆಲ್ಲ ಅಭಿಮಾನವೇ ದೇಹಭಾವ ಅಳಿದಾಗ ಶಿವಭಾವ ಬರುತ್ತದೆ. ಮನದ ಗುಣವೆಂದರೆ ಚಂಚಲತೆ, ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಇತ್ಯಾದಿ ಈ ಎಲ್ಲ ಗುಣವ ನಾಶ ಮಾಡುವ ಶಕ್ತಿ ಮಹಾನುಭಾವಿಗಳಿಗೆ ಇರುತ್ತದೆ. ಮಹಾನುಭಾವಿಗಳೆಂದರೆ ಶರಣರು ಎಂದು ತಿಳಿಯಬೇಕು.

ಶರಣರ ಸಂಗದಿಂದ ತನುವಿನ ಗುಣವೆಲ್ಲವೂ ಅಳಿದು ಲಿಂಗತನುವಾಯಿತ್ತು. ಮನದ ಗುಣವ ಅಳಿದು ಲಿಂಗಮನವಾಗುತ್ತದೆ. ಜೀವಭಾವ ಹೋಗಿ ಶಿವಭಾವ ಶಿವಪ್ರಜ್ಞೆ ಬರುತ್ತದೆ. ಅನುಭಾವಿಗಳ ಶರಣರ ಸಂಗದಿಂದ ಇವೆಲ್ಲ ನಾಶವಾಗಿ ಅವರು ಶರಣರೇ ಆಗುತ್ತಾರೆ. ಉರಿಯೊಳಗೆ ಎಂಥ ಹಸಿ ಕಟ್ಟಿಗೆ ಹಾಕಿದರೂ ಅದು ತನ್ನಂತೆ ಮಾಡಿಕೊಳ್ಳುತ್ತದೆ. ಎಂತಹ ದುರ್ಗುಣಿ ಮನುಷ್ಯನು ಸಹ ಅನುಭಾವಿಗಳ ಸಂಗದಿಂದ ಖಂಡಿತವಾಗಿ ಸದ್ಗುಣಿಯಾಗುತ್ತಾನೆ.

ಶರಣರ ಸಂಗದಿಂದ ನಾವು ಶರಣರಾಗುತ್ತೇವೆ. ಅನುಭಾವಿಗಳ ಶರಣರ ಸಂಗ ಬಹಳ ಮಹತ್ವದ್ದು. ಅದಕ್ಕೆ ಬಸವಣ್ಣನವರು ಮಹಾನುಭಾವರ ತೋರಿಸು ಎಂದಿದ್ದಾರೆ. ಸಾವಿರಾರು ಅನುಭಾವಿಗಳ ನಿರ್ಮಾಣ ಮಾಡಿ ಅನುಭವಮಂಟಪದಲ್ಲಿ ದಿನಾಲು ಶರಣರ ಸಂಗ ನಡೆಯುತ್ತಿತ್ತು. ಆ ಶರಣರ ಸಂಗದಲ್ಲಿ ಬಂದವರೆಲ್ಲ ಶರಣರೇ ಆಗುತ್ತಿದ್ದರು. ಶರಣರಲ್ಲಿ ಆಗಾಗ್ಗೆ ಕೂತು ನಮ್ಮ ತನು-ಮನ-ಭಾವ ಸ್ವಚ್ಛ ಮಾಡಿಕೊಂಡು ಶರಣ ಮಾರ್ಗದಲ್ಲಿ ಬಸವಮಾರ್ಗದಲ್ಲಿ ನಡೆಯೋಣ.

emedialine

Recent Posts

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

50 mins ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

1 hour ago

ಖಾಸಗಿ ಶಾಲೆಗಳಲ್ಲಿ ಡೊನೆಷನ್ ಹೆಚ್ಚಳ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೆಚ್ಚಿನ ಶುಲ್ಕ ಪಡೆಯುವ ಖಾಸಗಿ ಶಾಲೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ…

1 hour ago

ಅಭಾ ವೀರಶೈವ ಲಿಂಗಾಯತ ಮಹಾಸಭಾ ಚುನಾಣೆಗೆ 22 ನಾಮಪತ್ರ ಸಲ್ಲಿಕೆ

ಸುರಪುರ: ಅಖಿಲ ಭಾರತ ವೀರಶೈವ ಲಿಂಗಾಯತ ವiಬಾಸಭಾ ಸುರಪುರ ತಾಲೂಕು ಘಟಕಕ್ಕೆ ಅಧ್ಯಕ್ಷ ಮತ್ತು ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು,ಒಟ್ಟು…

1 hour ago

ಡೆಂಘೀ ಜ್ವರದ ಲಕ್ಷಣ ಕಂಡುಬಂದಲ್ಲಿ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಳ್ಳಿ; ಡಾ.ಆರ್.ವಿ ನಾಯಕ

ಸುರಪುರ: ತಾಲೂಕಿನ ಜನರು ಯಾರಿಗಾದರೂ ವಿಪರೀತ ಜ್ವರ,ತಲೆ ನೋವು ಕಾಣಿಸಿಕೊಂಡಲ್ಲಿ ತಕ್ಷಣ ಅಂತವರು ಹತ್ತಿರದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ…

2 hours ago

ಕೊಲೆ ಆರೋಪಿಗಳನ್ನು ಬಂಧಿಸಲು ಪೊಲೀಸರು ಮುಂದಾಗಬೇಕು

ಸುರಪುರ: ತಿಪ್ಪನಹಳ್ಳಿ ಗ್ರಾಮದಲ್ಲಿ ಏಪ್ರಿಲ್ 16 ರಂದು ರಾತ್ರಿ ಭಾಗಪ್ಪ ಲಕ್ಷ್ಮೀಪುರ ಎನ್ನುವ ಸಾವು ಅಸ್ವಾಭಾವಿಕ ಸಾವಲ್ಲ ಅದು ಕೊಲೆಯಾಗಿದ್ದು,ಕೂಡಲೇ…

2 hours ago